ವಿದ್ವತ್ ಮೇಲಿನ ಹಲ್ಲೆ ಉದ್ದೇಶಪೂರ್ವಕ, ನಿರ್ಭಯ ಮಾದರಿಯಲ್ಲಿದೆ: ವಿಶೇಷ ಅಭಿಯೋಜಕ

ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಗೆ ನಗರ ಸೆಷೆನ್ಸ್ ನ್ಯಾಯಾಲಯ ಜಾಮೀನು ...
ಮೊಹಮದ್ ನಲಪಾಡ್ (ಸಂಗ್ರಹ ಚಿತ್ರ)
ಮೊಹಮದ್ ನಲಪಾಡ್ (ಸಂಗ್ರಹ ಚಿತ್ರ)
ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಗೆ ನಗರ ಸೆಷೆನ್ಸ್ ನ್ಯಾಯಾಲಯ ಜಾಮೀನು ಅರ್ಜಿಯನ್ನು ಮೂಂದೂಡಿದೆ. ಪ್ರಕರಣದ ಪ್ರಮುಖ ಆರೋಪಿ ಮೊಹಮದ್ ನಲಪಾಡ್ ಗೆ ಜಾಮೀನು ನೀಡದಂತೆ ವಿಶೇಷ ಅಭಿಯೋಜಕ ಶ್ಯಾಮಸುಂದರ್ ಆಕ್ಷೇಪಣೆ ಸಲ್ಲಿಸಿದ್ದಾರೆ.
ವಿದ್ವತ್ ಮೇಲಿನ ಹಲ್ಲೆ ಉದ್ದೇಶಪೂರ್ವಕವಾದದ್ದು, ನಿರ್ಭಯ ಪ್ರಕರಣಕ್ಕೆ ಹೋಲಿಕೆಯಾಗುತ್ತದೆ, ಮೊದಲು ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಬಾಟಲ್ ಮತ್ತು ಹಿತ್ತಾಳೆಯ ಆಯುಧಗಳಿಂದ ಹಲ್ಲೆ ನಡೆಸಲಾಗಿದೆ, ನಂತರ ಅಲ್ಲಿಂದ ಮಲ್ಯ ಆಸ್ಪತ್ರೆಗೂ ಹಿಂಬಾಲಿಸಿಕೊಂಡು ಅಲ್ಲಿಯೂ ಹಲ್ಲೆಗೆ ಯತ್ನಿಸಿದ್ದರು, ಆರೋಪಿಗಳು ವಿದ್ವತ್ ಮೇಲೆ ಹಲ್ಲೆ ಮಾಡಲು ಈ ಮೊದಲು ಯೋಜಿಸಿದ್ದರು, ಅವರಿಗೆ ವಿದ್ವತ್ ನನ್ನು ಕೊಲ್ಲುವ ಯೋಚನೆಯಿತ್ತು  ಎಂದು ವಾದಿಸಿದ್ದಾರೆ.
ಇನ್ನೂ ಆರೋಪಿಗಳ ಪರ ವಾದಿಸಿದ ವಕೀಲ ಟಾಮಿ ಸೆಬಾಸ್ಟಿಯನ್, ಈ ಪ್ರಕರಣ ಕ್ಷಣ ಹೊತ್ತಿನ ಕೋಪದಿಂದಾಗಿದೆ, 2ನೇ ಆರೋಪಿ ಅರುಣ್ ಬಾಬು ಕೂಡ ಸಂತ್ರಸ್ತನೇ, ವಿದ್ವತ್ ವಿರುದ್ಧ ಆತ ಪೊಲೀಸ್ ಕೇಸು ದಾಖಲಿಸಿದ್ದಾನೆ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ವಿಶೇಷ ಅಭಿಯೋಜಕರು, ಫರ್ಜಿ ಕೆಫೆಗೆ ಆರೋಪಿಗಳು, ಕಬ್ಬಿಣದ ರಿಂಗ್ ಅನ್ನು ತೆಗೆದುಕೊಂಡು ಹೋಗಿದ್ದಾರೆ,ಅಂದರೆ ಅಲ್ಲಿ ಯಾರದೋ ಮೇಲೆ ಹಲ್ಲೆ ಮಾಡಲು ಮೊದಲೇ ಉದ್ದೇಶ ಇಟ್ಟುಕೊಂಡು ಅವುಗಳನ್ನು ತೆಗೆದುಕೊಂಡು ಹೋಗಿದ್ದಾರೆ, ಇದು ಆಕಸ್ಮಿಕವಾಗಿ ಆದದ್ದಲ್ಲ, ಉದ್ದೇಶ ಪೂರ್ವಕವಾಗಿ ಎಂದು ವಾದಿಸಿದ್ದಾರೆ.
ಇದುವರೆಗೂ ಶೇ.90 ರಷ್ಟು ತನಿಖೆ ಮುಗಿದಿದ್ದು, ನ್ಯಾಯಾಲಯ ಜಾಮೀನು ಅರ್ಜಿಯನ್ನು ಮುಂದೂಡಿದೆ. ಆರೋಪಿಗಳ ಪರ ಬೆಂಬಲಿಗರು ಕೋರ್ಟ್ ನಲ್ಲಿ ನನ್ನನ್ನೆ ಹೆದರಿಸಿದರು. ಒಂದು ವೇಳೆ ಆರೋಪಿಗಳಿಗೆ ಜಾಮೀನು ನೀಡಿದರೇ ಅವರು ಸಾಕ್ಷ್ಯಾದಾರಗಳನ್ನು ಅಳಿಸಿಹಾಕುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಎಂದು ಪ್ರಶ್ನಿಸಿದ್ದಾರೆ.,ಏಕೆಂದರೇ ಪ್ರಮುಖ ಆರೋಪಿ ಪ್ರಭಾವಶಾಲಿ ಕುಟುಂಬದವರಾಗಿದ್ದಾರೆ ಎಂದು ವಾದಿಸಿದ್ದಾರೆ.
ಅರ್ಜಿದಾರನ ವಿರುದ್ಧ ಈ ಹಿಂದೆ ಯಾವುದೇ ಕೇಸ್ ದಾಖಲಾಗಿಲ್ಲ, ತುಂಬಾ ವಿಧೇಯ ಕುಟುಂಬದಿಂದ ಬಂದಿದ್ದಾರೆ, ಎಲ್ಲಾ ಆರೋಪಿಗಳು ತಾವಾಗಿಯೇ ಶರಣಾಗಿದ್ದಾರೆ, ವಿದ್ವತ್ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ, ಹೀಗಾಗಿ ಅರ್ಜಿದಾರನಿಗೆ ಜಾಮೀನು ನೀಡಬಹುದು ಎಂದು ಸೆಬಾಸ್ಟಿಯನ್ ಪ್ರತಿವಾದ ಮಂಡಿಸಿದ್ದಾರೆ. ಆದರೆ 62ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಜಾಮೀನು ಅರ್ಜಿಯನ್ನು ಮುಂದೂಡಿದ್ದಾರೆ. 
ವಿಚಾರಣೆ ನಡೆಯುವ ಕೋರ್ಟ್ ಹಾಲ್ ಗೆ ತೆರಳಲು ಪತ್ರಕರ್ತರಿಗೆ ಅನುಮತಿ ನಿರಾಕರಿಸಲಾಗಿತ್ತು, ಎಕೆ ಒಳಗೆ ಬಿಡಲಿಲ್ಲ ಎಂಬುದನ್ನು ತಿಳಿಸಿದಾಗ ಮಚ್ಚು ಹಿಡಿದುಕೊಂಡಿದ್ದ ವ್ಯಕ್ತಿಯೊಬ್ಬ ಸಾಕ್ಷಿಗಳನ್ನು ಬೆದರಿಸುತ್ತಿದ್ದ ಎಂದು ತಿಳಿದು ಬಂದಿತ್ತು,. ಆದರೆ ಕೆಲ ಪತ್ರಕರ್ತರು ಮಾತ್ರ ಒಳಗೆ ತೆರಳಿದ್ದರು ಎಂದು ಕೋರ್ಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
ಇನ್ನೂ ಸೋಮವಾರ, ಸಿಸಿಬಿ ಪೊಲೀಸ್ ಅಧಿಕಾರಿಗಳು ಮಲ್ಯ ಆಸ್ಪತ್ರೆಗೆ ತೆರಳಿದ್ದರು, ಅಲ್ಲಿ ವಿದ್ವತ್ ಹೇಳಿಕೆಯನ್ನು ದಾಖಲಿಸಲು ಪ್ರಯತ್ನಿಸಿದರು,  ಗಂಟೆ ಗಂಟಲೇ ಪ್ರಯತ್ನಿಸಿದರೂ ಆತನ ಉಚ್ಚರಿಸುವ ಮಾತುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ,  ಈ ವೇಳೆ ಒಂದು ವಾರದ ನಂತರ ಬರುವಂತೆ ಪೊಲೀಸರಿಗೆ ವೈದ್ಯರು ಸಲಹೆ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com