ಹಾಜರಾತಿ ಕೊರತೆ: 3,700 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವಂತಿಲ್ಲ!

ಅಂತಿಮ ವರ್ಷದ ಪರೀಕ್ಷೆ ಬರೆಯಲು ಶೇ.75 ರಷ್ಟು ಹಾಜರಾತಿ ಕಡ್ಡಾಯವಾಗಿರಬೇಕೆಂಬ ಆದೇಶವಿರುವ ಕಾರಣ,ಈ ವರ್ಷ ಸುಮಾರು 3,700 ಪದವಿ ...
ಪದವಿ ಪೂರ್ವ ಶಿಕ್ಷಣ ಮಂಡಳಿ
ಪದವಿ ಪೂರ್ವ ಶಿಕ್ಷಣ ಮಂಡಳಿ
ಬೆಂಗಳೂರು: ಅಂತಿಮ ವರ್ಷದ ಪರೀಕ್ಷೆ ಬರೆಯಲು ಶೇ.75 ರಷ್ಟು ಹಾಜರಾತಿ ಕಡ್ಡಾಯವಾಗಿರಬೇಕೆಂಬ ಆದೇಶವಿರುವ ಕಾರಣ,ಈ  ವರ್ಷ ಸುಮಾರು 3,700 ಪದವಿ ಪೂರ್ವ ವಿದ್ಯಾರ್ಥಿಗಳು ಹಾಜರಾತಿ ಪಡೆದುಕೊಳ್ಳಲು ವಿಫಲರಾಗಿದ್ದಾರೆ.
ಕಡ್ಡಾಯ ಹಾಜರಾತಿಯ ಬಗ್ಗೆ  ಕಾಲೇಜು ಮಂಡಳಿ ಪದೇ ಪದೇ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದರೂ, ಕೇರ್ ಮಾಡದ ವಿದ್ಯಾರ್ಥಿಗಳು ತರಗತಿಗಳಿಗೆ ಚಕ್ಕರ್ ಹಾಕುತ್ತಿದ್ದರು. ಹೀಗಾಗಿ ಒಂದು ಶೈಕ್ಷಣಿಕ ವರ್ಷ ಪೂರ್ತಿ ಅವರ ಪಾಲಿಗೆ ವ್ಯರ್ಥವಾಗಲಿದೆ,
ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಸುಮಾರು 3,700 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ, ಹಾಜರಾತಿ ಕೊರತೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ಪಿಯು ಮಂಡಳಿ ತಯಾರಿಸಿದೆ.
ಡಿಸೆಂಬರ್ 31 2017ರ ಒಳಗೆ ಹಾಜರಾತಿ ಕೊರತೆಯಿದ್ದ ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಲಾಗಿದೆ, ರಿಜಿಸ್ಟರ್ ಪೋಸ್ಟ್ ಮೂಲಕ ವಿವರ ಕಳುಹಿಸಲಾಗಿದೆ, ವಿದ್ಯಾರ್ಥಿಗಳ ಪೋಷಕರು ಕೋರ್ಟ್ ಗೆ ಮನವಿ ಸಲ್ಲಿಸಿ ಪರೀಕ್ಷೆ ಹಾಜರಾತಿಗೆ ಅನುಮತಿ ಪಡೆಯಲು ಸಹಾಯವಾಗಲೆಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಿಯು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿಬಾರಿ ವಿದ್ಚಾರ್ಥಿಗಳ ಹಾಜರಾತಿ ಕಡಿಮೆಯಾದಾಗ ತಮಗೆ ಮಾಹಿತಿ ನೀಡುವುದಿಲ್ಲವೆಂದು ಪೋಶಕರು ಆರೋಪಿಸುತ್ತಿದ್ದರು. ಹೀಗಾಗಿ ಈ ಬಾರಿ ಪಿಯು ಮಂಡಳಿ ಮುಂಚಿತವಾಗಿಯೇ ಪೋಷಕರಿಗೆ ವಿಷಯ ರವಾನಿಸಿದೆ.
ಹಾಜರಾತಿ ಕೊರತೆಯಿರುವ ಈ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಬರೆಯಲು ಕೂಡ ಅವಕಾಶವಿರುವುದಿಲ್ಲ, 2019ರ ಮಾರ್ಚ್ ನಲ್ಲಿ ಮಾತ್ರ ಎಕ್ಸಾಂ ಬರೆಯಲು ಸಾಧ್ಯ ಎಂದು ತಿಳಿಸಿದ್ದಾರೆ.
ಯಾವುದೇ ತರಗತಿಯ ಅಂತಿಮ ವರ್ಷದ ಪರೀಕ್ಷೆ ಬರೆಯಲು ಶೇ.75 ರಷ್ಟು ಹಾಜರಾತಿ ಕಡ್ಡಾಯ ಮಾಡಲಾಗಿದ್ದು, ದ್ವಿತೀಯ ಪಿಯಸಿ ವಿದ್ಯಾರ್ಥಿಗಳಿಗೂ ಇದು  ಅನ್ವಯವಾಗಲಿದೆ, ಪದವಿ ಪೂರ್ವ, ಪದವಿಸ ಹಾಗೂ ಸ್ನಾತಕೋತ್ತರ, ಮತ್ತು ವೃತ್ತಿಪರ ಕೋರ್ಸ್ ಗಳಿಗೂ ಈ ನಿಯಮ ಅನ್ವಯವಾಗಲಿದೆ. ಅನೇಕ ಕಾಲೇಜುಗಳು ನೀಡಿದ ಮಾಹಿತಿ ಪ್ರಕಾರ ಖಾಸಗಿ ಶಾಲೆಯ ಸುಮಾರು 1,200 ವಿದ್ಯಾರ್ಥಿಗಳಿಗೆ ಈ ಬಾರಿ ಪ್ರವೇಶ ಪತ್ರ ದೊರೆತಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com