ನೈರುತ್ಯ ರೈಲ್ವೆ ವಲಯದ 55 ರೈಲು ನಿಲ್ದಾಣಗಳು ಮೇಲ್ದರ್ಜೆಗೆ

ನೈರುತ್ಯ ರೈಲ್ವೆ ವಲಯದ 367 ರೈಲು ನಿಲ್ದಾಣಗಳಲ್ಲಿ 55 ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುವುದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು; ನೈರುತ್ಯ ರೈಲ್ವೆ ವಲಯದ 367 ರೈಲು ನಿಲ್ದಾಣಗಳಲ್ಲಿ 55 ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ರೈಲ್ವೆ ಸಚಿವಾಲಯದ ವರ್ಗೀಕರಣದ ಆಧಾರದ ಮೇಲೆ ಈ ಬದಲಾವಣೆಗಳನ್ನು ಮಾಡಲಾಗಿದೆ. ರೈಲ್ವೆ ನಿಲ್ದಾಣಗಳ ಹೊಸ ಸ್ಥಿತಿಗತಿ ಪ್ರಯಾಣಿಕರ ಸಂಖ್ಯೆ ಮತ್ತು ಟಿಕೆಟ್ ಗಳ ಮಾರಾಟಗಳನ್ನು ಅವಲಂಬಿಸಿದೆ.

ಮೈಸೂರು ವಲಯದಲ್ಲಿ ಆರು ರೈಲ್ವೆ ನಿಲ್ದಾಣಗಳು, ಬೆಂಗಳೂರು ವಿಭಾಗದಲ್ಲಿ 9 ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಇದಕ್ಕೆ ಹೊರತಾಗಿ ನೈರುತ್ಯ ರೈಲ್ವೆಯ 40 ತಂಗು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಅವುಗಳಲ್ಲಿ ಮೈಸೂರು ವಲಯದಲ್ಲಿ 20 ನಿಲ್ದಾಣಗಳು, ಬೆಂಗಳೂರು ವಲಯದಲ್ಲಿ 12 ಮತ್ತು ಹುಬ್ಬಳ್ಳಿ ವಲಯದಲ್ಲಿ 8 ನಿಲ್ದಾಣಗಳಿವೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.

ಮೇಲ್ದರ್ಜೆಗೇರಿಸಲ್ಪಟ್ಟ ಮುಖ್ಯ ನಿಲ್ದಾಣಗಳೆಂದರೆ ಮೈಸೂರಿನಿಂದ ಎನ್ಎಸ್ ಜಿ-2,ಬಂಗಾರಪೇಟೆಯಿಂದ ಮಂಡ್ಯದವರೆಗೆ ಎನ್ಎಸ್ ಜಿ-3, ತ್ಯಾಕಲ್ ನಿಂದ ಎನ್ಎಸ್ಜಿ-5ರವರೆಗೆ ಮೇಲ್ದರ್ಜೆಗೇರಿಸಲಾಗುತ್ತದೆ. ನಂಜನಗೂಡು ಪಟ್ಟಣ, ಚಾಮರಾಜನಗರ, ಚನ್ನಪಟ್ಟಣ, ಕುಪ್ಪಮ್, ಮಾಲೂರು, ರಾಮನಗರ, ವೈಟ್ ಫೀಲ್ಡ್, ಹರಿಹರ, ಸುಬ್ರಹ್ಮಣ್ಯ ರಸ್ತೆ, ಸಾಗರಜಂಬಗರು ಮತ್ತು ಶ್ರೀರಂಗಪಟ್ಟಣಗಳನ್ನು ಎನ್ಎಸ್ ಜಿ-4 ವಿಭಾಗಗಳಲ್ಲಿ ವರ್ಗೀಕರಿಸಲಾಗಿದೆ. ಅಲ್ಲದೆ ಇನ್ನೂ 40 ತಂಗು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು ಇಲ್ಲಿ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com