ಬೆಂಗಳೂರು: ಗೃಹಸಚಿವರ ಪುತ್ರಿಗೆ ಸುರಕ್ಷತೆ ಪಾಠ ಹೇಳಿಕೊಟ್ಟ ಗೃಹ ರಕ್ಷಕಿ; ವಿಡಿಯೋ ವೈರಲ್

ಗೃಹಸಚಿವ ರಾಮಲಿಂಗಾರೆಡ್ಡಿ ಅವರ ಮಗಳು ಸೌಮ್ಯಾ ರೆಡ್ಡಿಗೆ ಜಯನಗರದ ಸಾರ್ವಜನಿಕ ಸ್ಥಳಗಳಲ್ಲಿ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಗೃಹರಕ್ಷಕ ದಳದ ...
ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ
ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ
Updated on
ಬೆಂಗಳೂರು: ಗೃಹಸಚಿವ ರಾಮಲಿಂಗಾರೆಡ್ಡಿ ಅವರ ಮಗಳು ಸೌಮ್ಯಾ ರೆಡ್ಡಿಗೆ ಜಯನಗರದ ಸಾರ್ವಜನಿಕ ಸ್ಥಳಗಳಲ್ಲಿ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಲಕ್ಷ್ಮಿನರಸಮ್ಮ ಸುರಕ್ಷತೆ ಬಗ್ಗೆ ಪಾಠ ಹೇಳಿದ್ದಾರೆ. 
ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಸೌಮ್ಯಾ, ಸಭೆ ಮುಗಿಸಿಕೊಂಡು ಮನೆಯತ್ತ ಹೊರಟಿದ್ದರು. ಈ ವೇಳೆ ಫುಟ್‌ಪಾತ್‌ನಲ್ಲಿ ನಿಂತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದ ನರಸಮ್ಮ, ಅವರನ್ನೂ ತಡೆದು ನಿಲ್ಲಿಸಿ ಒಂದು ನಿಮಿಷ ಜಾಗೃತಿ ಪಾಠ ಕೇಳಿದ್ದರು.
ಈ ದೃಶ್ಯವನ್ನು ಸೌಮ್ಯ ಸ್ನೇಹಿತರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ಮನೆಗೆ ತೆರಳಿದ ಸೌಮ್ಯಾ, ಈ ಸುರಕ್ಷತೆ ಪಾಠದ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಅದು ವೈರಲ್‌ ಆಗಿದೆ.
ಬೆಂಗಳೂರಿನಲ್ಲಿ ನಾವೆಲ್ಲರೂ ರಕ್ಷಿತವಾಗಿದ್ದೇವೆ ಎಂದರ ಅದಕ್ಕೆ ಬದ್ಧತೆ ಇರುವಂತ ಇಂಥವರೇ ಕಾರಣ. ನರಸಮ್ಮ ಎಲ್ಲರಿಗೂ ಸ್ಫೂರ್ತಿ ತುಂಬುವಂಥ ಕೆಲಸ ಮಾಡಿದ್ದಾರೆ. ಇದುವೇ ಮಹಿಳಾ ಸಬಲೀಕರಣ. ಪ್ರತಿದಿನವೂ ಮಹಿಳಾ ದಿನಾಚರಣೆ’ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com