ನೀಟ್ 2018 ಪ್ರಶ್ನೆಪತ್ರಿಕೆ ಎಲ್ಲಾ ಭಾಷೆಗಳಲ್ಲಿ ಒಂದೇ ಮಾದರಿ

2018ರ ನೀಟ್ ಪರೀಕ್ಷೆಯಲ್ಲಿ ಎಲ್ಲಾ ಭಾಷೆಗಳಲ್ಲಿ ಒಂದೇ ವಿಧವಾದ ಪ್ರಶ್ನೆಪತ್ರಿಕೆಯಿರುತ್ತದೆ ಎಂದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 2018ರ ನೀಟ್ ಪರೀಕ್ಷೆಯಲ್ಲಿ ಎಲ್ಲಾ ಭಾಷೆಗಳಲ್ಲಿ ಒಂದೇ ವಿಧವಾದ ಪ್ರಶ್ನೆಪತ್ರಿಕೆಯಿರುತ್ತದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ.
ಇಂಗ್ಲಿಷ್, ಹಿಂದಿ, ಕನ್ನಡ, ಉರ್ದು, ಅಸ್ಸಾಂ, ಬಂಗಾಳಿ, ಗುಜರಾತ್, ಮರಾಠಿ, ಒರಿಯಾ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನೀಟ್ 2018ರ ಪ್ರಶ್ನೆಪತ್ರಿಕೆ ಒಂದೇ ವಿಧವಾಗಿರುತ್ತದೆ ಎಂದು ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವದೇಕರ್ ತಿಳಿಸಿದ್ದಾರೆ.

ಕಳೆದ ವರ್ಷ ನೀಟ್ ಪರೀಕ್ಷೆ ಬರೆದವರು ಸ್ಥಳೀಯ ಭಾಷೆಗಳಲ್ಲಿ ಪ್ರಶ್ನೆಗಳು ಕಷ್ಟವಾಗಿದ್ದವು ಎಂದು ಅನೇಕ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಬೇರೆ ಸ್ಥಳೀಯ ಭಾಷೆಗಳಿಗಿಂತ ಇಂಗ್ಲೀಷ್ ಭಾಷೆಯಲ್ಲಿ ಪ್ರಶ್ನೆಪತ್ರಿಕೆಗಳು ಸುಲಭವಾಗಿದ್ದವು ಎಂದು ಅಭ್ಯರ್ಥಿಗಳು ಪ್ರತಿಪಾದಿಸಿದ್ದರು. ಕೆಲವರು ಈ ಬಗ್ಗೆ ಕೋರ್ಟ್ ಮೊರೆ ಹೋಗಿದ್ದರು ಕೂಡ. ಈ ವರ್ಷ ಅಂತಹ ಪರಿಸ್ಥಿತಿಯನ್ನು ನಿವಾರಿಸಲು, ಮಾನವ ಸಂಪನ್ಮೂಲ ಸಚಿವಾಲಯ ಎಲ್ಲಾ ಭಾಷೆಗಳಲ್ಲಿರುವ ಪ್ರಶ್ನೆಪತ್ರಿಕೆಗಳಲ್ಲಿನ ವಿಷಯಗಳೆಲ್ಲವೂ ಒಂದೇಯಾಗಿರುತ್ತದೆ. ಉರ್ದು ಭಾಷೆಯನ್ನು ಹೊಸದಾಗಿ ಸೇರಿಸಲಾಗಿದ್ದು ಎಲ್ಲಾ 11 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಎನ್ ಸಿಇಆರ್ ಟಿ/ಸಿಬಿಎಸ್ಇ ಮತ್ತು 11 ಹಾಗೂ 12ನೇ ತರಗತಿ ರಾಜ್ಯ ಬೋರ್ಡ್ ಪಠ್ಯಕ್ರಮದ ಮಾದರಿಯಲ್ಲಿ ಪರೀಕ್ಷೆ ಇರಲಿದೆ. ಆದರೆ ಅಭ್ಯರ್ಥಿಗಳ ಒತ್ತಾಯದ ಮೇರೆಗೆ ಕರ್ನಾಟಕದಲ್ಲಿ ಹೊಸ ಪರೀಕ್ಷಾ ಕೇಂದ್ರವನ್ನು ನೀಡಲಾಗಿದ್ದು ಅದು ಧಾರವಾಡದಲ್ಲಿದೆ ಎಂದು ಪ್ರಕಾಶ್ ಜಾವದೇಕರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com