ತನ್ನ ಫ್ಲ್ಯಾಟ್ ಗಳಿಗೆ ಅನಿಲ ಪೂರೈಸಲು ಗ್ಯಾಸ್ ಅಥಾರಿಟಿ ಆಫ್ ಇಂಡಿಯನ್ ಲಿಮಿಟೆಡ್ ಗೆ ಅನುಮತಿಯಿತ್ತ ಬಿಡಿಎ

ಬೆಂಗಳೂರಿನ ಅಭಿವೃದ್ಧಿ ಪ್ರಾಧಿಕಾರವು ನೈಸರ್ಗಿಕ ಅನಿಲವನ್ನು (ಪಿಎನ್ ಜಿ) ನಗರದ ಅಪಾರ್ಟ್ಮೆಂಟ್ ಸಮುಚ್ಚಯಗಳ ಮನೆಬಳಕೆಗೆ ಒದಗಿಸಲು ಗ್ಯಾಸ್ ಅಥಾರಿಟಿ ಆಫ್ ಇಂಡಿಯನ್ ಲಿ.(ಜಿಎಎಇಎಲ್) ಗೆ....
ಬಿಡಿಎ ಫ್ಲ್ಯಾಟ್
ಬಿಡಿಎ ಫ್ಲ್ಯಾಟ್
ಬೆಂಗಳೂರು: ಬೆಂಗಳೂರಿನ ಅಭಿವೃದ್ಧಿ ಪ್ರಾಧಿಕಾರವು ನೈಸರ್ಗಿಕ ಅನಿಲವನ್ನು (ಪಿಎನ್ ಜಿ) ನಗರದ ಅಪಾರ್ಟ್ಮೆಂಟ್ ಸಮುಚ್ಚಯಗಳ ಮನೆಬಳಕೆಗೆ ಒದಗಿಸಲು ಗ್ಯಾಸ್ ಅಥಾರಿಟಿ ಆಫ್ ಇಂಡಿಯನ್ ಲಿ.(ಜಿಎಎಇಎಲ್) ಗೆ ಅನುಮತಿ ಇತ್ತಿದೆ. ಈ ಮುಖೇನ ನಗರದಾದ್ಯಂತ ಇರುವ  13,100 ಬಿಡಿಎ ಫ್ಲಾಟ್ ಗಾಳು ಈ ಪ್ರಯೋಜನ ಪಡೆಯಲಿದೆ.ಬಿಡಿಎ ನಗರದಲ್ಲಿ ಒಟ್ಟು 29 ವಸತಿ ಯೋಜನೆಯನ್ನು ಹೊಂದಿದ್ದು ವಲಗೇರಹಳ್ಳಿ, ತಿಪ್ಪಸಆಂದ್ರ, ದೊಡ್ಡಬನಹಳ್ಳಿ, ಕೋತನೂರು, ಕಣ್ಮಿಣಿಕೆ ಇತರೆಡೆಗಳಲ್ಲಿರುವ ಎಲ್ಲಾ ಅಪಾರ್ಟ್ ಮೆಂಟ್, ಫ್ಲಾಟ್ ಗಳು ಸಹ ಈ ಯೋಜನೆಯನ್ನು ಅಳವಡಿಸಿಕೊಳ್ಳಲಿವೆ. 
"ಗೇಲ್ ಪ್ರಸ್ತಾಪವನ್ನು ನಾವು ಸಮ್ಮತಿಸಿದ್ದು ನಗರದಲ್ಲಿನ ಎಲ್ಲಾ ಬಿಡಿಎ ಅಪಾರ್ಟ್ ಮೆಂಟ್ ಗಳಿಗೆ ಅನಿಲ ಕೊಳವೆ ಮಾರ್ಗಗಳನ್ನು ರಚಿಸಲು ನಾವು ಅನುಮತಿ ನೀಡಿದ್ದೇವೆ. ಅದಲ್ಲದೆ ಅವರು ಕೆಲಸ ಮುಂದುವರಿಸಲು ಯಾವ ಡ್ಡಿ ಇಲ್ಲ ಎಂದು ಪ್ರಮಾಣಪತ್ರ ನೀಡಲಾಗಿದೆ. "ಪಿಎನ್ ಜಿಗೆ ಬದಲಾಯಿಸುವುದು ಕಡ್ಡಾಯವಲ್ಲ. ಅದರಲ್ಲಿ ಆಸಕ್ತಿ ಹೊಂದಿಲ್ಲದವರುಎಲ್ ಪಿಜಿ ಸಿಲೆಂಡರ್ ಗಳನ್ನೇ ಆಯ್ಕೆ ಮಾಡಿಕೊಳ್ಳಬಹುದು. ಎಲ್ ಪಿಜಿಗೆ ಹೋಲಿಸಿದ್ದರೆ ಪಿಎನ್ ಜಿ ಗ್ರಾಹಕರಿಗೆ ಅಗ್ಗವಾಗಿದೆ. ಇದಲ್ಲದೆ, ಇದು ಸಾಂಪ್ರದಾಯಿಕ ಸಿಲಿಂಡರ್ಗಿಂತ ಹೆಚ್ಚು ಸುರಕ್ಷಿತವಾಗಿದೆ, " ನಿವೃತ್ತ ಎಂಜಿನಿಯರ್ ಪಿ. ಎನ್. ನಾಯಕ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಅನಿಲವನ್ನು ಸಂಗ್ರಹಿಸಿಡುವುದರಲ್ಲಿರುವ ಅಪಾಯನಿಲ ಕೊಳವೆ ಮಾರ್ಗದಲ್ಲಿ ಇರುವುದಿಲ್ಲ ಎಂದು ಬಿಡಿಎ ನ ಸೂಪರಿಟೆಂಡೆಂಟ್ ಇಂಜಿನಿಯರ್ ಎನ್ ಜಿ ಗೌಡಯ್ಯ ಹೇಳಿದ್ದಾರೆ.ಎಲ್ ಪಿಜಿ ಗಿಂತಲೂ ಪಿಎನ್ ಜಿ ಅನಿಲ ಅಗ್ಗವಾಗಿರಲಿದೆ. ಸಬ್ಸಿಡಿ ಇಲ್ಲದ ಸಿಲಿಂಡರ್ಗಳನ್ನು ಬಳಸುವ ಬದಲಿಗೆ ಪಿಎನ್ ಜಿ ಬಳಸಿದರೆ ಶೇ.52 ಅಗ್ಗವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com