ಶೋಭಾ ಡ್ರೀಮ್ಸ್ ಕಲುಷಿತ ನೀರು ಸೇವನೆ ಪ್ರಕರಣ, ಇನ್ನೋರ್ವ ಕಾರ್ಮಿಕ ಆಸ್ಪತ್ರೆಗೆ ದಾಖಲು

ಬೆಂಗಳೂರಿನ ವರ್ತೂರು ಶೋಭಾ ಡ್ರೀಮ್ಸ್ ಏರಿಯಾದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದವರು ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾದ ಪ್ರಕರಣ.......
ಶೋಭಾ ಡ್ರೀಮ್ಸ್ ಕಲುಷಿತ ನೀರು ಸೇವನೆ ಪ್ರಕರಣ, ಇನ್ನೋರ್ವ ಕಾರ್ಮಿಕ ಆಸ್ಪತ್ರೆಗೆ ದಾಖಲು
ಶೋಭಾ ಡ್ರೀಮ್ಸ್ ಕಲುಷಿತ ನೀರು ಸೇವನೆ ಪ್ರಕರಣ, ಇನ್ನೋರ್ವ ಕಾರ್ಮಿಕ ಆಸ್ಪತ್ರೆಗೆ ದಾಖಲು
ಬೆಂಗಳೂರು: ಬೆಂಗಳೂರಿನ ವರ್ತೂರು ಶೋಭಾ ಡ್ರೀಮ್ಸ್ ಏರಿಯಾದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದವರು ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾದ ಪ್ರಕರಣ ಇತ್ತೀಚೆಗೆ ವರದಿಯಾಗಿತ್ತು. ಇದೀಗ ಇದೇ ಕಾರಣಕ್ಕೆ ಇನ್ನೋರ್ವ ಕಾರ್ಮಿಕ ಸೈಂಟ್ ಜಾನ್ಸ್ ಆಸ್ಪತ್ರೆ ಸೇರಿದ್ದಾನೆ.
ಇದಾಗಲೇ ನೀರಿನ ಮಾದರಿಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಕಳಿಸಲಾಗಿದ್ದು ನೀರಿನಲ್ಲಿ ಅಂತಹಾ ಮಾರಕಾಂಶಗಳಿರುವುದು ಪತ್ತೆಯಾಗಿಲ್ಲ. ಆದರೆ ನೀರಿನಲ್ಲಿದ್ದ E.coli ಬ್ಯಾಕ್ಟೀರಿಯಾದ ಕಾರಣ ಅವರಲ್ಲಿ ಭೇದಿ ಕಾಣಿಸಿರಬಹುದು ಎನ್ನಲಾಗಿದೆ. 
ಆದರೆ ಕಳೆದ ಮೂರು ದಿನಗಳಿಂದ ಸಾಕಶ್ಟು ಕಾರ್ಮಿಕರು ನೀರು ಶೆವನೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದು ಅವರಲ್ಲಿ ಹಲವರಿಗೆ ಕಾಲರಾ ಲಕ್ಷಣಗಲು ಕಾಣಿಸಿದೆ. "ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಓ) ಮಾರ್ಗದರ್ಶಿ ಸೂತ್ರಗಳ ಪ್ರಕಾರ ನೀರಿನ ಮಾದರಿಗಳ ಪರೀಕ್ಷೆಯನ್ನು ಮಾಡಲು, ಇದು 72 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಇದುವರೆಗಿನ ಮಾಹಿತಿಯಂತೆ  ನೀರು ಕುಡಿಯುವುದಕ್ಕೆ ಯೋಗ್ಯವಲ್ಲ ಎಂದು ಯಾವುದೇ ಸಂದೇಹ ಬಂದಿಲ್ಲ. ನಾವು E.coli, ಕಾಮಾಲೆ ಮತ್ತು ಟೈಫಾಯ್ಡ್, ಮೂರು ಪರೀಕ್ಷೆಗಳನ್ನು ಮಾಡುತ್ತಿದ್ದೇವೆ. ಪರೀಕ್ಷೆ ಪೂರ್ಣವಾಗಲಿಕ್ಕೆ ಇನ್ನಷ್ಟು ಸಮಯ ಅಗತ್ಯವಿದೆ" ವರ್ತೂರು ಪಿಎಚ್ ಸಿ ವೈದ್ಯಕೀಯ ಅಧಿಕಾರಿಯಾದ ಬಿಕೆ ಕೃಷ್ಣಪ್ಪ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಶೋಭಾ ಡ್ರೀಮ್ಸ್ ನಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು ಶೋಭಾ ಡೆವಲಪರ್ಸ್ ವಿರುದ್ಧ ಪ್ರಕರಣ ದಾಖಲಾಗಿತ್ತೆನ್ನುವ ಮಾಹಿತಿಯನ್ನು ನಾವಿಲ್ಲಿ ಸ್ಮರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com