ಶೋಭಾ ಡ್ರೀಮ್ಸ್ ಕಲುಷಿತ ನೀರು ಸೇವನೆ ಪ್ರಕರಣ: 10 ರಲ್ಲಿ ಏಳು ಕಾರ್ಮಿಕರಲ್ಲಿ ಕಾಲರಾ ಸಾಬೀತು

ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ದಾಖಲಾದ ಶೋಭಾ ಡ್ರೀಮ್ಸ್ ಕಟ್ಟಡ ನಿರ್ಮಾಣ ಕಾರ್ಮಿಕರಲ್ಲಿ 10 ಜನರ ಪೈಕಿ ಏಳು ಮಂದಿಗೆ ಕಾಲರಾ ಇರುವುದು ಖಚಿತಪಟ್ಟಿದೆ.
ಶೋಭಾ ಡ್ರೀಮ್ಸ್ ಕಲುಷಿತ ನೀರು ಸೇವನೆ ಪ್ರಕರಣ: 10 ರಲ್ಲಿ ಏಳು ಕಾರ್ಮಿಕರಲ್ಲಿ ಕಾಲರಾ ಸಾಬೀತು
ಶೋಭಾ ಡ್ರೀಮ್ಸ್ ಕಲುಷಿತ ನೀರು ಸೇವನೆ ಪ್ರಕರಣ: 10 ರಲ್ಲಿ ಏಳು ಕಾರ್ಮಿಕರಲ್ಲಿ ಕಾಲರಾ ಸಾಬೀತು
Updated on
ಬೆಂಗಳೂರು: ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ದಾಖಲಾದ ಶೋಭಾ ಡ್ರೀಮ್ಸ್ ಕಟ್ಟಡ ನಿರ್ಮಾಣ ಕಾರ್ಮಿಕರಲ್ಲಿ 10 ಜನರ ಪೈಕಿ ಏಳು ಮಂದಿಗೆ ಕಾಲರಾ ಇರುವುದು ಖಚಿತಪಟ್ಟಿದೆ. ಇದೇ ವೇಳೆ ಶ್ರೀಕಾಂತ್ ಸಾಹು ಮೃತಪಟ್ಟು ಮೂರು ದಿನಗಳ ಬಳಿಕಇದು ಖಚಿತಪಟ್ಟಿದೆ.
"ಪ್ರಾಯೋಗಿಕ ಲಕ್ಷಣಗಳ ಆಧಾರದ ಮೇಲೆ ನಾವು ಅವರಿಗೆ ಕಾಲರಾ ಚಿಕಿತ್ಸೆ ನೀಡಲು ಪ್ರಾರಂಭಿಸಿದ್ದೇವೆ. ಈಗ ಸೇಂಟ್ ಜಾನ್ಸ್ ಆಸ್ಪತ್ರೆಯವರೂ ಸಹ ಕಾಲರಾ ಬ್ಯಾಕ್ಟೀರಿಯಾ ಪತ್ತೆಯಾಗಿರುವುದನ್ನು ಖಚಿತಪಡಿಸಿದ್ದಾರೆ. ,  ಆದರೂ ನೀರಿನ ಮಾದರಿಯಲ್ಲಿ E.coli ಬ್ಯಾಕ್ಟೀರಿಯಾ ಮಾತ್ರ ಕಂಡುಬಂದಿದೆ. ಇದೀಗ ನಾವು ಸ್ಕ್ರೀನಿಂಗ್ ಶಿಬಿರವನ್ನು ಪ್ರಾರಂಭಿಸಿದ್ದೇವೆ. ಹಾಗೆಯೇ ಮಂಗಳವಾರದಿಂದ ಈಚೆಗೆ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ. " ವರ್ತೂರು ಪಿಎಚ್ ಸಿ ವೈದ್ಯಾಧಿಕಾರಿ ಬಿಕೆ ಕೃಷ್ಣಪ್ಪ  ಹೇಳಿದರು.
ಇದೇ ವೇಳೆ ಮಾತನಾಡಿದ ಕಾರ್ಮಿಕ ವಿಭಾಗದ ಹೆಚ್ಚುವರಿ ಕಮಿಷನರ್ ಎಚ್ ಎಲ್ ಗುರುಪ್ರಸಾದ್, "ಕೊನೆಯದಾಗಿ ಪಡೆದ ಮಾಸಿಕ ವೇತನದ ಅರ್ಧದಷ್ಟು ಹಾಗೂ ಕಾರ್ಮಿಕರ ವಯಸ್ಸಿನ ಆಧಾರದಲ್ಲಿ ಪರಿಹಾರನಿಧಿಯನ್ನು ಲೆಕ್ಕ ಹಾಕುತ್ತೇವೆ. ಉದಾಹರಣೆಗೆ, 20 ವರ್ಷ ವಯಸ್ಸಿನವರು 8.5 ಲಕ್ಷ ರೂ. ಪರಿಹಾರವನ್ನು ಪಡೆಯಬಹುದು. ಹೇಗಾದರೂ ರೋಗಿಗಳು ಗುಣಮುಖರಾಗಲೇ ಬೇಕು.  ಸಂಸ್ಥೆಯು ಅವರ ವೈದ್ಯಕೀಯ ವೆಚ್ಚ ನೋಡಬೇಕಿದೆ" ಎಂದರು.
ಏತನ್ಮಧ್ಯೆ, ಶೋಭಾ ಡ್ರೀಮ್ ಏಕರ್ಸ್ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕಲುಷಿತ ನೀರಿನ ಸೇವನೆಯಿಂದಾದ ಕಾರ್ಮಿಕರ ಸಾವಿನ ಪ್ರಕರಣದಲ್ಲಿ ಮೂರು ಕಾನೂನ್ ಉ ಉಲ್ಲಂಘನೆಯಾಗಿರುವ ಬಗೆಗೆ ಪರಿಶೀಲಿಸಬಹುದು,  ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯ್ದೆ, ಗುತ್ತಿಗೆ ಕಾರ್ಮಿಕರ ಕಾಯ್ದೆ ಮತ್ತು ಅಂತರರಾಜ್ಯ ವಲಸೆಗಾರ ಕಾರ್ಮಿಕರ ಕಾಯ್ದೆ. ಕಾರ್ಯನಿರತ ಕಾರ್ಮಿಕರ ಕಾಂಪೆನ್ಸೇಷನ್ ಕಾಯ್ದೆ ಅಡಿಯಲ್ಲಿ ಶೋಬಾ ಡೆವಲಪರ್ಸ್ ಸಂಸ್ಥೆ ಕಾರ್ಮಿಕರಿಗೆ ಪರಿಹಾರ ನಿಡಬೇಕೆಂದು ಕಾರ್ಮಿಕ ಇಲಾಖೆ ಹೇಳಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com