ಮಂಗಳೂರು: ವಿಹೆಚ್‏ಪಿ, ಭಜರಂಗ ದಳ ಕಾರ್ಯಕರ್ತರಿಂದ ಹಿಂದು ಹುಡುಗಿಯರಿಗೆ 'ನೀತಿ ಸಂಹಿತೆ' ವಿತರಣೆ!

ಲವ್ ಜಿಹಾದ್ ನಂತಹ ಅಪಾಯಗಳಿಂದ ರಕ್ಷಿಸಿಕೊಳ್ಳಲು ಹಿಂದೂ ಧರ್ಮದ ಹೆಣ್ಣು ಮಕ್ಕಳು ....
ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಿನ್ನೆ ಮಂಗಳೂರಿನಲ್ಲಿ ಲವ್ ಜಿಹಾದ್ ಬಗ್ಗೆ ಕರಪತ್ರಗಳನ್ನು ಹಂಚಿದರು.
ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಿನ್ನೆ ಮಂಗಳೂರಿನಲ್ಲಿ ಲವ್ ಜಿಹಾದ್ ಬಗ್ಗೆ ಕರಪತ್ರಗಳನ್ನು ಹಂಚಿದರು.
ಮಂಗಳೂರು: ಲವ್ ಜಿಹಾದ್ ನಂತಹ ಅಪಾಯಗಳಿಂದ ರಕ್ಷಿಸಿಕೊಳ್ಳಲು ಹಿಂದೂ ಧರ್ಮದ ಹೆಣ್ಣು ಮಕ್ಕಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ನೀತಿ ಸಂಹಿತೆಯನ್ನು ಒಳಗೊಂಡ ಕರಪತ್ರಗಳನ್ನು ಬಿಡುಗಡೆ ಮಾಡಿದ್ದು ಅದನ್ನು ಮಂಗಳೂರು ನಗರದ ಸಾರ್ವಜನಿಕ ಸ್ಥಳಗಳಲ್ಲಿ ವಿತರಣೆ ಮಾಡಿದೆ.
ವಿಎಚ್ ಪಿ ಮತ್ತು ಭಜರಂಗ ದಳದ ನೀತಿ ಸಂಹಿತೆ ಪ್ರಕಾರ, ಹಿಂದೂ ಧರ್ಮದ ಹೆಣ್ಣು ಮಕ್ಕಳು ಹಿಂದೂಯೇತರ ಧರ್ಮದ ಯುವಕರೊಂದಿಗೆ ಸಂಪರ್ಕ ಇಟ್ಟುಕೊಳ್ಳಬಾರದು ಮುಖ್ಯವಾಗಿ ಮುಸಲ್ಮಾನರು ಮತ್ತು ಕ್ರಿಸ್ತಿಯನ್ ಧರ್ಮಗಳ ಯುವಕರಿಂದ ದೂರವಿರಬೇಕು. ಬಸ್ಸುಗಳಲ್ಲಿ, ಶಾಲೆ-ಕಾಲೇಜುಗಳು ಮತ್ತು ಇತರ ಸ್ಥಳಗಳಲ್ಲಿ ಓಡಾಡುವಾಗ ಹಿಂದೂಯೇತರ ಯುವಕರಿಂದ ದೂರವುಳಿಯಬೇಕು. ಹೀಗೆ ಹಿಂದೂ ಧರ್ಮದ ಯುವತಿಯರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ನಿಯಮಗಳನ್ನು ಹೊಂದಿದ ಕರಪತ್ರಗಳನ್ನು ಶಾಲಾಕಾಲೇಜುಗಳ ಬಳಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಂಚುತ್ತಿದ್ದಾರೆ.
ತಮಗೆ ತೊಂದರೆಯಾದರೆ ಹಿಂದೂ ಧರ್ಮದ ಹುಡುಗಿಯರು ಸಂಘಟನೆಗಳ ನೆರವು ಪಡೆಯಬಹುದು ಎಂದು ಕರಪತ್ರದಲ್ಲಿ ಹೇಳಲಾಗಿದೆ. ಫೇಸ್ ಬುಕ್ ನಲ್ಲಿ ಹಿಂದೂ ಹೆಸರಿನಲ್ಲಿ ಬರುವ ಫ್ರೆಂಡ್ ರಿಕ್ವೆಸ್ಟ್ ಗಳ ಬಗ್ಗೆ ಎಚ್ಚರವಿರಿ, ವಾಟ್ಸಾಪ್, ಫೇಸ್ ಬುಕ್ ಇತ್ಯಾದಿಗಳಲ್ಲಿ ಹಿಂದೂ ಯುವತಿಯರು ತಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುವಾಗ ಎಚ್ಚರಿಕೆಯಿಂದಿರಿ ಮತ್ತು ಫೋಟೋ ಗಳನ್ನು ಅಪ್ ಲೋಡ್ ಮಾಡುವಾಗ ಹುಷಾರಾಗಿರಿ ಎಂದು ಕರಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.
ಹಿಂದೂಯೇತರ ಯುವಕರಿಂದ ಪ್ರೀತಿಯ ಹೆಸರಿನಲ್ಲಿ ಉಡುಗೊರೆಗಳನ್ನು ಪಡೆಯಬೇಡಿ ಎಂದು ಕೂಡ ಎಚ್ಚರಿಕೆ ನೀಡಲಾಗಿದೆ.
ಕರಪತ್ರದಲ್ಲಿ ನೀಡಿರುವ ಇನ್ನೊಂದು ಮಾರ್ಗಸೂಚಿಯಲ್ಲಿ, ಹಿಂದೂ ಹೆಣ್ಣು ಮಕ್ಕಳ ಪೋಷಕರು ತಮ್ಮ ಮಗಳ ಸ್ನೇಹಿತರ ಗುಂಪಿನ ಬಗ್ಗೆ ತಿಳಿದುಕೊಂಡಿರಬೇಕು, ಇಂದು ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಸಮಯಗಳನ್ನು ಕಳೆಯುತ್ತಿದ್ದು, ತಮ್ಮ ಮನೆಯ ಹೆಣ್ಣು ಮಕ್ಕಳು ಕೆಲಸ ಮಾಡುವ ಕಚೇರಿ, ಅದರ ಮಾಲಿಕರು, ಮಕ್ಕಳ ಸಹೋದ್ಯೋಗಿಗಳ ಬಗ್ಗೆ ಪೋಷಕರು ತಿಳಿದುಕೊಂಡಿರಬೇಕು. ಹೆಣ್ಣು ಮಕ್ಕಳು ಮನೆಗೆ ತಡವಾಗಿ ಬರುತ್ತಿದ್ದರೆ ವಿಚಾರಿಸುತ್ತಿರಬೇಕು. ಅವರ ಚಲನವಲನಗಳನ್ನು ಗಮನಿಸುತ್ತಿರಬೇಕು. ಹೆಣ್ಣು ಮಕ್ಕಳು ಮನೆಯಲ್ಲಿ ಕೋಣೆಯ ಬಾಗಿಲು ಹಾಕಿಕೊಂಡು ಮೊಬೈಲ್ ನಲ್ಲಿ ಮಾತನಾಡುತ್ತಿದ್ದರೆ, ಸಾಮಾಜಿಕ ಜಾಲತಾಣಗಳನ್ನು ಹುಡುಕುತ್ತಿದ್ದರೆ, ತಮ್ಮ ಮಗಳು ಯಾರಿಂದಾದರೂ ಉಡುಗೊರೆಗಳನ್ನು ಪಡೆದರೆ ಯಾರಿಂದ ಸಿಕ್ಕಿದ್ದು ಎಂದು ಪೋಷಕರು ತಿಳಿದುಕೊಳ್ಳಬೇಕು. ತಮ್ಮ ಮಕ್ಕಳು ದಿನನಿತ್ಯ ಏನು ಚಟುವಟಿಕೆ ಮಾಡುತ್ತಾರೆ, ಎಲ್ಲೆಲ್ಲಾ ಹೋಗುತ್ತಾರೆ, ಯಾರ ಜೊತೆ ಮಾತನಾಡುತ್ತಾರೆ ಎಂದು ನೋಡುತ್ತಿರಬೇಕು ಎಂದು ಕರಪತ್ರದಲ್ಲಿ ತಿಳಿಸಲಾಗಿದೆ.
ಅಭಿಯಾನವನ್ನು ಆರಂಭಿಸಿದ ವಿಶ್ವ ಹಿಂದೂ ಪರಿಷತ್ ನಾಯಕ ಎಂ.ಬಿ.ಪುರಾಣಿಕ್, ಹಿಂದೂ ಧರ್ಮದ ಯುವ ಜನಾಂಗದಲ್ಲಿ ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯಗಳನ್ನು ಮರು ಪರಿಚಯಿಸಲು ಈ ಅಭಿಯಾನವನ್ನು ಆರಂಭಿಸಿದ್ದೇವೆ. ಇಂದಿನ ಹಿಂದೂ ಯುವತಿಯರು ಹಿಂದೂಯೇತರ ಯುವಕರ ಮೋಡಿಯ ಮಾತಿಗೆ, ಆಧುನಿಕ ಜೀವನಶೈಲಿಗೆ ಮರುಳಾಗುತ್ತಿದ್ದಾರೆ. ಅದಾಗದಂತೆ ಎಚ್ಚರಿಕೆ ನೀಡುವುದು ನಮ್ಮ ಉದ್ದೇಶ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com