ಗೌರಿ ಲಂಕೇಶ್ ಹಂತಕರ ಸುಳಿವು ಲಭ್ಯವಾಗಿದೆ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಹಂತಕರ ಸುಳಿವು ಸಿಕ್ಕಿದೆ,
ಗೌರಿ ಲಂಕೇಶ್- ಸಾಂದರ್ಭಿಕ ಚಿತ್ರ
ಗೌರಿ ಲಂಕೇಶ್- ಸಾಂದರ್ಭಿಕ ಚಿತ್ರ
ಸಾಗರ: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಹಂತಕರ ಸುಳಿವು ಸಿಕ್ಕಿದೆ, ಸಾಕ್ಷಿ ಸಮೇತವಾಗಿ ಹಂತಕರ ವಿವರವನ್ನು ಶಿಘ್ರದಲ್ಲೇ ಬಹಿರಂಗಪಡಿಸಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು "ವಿಶೇಷ ತನಿಖಾ ದಳ (ಎಸ್‍ಐಟಿ) ಗೆ ಪ್ರಮುಖ ಆರೋಪಿಗಳ ಸುಳಿವು ಪತ್ತೆಯಾಗಿದೆ. ಇದೊಂದು ಪೂರ್ವಯೋಜಿತ ಕೃತ್ಯವಾಗಿದ್ದು ಇದಕ್ಕೂ ಮೊದಲು ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ತಂಡವೇ ಗೌರಿ ಹತ್ಯೆ ನಡೆಸಿದೆ ಎಂದು ಶಂಕಿಸಲಾಗಿದೆ. ನಾನಾ ಆಮಾಗಳಲ್ಲಿ ತನಿಖೆ ನಡೆಸುತ್ತಿರುವ ಎಸ್‍ಐಟಿ ಆರೋಪಿಗಳ ಪೂರ್ವಾಪರ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದೆ" ಎಂದರು.
ಪಿಎಫ್‌ಐ, ಆರ್‍ಎಸ್‍ಎಸ್ ನಿಷೇಧ ಇಲ್ಲ
ಸಮಾವೇಶದಾಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹಾಳು ಮಾಡುವ ಯಾವುದೇ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಂತಹಾ ಸಂಘಟನೆಗಳನ್ನು ನಿಷೇಧಿಸುತ್ತೇವೆ.ಆದರೆ, ಪಿಎಫ್‌ಐ ಇನ್ನಿತರೆ ಯಾವ ಧಾರ್ಮಿಕ ಸಂಘಟನೆ ನಿಷೇಧಿಸುವ ಪ್ರಸ್ತಾಪವಿಲ್ಲ. ಇನ್ನು ಆರ್ ಎಸ್ ಎಸ್ ನ್ನು ನಿಷೇಧಿಸುತ್ತೇವೆಂದು ನಾನು ಎಲ್ಲಿಯೂ ಹೆಳಿಲ್ಲ ಎಂದರು.
ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ಕರ್ನಾಟಕದಲ್ಲಿ ಜಾದೂ ಮಾಡಲು ಸಾಧ್ಯವಿಲ್ಲ. ಇಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಮೋದಿ ಅವರ ಅಚ್ಚೇ ದಿನ್ ಕೇವಲ ಅಂಬಾನಿ, ಅದಾನಿಗಳಿಗೆ ಮಾತ್ರ ಬಂದಿದ್ದು ಸಾಮಾನ್ಯ ಜನರಿಗಲ್ಲ ಸಬ್ ಕಾ ಸಾಥ್ ಸಬ್ ವಿಕಾಸ್ ನಲ್ಲಿ ಅಲ್ಪಸಂಖ್ಯಾತ, ಮಹಿಳೆ ರೈತರು ಬರುವುದಿಲ್ಲ ಎಂದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com