ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ರಿಜಿಸ್ಟ್ರಾರ್ ಆಗಿರುವ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ 2018ರ ಹೊಸ ವರ್ಷದಂದು ಕೆಲಸಕ್ಕೆ ಹಾಜರಾಗಿ 1,200 ನೌಕರರಿಗೆ ಸಿಹಿ ಹಂಚಿದ್ದಾರೆ. ಅದೂ 40,000 ರೂಪಾಯಿ ತಮ್ಮ ಸ್ವಂತ ದುಡ್ಡು ಖರ್ಚು ಮಾಡಿ. ಕಳೆದ 5 ವರ್ಷಗಳಿಂದ ಅವರು ಈ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿದ್ದು, ಆಡಳಿತಾಧಿಕಾರಿಗಳು ಮತ್ತು ನೌಕರರ ನಡುವಿನ ಬಾಂಧವ್ಯವನ್ನು ಹೆಚ್ಚಿಸಲು ಮತ್ತು ಕೆಲಸದಲ್ಲಿ ದಕ್ಷತೆಯನ್ನು ಹೆಚ್ಚಿಸಲು ಅವರು ಈ ಕ್ರಮವನ್ನು ಅನುಸರಿಸಿಕೊಂಡು ಬಂದಿದ್ದಾರೆ.