ಮೈಸೂರಿನಲ್ಲಿ ಚಿನ್ನದ ನಿಕ್ಷೇಪ ಪತ್ತೆ, ಶೋಧ ಕಾರ್ಯಾಚರಣೆ ನಡೆಸಲು ಕೆಐಒಸಿಎಲ್‌ ಸಜ್ಜು

ಮೈಸೂರಿನಲ್ಲಿ ಚಿನ್ನ ಹಾಗೂ ತಮಿಳು ನಾಡಿನಲ್ಲಿ ಕಬ್ಬಿಣ ನಿಕ್ಷೇಪಗಳು ಪತ್ತೆಯಾಗಿದೆ
ಚೌಧರಿ ಬೀರೇಂದರ್‌ ಸಿಂಗ್‌
ಚೌಧರಿ ಬೀರೇಂದರ್‌ ಸಿಂಗ್‌
Updated on
ಮಂಗಳೂರು: ಮೈಸೂರಿನಲ್ಲಿ ಚಿನ್ನ ಹಾಗೂ ತಮಿಳು ನಾಡಿನಲ್ಲಿ ಕಬ್ಬಿಣ ನಿಕ್ಷೇಪಗಳು ಪತ್ತೆಯಾಗಿದೆ ಎಂದು ಕೇಂದ್ರ ಉಕ್ಕು ಸಚಿವ ಚೌಧರಿ ಬೀರೇಂದರ್‌ ಸಿಂಗ್‌ ಹೇಳಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಮಂಗಳೂರಿನ ಹೊರವಲಯದ ಕೆಐಒಸಿಎಲ್‌ ಕಾರ್ಖಾನೆಯ ಖಾಲಿ ಜಾಗದಲ್ಲಿ ಒಂದು ಮೆಗಾವ್ಯಾಟ್‌ ಸಾಮರ್ಥ್ಯದ ಸೌರ ವಿದ್ಯುತ್‌ ಘಟಕಕ್ಕೆ ಶಂಕುಸ್ಥಾಪನೆ ಮತ್ತು ಡಿಜಿಟಲ್‌ ಕಿಯೋಸ್ಕ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರು "ಮೈಸೂರು ಹಾಗೂ ತಮಿಳು ನಾಡಿನ ತಿರುವೂರ್ ನಲ್ಲಿ ಚಿನ್ನ ಹಾಗೂ ಕಬ್ಬಿಣ ಅದಿರಿನ ನಿಕ್ಷೇಪಗಳು ಪತ್ತೆಯಾಗಿದ್ದು ಇದರ ಕುರಿತಂತೆ ವಿವರ ಶೋಧ ಕಾರ್ಯಾಚರಣೆ ನಡೆಸಿ ಅಲ್ಲಿ ಲಭ್ಯವಾಗುವ ಚಿನ್ನ ಹಾಗೂ ಕಬ್ಬಿಣದ ಅದಿರಿನ ಪ್ರಮಾಣ ಹಾಗೂ ಗುಣಮಟ್ಟ ಸಂಬಂಧ ವರದಿ ತಯಾರಿಸಿ ನೀಡುವಂತೆ ಕೆಐಒಸಿಎಲ್‌ ಗೆ ಸೂಚಿಸಿದ್ದೇವೆ" ಎಂದು ಹೇಳಿದ್ದಾರೆ.
ದೇಶದಲ್ಲಿ ಹೊಸ ಕಲ್ಲಿದ್ದಲಿನ ನಿಕ್ಷೇಪಗಳು ಪತ್ತೆಯಾದಲ್ಲಿ ಮಂಗಳೂರಿನ ಕೆಐಒಸಿಎಲ್‌ ಉತ್ಪಾದನೆ ಸಾಮರ್ಥ್ಯ ಹೆಚ್ಚಳ ಮಾಡಲು ಸಹಕಾರಿಯಾಗಲಿದೆ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.
ಕೆಐಒಸಿಎಲ್‌ನ ಊದು ಕುಲುಮೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾಪ ಶೀಘ್ರವಾಗಿ ಜಾರಿಯಾಗಲಿದೆ. ೀ ಕಾರ್ಯ ಮುಗಿದ ತಕ್ಶಃಅಣಕ್ಕೆ ಅಲ್ಲಿ 2 ಲಕ್ಷ ಟನ್‌ ಸಾಮರ್ಥ್ಯದ ಡಿಐ (ಡಕ್ಟೈಲ್‌ ಐಯರ್ನ್‌) ಪೈಪ್‌ಗಳನ್ನು ತಯಾರಿಸುವ ಘಟಕ  ಸ್ಥಾಪನೆಗೆ ಅವಕಾಶವಾಗಲಿದೆ. ಈ ಯೋಜನೆ ಪೂರ್ಣಗೊಂಡರೆ ದೇಶದ ಮೂರನೇ ಘಟಕವಾಗಿ ಕಾರ್ಯ ನಿರ್ವಹಿಸಲಿದ್ದು ತುಕ್ಕು ರಹಿತ, ಸೋರಿಕೆ ರಹಿತ ಪೈಪ್ ಗಳನ್ನಿಲ್ಲಿ ತಯಾರಿಸಬಹುದು. ಇವುಗಳನ್ನು ನೀರು ಸರಬರಾಜು ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
"ಬಳ್ಳಾರಿಯಲ್ಲಿ ಇದಾಗಲೇ ಮ್ಯಾಂಗನೀಸ್ ಗಣಿಗಾರಿಕೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ 2 ಮಿಲಿಯನ್‌ ಟನ್‌ ಸಾಮರ್ಥ್ಯದ ಕಬ್ಬಿಣದ ಉಂಡೆ ತಯಾರಿ ಘಟಕವನ್ನು ಬಳ್ಳಾರಿಯಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಇದಾಗಲೇ ರಾಜ್ಯ ಸರ್ಕಾರದ ಸಕಾರಾತ್ಮಕ ಪ್ರತಿಕ್ರಿಯೆ ಇದಕ್ಕೆ ದೊರಕಿದ್ದು ಕೇಂದ್ರ ಸರ್ಕಾರವು ಅತ್ಯಂತ ಶಿಘ್ರದಲ್ಲಿ ಈ ಘಟಕ ಕಾರ್ಯಾರಂಭ ಮಾಡಲಿದೆ" ಎಂದು ಅವರು ಹೇಳಿದ್ದಾರೆ.
ಆಂದ್ರ ಪ್ರದೇಶದ ವಿಶಾಖಪಟ್ಟಣದಲ್ಲಿ 1.2 ಮಿಲಿಯನ್‌ ಟನ್‌ ಸಾಮರ್ಥ್ಯದ ಕಬ್ಬಿಣದ ಉಂಡೆ ತಯಾರಿ ಘಟಕ ಸ್ಥಾಪನೆಯಾಗಲಿದೆ. ಇದಕ್ಕಾಗಿ ಕೆಐಒಸಿಎಲ್‌ ಆಂದ್ರದ ಆರ್‌ಐಎನ್‌ಎಲ್‌ ಸಂಸ್ಥೆಯೊಡನೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com