ರೈತರ ಆತ್ಮಹತ್ಯೆ: ಪರಿಹಾರ ನೀಡಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿಗೆ ಅಗ್ರಸ್ಥಾನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು 2017,ರ ಸಾಲಿನಲ್ಲಿರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಪಡೆದುಕೊಂಡ ಪೈಕಿ ಅಗ್ರಸ್ಥಾನದಲ್ಲಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು 2017,ರ ಸಾಲಿನಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಪಡೆದುಕೊಂಡ ಪೈಕಿ ಅಗ್ರಸ್ಥಾನದಲ್ಲಿದೆ ಎಂದು ಕೃಷಿ ಇಲಾಖೆ ಅಂಕಿಅಂಶಗಳು ಹೇಳಿದೆ. ನ.14, 2017 ರ ವೇಳೆಗೆ ಜಿಲ್ಲೆಯ ಒಟ್ಟು  52 ರೈತರ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಅವರ ಕುಟುಂಬಕ್ಕೆ ಪರಿಹಾರಗಳನ್ನು ನೀಡಲಾಗಿದೆ. ರೈತರ ಆತ್ಮಹತ್ಯೆ ಪ್ರಮಾಣದಲ್ಲಿ ಮೈಸೂರಿನ ನಂತರದ ಸ್ಥಾನ ಬೆಳಗಾವಿಯದಾಗಿದ್ದು ಅಲ್ಲಿ ಒಟ್ಟು 51 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ 
ಆದರೆ ಕಳೆದ ಎರಡು ವರ್ಷಗಳಲ್ಲಿನ ಅಂಕಿ ಅಂಶಗಳನ್ನು ಹೋಲಿಸಿದಾಗ ಈ ಸಾಲಿನಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಇಳಿಮುಖವಾಗಿದೆ.ರಾಜ್ಯ ಸರ್ಕಾರ ರೈತರ ಸಾಲಮನ್ನಾದಂತಹಾ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಹ ರೈತರ ಆತ್ಮಹತ್ಯೆ ನಿಂತಿಲ್ಲ. 2017ರ ಜನವರಿ 1 ರಿಂದ ಡಿಸೆಂಬರ್ 14 ರವರೆಗೆ 890 ರೈತ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು ಅದರಲ್ಲಿ 627 ಪ್ರಕರಣಗಳು ನಿಜವಾದವೆಂದು ಒಪ್ಪಿಕೊಳ್ಳಲಾಗಿದೆ.
618 ಪ್ರಕರಣಗಳಲ್ಲಿ ಪರಿಹಾರವನ್ನು ಪಾವತಿಸಿದ್ದರೆಮತ್ತು 145 ಪ್ರಕರಣಗಳಲ್ಲಿ ತಿರಸ್ಕರಿಸಲಾಗಿದೆ. ಬೆಳೆ ನಷ್ಟದ ಕಾರಣದಿಂದಾಗಿ ರೈತ ಆತ್ಮಹತ್ಯೆ ನಡಿದರೆ 5 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ನೀಡುತ್ತದೆ.ಇನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ 74 ಪ್ರಕರಣಗಳು ದಾಖಲಾಗಿದ್ದವು.ಅದರಲ್ಲಿ ಒಟ್ಟು 48 ಪ್ರಕರಣಗಳು ನಿಖರವಾದ್ದಎಂದು ಸಾಬೀತಾದರೆು ಉಳಿದ ಹದಿನೇಳು ತಿರಸ್ಕೃತವಾಗಿದ್ದವು. ಮೈಸೂರು ಜಿಲ್ಲೆಯ ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ 70 ಪ್ರಕರಣಗಳಲ್ಲಿ 52 ಪ್ರಕರಣದಲ್ಲಿ ಪರಿಹಾರ ವಿತರಿಸಲಾಗಿದೆ. 30 ಜಿಲ್ಲೆಗಳ ಪೈಕಿ 10ರಲ್ಲಿ, ರೈತರ ಆತ್ಮಹತ್ಯೆಗಳ ಸಂಖ್ಯೆ 30 ಕ್ಕಿಂತ ಹೆಚ್ಚಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿಲ್ಲ. . ಬೆಂಗಳೂರು ಗ್ರಾಮೀಣ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗಿದ್ದು ,ಪ್ರಸಕ್ತ  ವರ್ಷದಲ್ಲಿ ಕೇವಲ ಎರಡು ಪ್ರಕರಣಗಳು ವರದಿಯಾಗಿವೆ. ಅಧಿಕೃತ ಅಂಕಿಅಂಶಗಳು ತಮ್ಮ ಜೀವನದ ಅಂತ್ಯಗೊಳಿಸಿಕೊಂಡಿದ್ದ ರೈತರ ನಿಖರವಾದ ಸಂಖ್ಯೆಯನ್ನು ಸರ್ಕಾರಿ ದಾಖಲೆಗಳು ನೀಡುವುದಿಲ್ಲ, "ಕಳೆದ ನಾಲ್ಕು ವರೆ ವರ್ಷಗಳಲ್ಲಿ ಸುಮಾರು 4,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ." ಎಂದು ಕರ್ನಾಟಕ ರಾಜ್ಯ ಕಬ್ಬು ಬೆಲೆಗರಾರಾ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಕ್ಸ್ ಪ್ರೆಸ್ ಗೆ ತಿಳಿಸಿದರು "ನಮ್ಮ ಸರ್ಕಾರದ ವಿವಿಧ ಯೋಜನೆಗಳಿಂದ ಆತ್ಮಹತ್ಯಾ ಸಂಖ್ಯೆ ಕಡಿಮೆಯಾಗಿದೆ. ರೈತರ ಆತ್ಮಹತ್ಯೆಗೆ ಅವರ ಸಾಲಬಾಧೆಯು ಸಾಮಾನ್ಯ ಕಾರಣವಾಗಿದೆ" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com