ವೈದ್ಯಕೀಯ ಸೇವೆಗೆ ಸರ್ಕಾರ ಆದ್ಯತೆ, ದೂರದ ಪ್ರದೇಶಗಳಲ್ಲಿ 150 ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ನಿರ್ಧಾರ

ರಾಜ್ಯದ ದೂರ ದೂರದ ಹಳ್ಳಿ ಪ್ರದೇಶಗಳಲ್ಲಿ 150 ಆರೋಗ್ಯ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳುರು: ರಾಜ್ಯದ ದೂರ ದೂರದ ಹಳ್ಳಿ ಪ್ರದೇಶಗಳಲ್ಲಿ 150 ಆರೋಗ್ಯ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ. ಇದರ ಕಾರ್ಯಾಚರ್ಣೆಗೆ ವಾರ್ಷಿಕ 14.45 ಕೋಟಿ ರೂ. ಬೇಕಾಗಬಹುದೆಂದು ಪ್ರಕಟಣೆಯಲ್ಲಿ ಹೇಳಿದೆ.
ಈ ಉದ್ದೇಶಕ್ಕಾಗಿ ವೈದ್ಯರು, ದಾದಿಯರು ಮತ್ತು ಗ್ರೂಪ್ ಡಿ ನೌಕರರ ಒಟ್ಟು 450 ಹುದ್ದೆಗಳನ್ನು ರಚಿಸಲಾಗುವುದು. ವೈದ್ಯರಿಗೆ 45,000 ರೂಪಾಯಿಯ ಮಾಸಿಕ ಸಂಬಳ ದಾದಿಯರಿಗೆ 13,072 ರೂ. ಮತ್ತು  ಗ್ರೂಪ್ ಡಿ ಸಿಬ್ಬಂದಿಗೆ 12,243 ರೂ. ವೇತನ ನಿಗದಿಪಡಿಸಲಾಗುತ್ತದೆ. ಎಲ್ಲಾ ಹುದ್ದೆಗಳನ್ನೂ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರದ ಪ್ರಕಟಣೆ ಹೇಳಿದೆ. ಈ ವೇಳೆ ಈಗಾಗಲೇ ಇಲಾಖೆಯಲ್ಲಿ ಸುಮಾರು 500 ಹುದ್ದೆಗಳು ಖಾಲಿಯಾಗಿವೆ, ಅವುಗಳಲ್ಲಿ 466 ಹುದ್ದೆಗಳನ್ನು ಕೆಪಿಎಸ್ ಸಿ ಮೂಲಕ ತುಂಬಿಸಲಾಗುವುದು.
"ನಾವು ಒಪ್ಪಂದದ ಆಧಾರದ ಮೇಲೆ ವೈದ್ಯರನ್ನು ನೇಮಕ ಮಾಡಲಿದ್ದೇವೆ ಆದ್ದರಿಂದ ನೇಮಕಾತಿ ಸಮಸ್ಯೆ ಆಗುವುದಿಲ್ಲ. ಇನ್ನೂ ಹೆಚ್ಚು ಪ್ರಮಾಣದ ವೈದ್ಯರು ಬೇಕಾದಲ್ಲಿ ನಮ್ಮ ಇಲಾಖೆಯ ಸಾಮಾನ್ಯ ವೈದ್ಯರನ್ನು ಸಹ ವಿಶೇಷ ಚಿಕಿತ್ಸಾಲಯಗಳ ಕೆಲಸಕ್ಕಾಗಿ ವರ್ಗಾಯಿಸಲಿದ್ದೇವೆ.  ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಇಂತಹಾ ಚಿಕಿತ್ಸಾಲಯಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭಾಗೊಳ್ಳಲಿದೆ.
"ಪ್ರತಿ 30,000 ಜನರಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿರಬೇಕು. ಆ ನಿಯಮದ ಪ್ರಕಾರ, ರಾಜ್ಯವು 1,400 ಪಿಎಚ್ ಸಿ ಗಳನ್ನು ಹೊಂದಿರಬೇಕು, ನಾವು 2,400 ಪಿಎಚ್ ಸಿ ಗಳನ್ನು ಹೊಂದಿದ್ದೇವೆ, ಆದರೆ ನಾವು 10 ಕಿಮೀ ವ್ಯಾಪ್ತಿಯಲ್ಲಿ ಒಂದು ಕ್ಲಿನಿಕ್ ಅನ್ನು ಹೊಂದಲು ಬಯಸುವ ಕಾರಣ, ಇವುಗಳನ್ನು ಸ್ಥಾಪಿಸಲಾಗುತ್ತಿದೆ. ಇದು ವೈದ್ಯ ಸಮಾಲೋಚನೆಗೆ ಮಾತ್ರವೇ ಇರುತ್ತದೆ ಮತ್ತು ಯಾವುದೇ ಹಾಸಿಗೆಗಳಿರುವುದಿಲ್ಲ."  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ  ಹೆಚ್ಚುವರಿ ಮುಖ್ಯ ಕಾರ್ಯದರ್ಶಿ,ಅಜಯ್ ಸೇತ್ ಹೇಳಿದರು.
ಪ್ರತಿ ಚಿಕಿತ್ಸಾಲಯದ ಕಾರ್ಯಾಚರಣೆಯ ವೆಚ್ಚವು `18,350 ಆಗಿರುತ್ತದೆ. ಗ್ರಾಮ ಪಂಚಾಯತ್ ಕಛೇರಿಗಳು, ಶಾಲೆಗಳು, ಸಮುದಾಯ ಭವನಗಳು ಮತ್ತು ಸರ್ಕಾರದ ಕಟ್ಟಡಗಳನ್ನು ಇದಕ್ಕಾಗಿ ಬಳಸಲಾಗುವುದು. ಇವುಗಳಲ್ಲಿ ಯಾವುದೂ ಲಭ್ಯವಾಗಿಲ್ಲದ ಪಕ್ಷದಲ್ಲಿ , `2,000 ರೂ.ಬಾಡಿಗೆಗೆ ಕಟ್ಟಡಗಳನ್ನು ತೆಗೆದುಕೊಳ್ಳಲಾಗುತ್ತದೆ. ಇದರ ಉದ್ದೇಶಕ್ಕಾಗಿ ಯಾವುದೇ ಹೊಸ ಕಾಮಗಾರಿಗಳನ್ನು ಮಾಡಲಾಗುವುದಿಲ್ಲ. ಪ್ರತಿ ಚಿಕಿತ್ಸಾಲಯಕ್ಕೆ ಕರ್ನಾಟಕ ಡ್ರಗ್ ಲಾಜಿಸ್ಟಿಕ್ಸ್ ಮತ್ತು ವೇರ್ಹೌಸ್ ಸೊಸೈಟಿಯಿಂದ 10,000 ಡಾಲರ್ ಮೌಲ್ಯದ  ಔಷಧಿಗಳನ್ನು ಒದಗಿಸಲಾಗುತ್ತದೆಮತ್ತು ಪ್ರತಿ ಚಿಕಿತ್ಸಾಲಯಕ್ಕೆ ಪೀಠೋಪಕರಣಗಳನ್ನು ಸಂಗ್ರಹಿಸಲು 50,000 ರೂ. ಮೀಸಲಿರುತ್ತದೆ ಎಂದು ಮಾಹಿತಿ ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com