ಬೆಂಗಳೂರು: ಶಾಸಕರ ಜನ್ಮದಿನ ಕಾರ್ಯಕ್ರಮ, ಶಾಲಾ ಮಕ್ಕಳಿಗೆ ಬಿಸಿಲಲ್ಲಿ ಕಾಯುವ ಶಿಕ್ಷೆ!

ಬೆಂಗಳೂರು ನಗರದ ಶಾಲೆಗಳ ನೂರಾರು ವಿದ್ಯಾರ್ಥಿಗಳು ನಿನ್ನೆ ಸುಮಾರು ಎರಡು ಗಂಟೆಗಳ ಖಾಲ ಬಿಸಿಲಿನಲ್ಲಿ ಒಣಗಭೇಕಾಯಿತು.
ಶಾಸಕರ ಜನ್ಮದಿನದ ಆಚರಣೆಗಾಗಿ ಶಾಲಾ ಮಕ್ಕಳು ಪೊಲೀಸ್ ಹಾಕಿ ಮೈದಾನದಲ್ಲಿ ಕಾಯುತ್ತಿದ್ದರು
ಶಾಸಕರ ಜನ್ಮದಿನದ ಆಚರಣೆಗಾಗಿ ಶಾಲಾ ಮಕ್ಕಳು ಪೊಲೀಸ್ ಹಾಕಿ ಮೈದಾನದಲ್ಲಿ ಕಾಯುತ್ತಿದ್ದರು
ಬೆಂಗಳೂರು: ಬೆಂಗಳೂರು ನಗರದ ಶಾಲೆಗಳ ನೂರಾರು ವಿದ್ಯಾರ್ಥಿಗಳು ನಿನ್ನೆ ಸುಮಾರು ಎರಡು ಗಂಟೆಗಳ ಖಾಲ ಬಿಸಿಲಿನಲ್ಲಿ ಒಣಗಭೇಕಾಯಿತು. ಇಷ್ಟಕ್ಕೂ ನಿನ್ನೆ ಅಂತಹಾ ವಿಶೇಷ ದಿನವಲ್ಲದಿದ್ದರೂ ಈ ವಿದ್ಯಾರ್ಥಿಗಳು ಮಾತ್ರ ಶಾಸಕರೊಬ್ಬರ ಹುಟ್ಟುಹಬ್ಬಕ್ಕೆ ಶುಭಕೋರುವ ಸಲುವಾಗಿ ಬಿಸಿಲಿನಲ್ಲಿ ಎರಡು ಗಂಟೆಗಳ ಕಾಲ ನಿಲ್ಲಿಸಲಾಗಿತ್ತು!  ಶಾಸಕ ಎನ್.ಎ. ಹ್ಯಾರೀಸ್ ಅವರ ಜನ್ಮ ದಿನದ ಪ್ರಯುಕ್ತ ಶಾಲಾ ಮಕ್ಕಳಿಗೆ ವಿಶೇಷ ಭೋಜನವನ್ನು ವ್ಯವಸ್ಥೆಗೊಳಿಸುವುದಾಗಿ ಹೇಳಿದ್ದ ಶಾಸಕರು ಮಕ್ಕಳು ಗರುಡಾ ಮಾಲ್ ಎದುರಿನ ಪೋಲೀಸ್ ಹಾಕಿ ಮೈದಾನದಲ್ಲಿ ಸೇರಲು ಹೇಳಿದ್ದರು. ಆದರೆ ಅವರು ಮಾತ್ರ ನಿಗದಿತ ವೇಳೆಗಿಂತ ಎರಡು ಗಂಟೆಗಳ ಕಾಲ ತಡ ಮಾಡಿ ಬಂದ ಕಾರಣ ಮಕ್ಕಳು ಬಿರಿಬಿಸಿಲಿನಲ್ಲಿ ನಿಂತುಕೊಳ್ಳುವ ದಾರುಣ ಸ್ಥಿತಿ ಎದುರಾಗಿತ್ತು.
ಶಾಂತಿನಗರ ವಿಧಾನಸಭಾ ಕ್ಷೇತ್ರದ ಆಶಾಲಾ ಮಕ್ಕಳಿಗೆ ಶಾಸಕ ಹ್ಯಾರೀಸ್ ಅವರು ಬ್ಯಾಗ್ ಹಾಗೂ ಊಟ ವಿತರಿಸಲಿದ್ದಾರೆ, ಇದಕ್ಕಾಗಿ ಅವರನ್ನು ಹಾಕಿ ಮೈದಾನಕ್ಕೆ ಕರೆತರಬೇಕೆಂದು ಶಾಲೆಗಳಿಗೆ ಶಾಸಕರ ಕಛೇರಿಯಿಂದ ಆದೇಶ ಬಂದಿತ್ತು. ಅದರಂತೆ ಬಹುತೇಕ ಶಾಲಾ ಮಕ್ಕಳು ಬೆಳಗ್ಗೆ 10.30ಕ್ಕೆಲ್ಲಾ ಮೈದಾನದಲ್ಲಿ ನೆರೆದಿದ್ದರು. ಆದರೆ ಶಾಸಕ ಹ್ಯಾರೀಸ್ ಮದ್ಯಾಹ್ನ 1 ಗಂಟೆಗೆ ಆಗಮಿಸಿದ ಹೊರತೂ ಯಾರೊಬ್ಬರಿಗೂ ಊಟ  ವಿತರಿಸಲಾಗಲಿಲ್ಲ. ಮಕ್ಕಳು ಅರ್ಧದಿನದ ತರಗತಿಗಳನ್ನು ವ್ಯರ್ಥಮಾಡಿಕೊಂಡದ್ದಲ್ಲದೆ ಬಿಸಿಲಿನಲ್ಲಿ ನಿಂತು ದಣಿಯಬೇಕಾಯಿತು.
" ಶಾಸಕರು ಮಕ್ಕಳಿಗೆ ಉಚಿತ ಬ್ಯಾಗ್ ವಿತರಿಸಲು ಬಯಸಿದ್ದಲ್ಲಿ ಅವರೇ ಆಯಾ ಶಾಲೆಗಳಿಗೆ ತೆರಳಿ ಬ್ಯಾಗ್ ಹಂಚಬಹುದಾಗಿತ್ತು, ಮಕ್ಕಳನ್ನು ಮೈದಾನಕ್ಕೆ ಕರೆಸುವ ಅಗತ್ಯವಿರಲಿಲ್ಲ" ಎಂದು ಓರ್ವ ಶಾಲಾ ಶಿಕ್ಷಕಿ ಹೇಳಿದ್ದಾರೆ.
ಆದರೆ ಇನ್ನೋರ್ವ ಶಿಕ್ಷಕರು ಹ್ಯಾರೀಸ್ ಜನ್ಮ ದಿನದಲ್ಲಿ ಮಕ್ಕಳು ಪಾಲ್ಗೊಂಡದ್ದರಲ್ಲಿ ತಪ್ಪಿಲ್ಲ. ಅವರು ಸುಮಾರು 5,000 ಬ್ಯಾಗ್ ವಿತರಿಸಿದ್ದಾರೆ ಎಂದು ಶಾಸಕರನ್ನು ಸಮರ್ಥಿಸಿಕೊಂಡಿದ್ದಾರೆ. "ನಾವೆಲ್ಲರೂ ಸಾಮಾನ್ಯ ದಿನಗಳಂತೆಯೇ ಶಾಲೆಗೆ ಬಂದಿದ್ದೆವು ಆದರೆ ಶಾಲೆ ಪ್ರಾರಂಬವಾದ ಒಂದು ಗಂಟೆಯ ನಂತರ ಶಿಕ್ಷಕನು ಶಾಸಕರ ಹುಟ್ಟುಹಬ್ಬದ ಆಚರಣೆಯನ್ನು ವೀಕ್ಷಿಸುವ ಸಲುವಾಗಿ ಮೈದಾನಕ್ಕೆ ತೆರಳಲು ಹೇಳಿದ್ದಾರೆ"  ಜೋಗುಪಾಳ್ಯದಲ್ಲಿನ ಶಾಲೆಯೊಂದರ ಆರನೇ ತರಗತಿ ವಿದ್ಯಾರ್ಥಿ ಹೇಳಿದ್ದಾನೆ. ನೀಲಸಂದ್ರದ ಬೋಸ್ಟನ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಹೇಳುವಂತೆ ಅವರಿಗೆ ಬೆಳಗಿನ ಅಸೆಂಬ್ಲಿಯಲ್ಲಿ ಶಾಸಕರ ಜನ್ಮ ದಿನದ ಕಾರ್ಯಕ್ರಮ ವಿವರ ತಿಳಿಸಲಾಗಿತ್ತು.
ಈ ಸಂಬಂಧ ಹ್ಯಾರೀಸ್ ಅವರಿಗೆ ಕರೆ ಮಾಡಿ ಕೇಳಲಾಗಿ "ನಾನು ಪ್ರತಿ ವರ್ಷ ಜನ್ಮ ದಿನ ಆಚರಿಸಿಕೊಳ್ಳುತ್ತೇನೆ, ಜನರು ನನಗೆ ಶುಭಾಶಯ ಕೋರಲು ಬರುತ್ತಾರೆ. ಇದರಲ್ಲಿ ತಪ್ಪೇನು? ಈ ಬಾರಿ ಶಾಲಾ ಮಕ್ಕಳು ನನಗೆ ಶುಭಾಶಯ ಕೋರಿದ್ದರು. ನಾನು ಅವರಿಗೆ ಉಚಿತವಾಗಿ ಬ್ಯಾಗ್ ವಿತರಿಸಿದ್ದೇನೆ" ಎಂದರು. ಶಾಲಾ ಮಕ್ಕಳನ್ನು ಮೈದಾನದಲ್ಲಿ ಕಾಯಿಸಿದ್ದರ ಕುರಿತಾಗಿ ಕೇಳಲು ಪ್ರತಿಕ್ರಯಿಸಲು ನಿರಾಕರಿಸಿದ ಶಾಸಕರು ಕರೆಯನ್ನು ನಿರ್ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com