ಗೊಮ್ಮಟೇಶ್ವರ ವಿರುದ್ಧ ಸರ್ಕಾರಕ್ಕೆ ಪತ್ರ, ಜೈನ ಸಮುದಾಯದಿಂದ ಸದಲಗಾ ಬಂದ್‌

ಶ್ರವಣಬೆಳಗೊಳದ ವಿಶ್ವ ವಿಖ್ಯಾತ ಗೊಮ್ಮಟೇಶ್ವರ ಮೂರ್ತಿಗೆ ಚಡ್ಡಿ ತೊಡಿಸಬೇಕೆಂದು ಕೋರಿ ವ್ಯಕ್ತಿಯೊಬ್ಬರು ಸರ್ಕಾರಕ್ಕೆ ಪತ್ರ ಬರೆದಿರುವುದನ್ನು ವಿರೋಧಿಸಿ.........
ಶ್ರವಣಬೆಳಗೊಳದ  ಗೊಮ್ಮಟೇಶ್ವರ
ಶ್ರವಣಬೆಳಗೊಳದ ಗೊಮ್ಮಟೇಶ್ವರ
ಬೆಳಗಾವಿ: ಶ್ರವಣಬೆಳಗೊಳದ ವಿಶ್ವ ವಿಖ್ಯಾತ ಗೊಮ್ಮಟೇಶ್ವರ ಮೂರ್ತಿಗೆ ಚಡ್ಡಿ ತೊಡಿಸಬೇಕೆಂದು ಕೋರಿ ವ್ಯಕ್ತಿಯೊಬ್ಬರು ಸರ್ಕಾರಕ್ಕೆ ಪತ್ರ ಬರೆದಿರುವುದನ್ನು ವಿರೋಧಿಸಿ ಜೈನ ಸಮುದಾಯ ಬೆಳಗಾವಿಯ ಸದಲಗಾ ಬಂದ್‌ ನಡೆಸಿದ್ದಾರೆ. 
ಬೆಳಗಾವಿ ಜಿಲ್ಲೆ, ಚಿಕ್ಕೋಡಿ ತಾಲೂಕಿನ ಸದಲಗಾ ಬಂದ್ ಹಿನ್ನೆಲೆಯಲ್ಲಿ ಇಂದು ಬೆಳಗಿನಿಂದ ಪಟ್ಟಣದಲ್ಲಿ ಜನಸಂಚಾರ ವಿರಳವಾಗಿದ್ದು ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದೆ. ಸರ್ಕಾರಿ ಬಸ್ ಸಂಚಾರವು ಅಲ್ಲಲ್ಲಿ ಕಂಡು ಬರುತ್ತಿದೆ.
ಪತ್ರಕರ್ತ ಪ್ರಭು ಆದಿ ಎನ್ನುವವರು ಶ್ರವಣಬೆಳಗೊಳದ ಬಾಹುಬಲಿಗೆ ಚಡ್ಡಿ ತೊಡಿಸಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ಇದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಜೈನ ಸಮುದಾಯದ ಮುಖಂಡರು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರಲ್ಲದೆ ತಹಶೀಲ್ದಾರ್ ಮುಖೇನ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಗಿ ಪೋಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com