ಬೆಂಗಳೂರು: ಕೆಐಎ ಹೆಲಿ ಪೋರ್ಟ್ ಕಾಮಗಾರಿ ಪೂರ್ಣ, ಶೀಘ್ರವೇ ಹೆಲಿ ಟ್ಯಾಕ್ಸಿ ಸೇವೆ ಪ್ರಾರಂಭ

ಕಳೆದ ವರ್ಷ ಘೋಷಿಸಲಾಗಿದ್ದ ಬಹುನಿರೀಕ್ಷಿತ ಹೆಲಿ-ಟ್ಯಾಕ್ಸಿ ಸೇವೆಯ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ ಎಲೆಕ್ಟ್ರಾನಿಕ್ ಸಿಟಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಈ ಸೇವೆ ಲಭ್ಯವಾಗಲಿದೆ.
ಕೆಐಎ
ಕೆಐಎ
ಬೆಂಗಳೂರು:  ಕಳೆದ ವರ್ಷ ಘೋಷಿಸಲಾಗಿದ್ದ ಬಹುನಿರೀಕ್ಷಿತ ಹೆಲಿ-ಟ್ಯಾಕ್ಸಿ ಸೇವೆಯ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ ಎಲೆಕ್ಟ್ರಾನಿಕ್ ಸಿಟಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಈ ಸೇವೆ ಲಭ್ಯವಾಗಲಿದೆ. 
2017 ರ ಆಗಸ್ಟ್ ನಲ್ಲಿ, ತಂಬಿ ಏವಿಯೇಷನ್ ಸಂಸ್ಥೆಯು ತಾನು ನಗರದ ಪ್ರಮುಖ ಭಾಗಗಳಿಂದ ಕೆಐಎ ಗಝೆಲಿ ಟ್ಯಾಕ್ಸಿ ಸೇವೆ ಒದಗಿಸುವುದಾಗಿ ಹೇಳಿತ್ತು. ಎಲೆಕ್ಟ್ರಾನಿಕ್ ಸಿಟಿ ನಗರದ ದೊಡ್ಡ ಐಟಿ ವಲಯವಾಗಿದ್ದು ವಿಮಾನ ನಿಲ್ದಾಣಕ್ಕೆ ಸಾಕಷ್ಟು ದೂರದಲ್ಲಿದೆ. ಈಗ, ಕೆಐಎ ನ ಹೆಲಿ ಪೋರ್ಟ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಈ ವಾರದಿಂದ ಕೆಲಸ ಪ್ರಾರಂಭಗೊಳ್ಳಲಿದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹೆಲಿ ಪ್ಯಾಡ್ ನಿರ್ಮಾಣ ಕಾಮಗಾರಿ ಶೀಘ್ರವಾಗಿ ಪ್ರಾರಂಭಗೊಳ್ಳಲಿದೆ ಎಂದು ತಂಬಿ ಏವಿಯೇಷನ್ಸ್ ಸಂಸ್ಥೆಯ ಅಧ್ಯಕ್ಷ ಕೆ ಎನ್ ಜಿ ನಾಯರ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಈ ಸೇವೆ ಪ್ರಾರಂಭಗೊಳ್ಳುವ ದಿನಾಂಕವಿನ್ನೂ ನಿಗದಿಯಾಗಿಲ್ಲವಾದರೂ ಕೆಐಎ ನಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು ಇನ್ನು ಕೆಲ ತಿಂಅಗ್ಳುಗಳಲ್ಲಿ ಹೆಲಿ ಟ್ಯಾಕ್ಸಿ ಸೇವೆ ನಗರದಲ್ಲಿ ಪ್ರಾಋಅಂಭವಾಗುವ ನಿರೀಕ್ಷೆ ಇದೆ ಎಂದು ಸಂಸ್ಥೆಯ ಅಧ್ಯಕ್ಷರು ಹೇಳಿದ್ದಾರೆ.
ಪ್ರಸ್ತುತ, ಕೆಐಎ-ಎಲೆಕ್ಟ್ರಾನಿಕ್ ಸಿಟಿ ಮಾರ್ಗಕ್ಕೆ ಐಷಾರಾಮಿ ಟ್ಯಾಕ್ಸಿಗಳಲ್ಲಿ `2,000-` 3,000 ಶುಲ್ಕ ಇದ್ದು ನಗರದ ರಸ್ತೆಗಳ ಮೂಲಕ 120 ನಿಮಿಷದ ಪ್ರಯಾಣಿಸುವ ಬದಲು ಹೆಲಿ ಟ್ಯಾಕ್ಸಿಯಲ್ಲಿ ಹದಿನೈದು ನಿಮಿಷಕ್ಕೆ ಗಮ್ಯ ತಲುಪಲು ಸಾಧ್ಯವೆಂದು ತಂಬಿ ಏವಿಯೇಷನ್ಸ್ ಭರವಸೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com