ಬಿಬಿಎಂಪಿ ಬಜೆಟ್: ವಾಸ್ತವಕ್ಕೆ ಹತ್ತಿರವಾದ ಬಜೆಟ್ ಗಾಗಿ ಪಾಲಿಕೆ ತಯಾರಿ

ಈ ಸಾಲಿನಲ್ಲಿ ವಾಸ್ತವಿಕ ಮತ್ತು ಕಾರ್ಯಗತಗೊಳಿಸಬಹುದಾದ ಬಜೆಟ್ ಅನ್ನು ಪ್ರಸ್ತುತಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಯತ್ನಿಸುತ್ತಿದೆ.
ಬಿಬಿಎಂಪಿ
ಬಿಬಿಎಂಪಿ
Updated on
ಬೆಂಗಳೂರು: ಈ ಸಾಲಿನಲ್ಲಿ ವಾಸ್ತವಿಕ ಮತ್ತು ಕಾರ್ಯಗತಗೊಳಿಸಬಹುದಾದ ಬಜೆಟ್ ಅನ್ನು ಪ್ರಸ್ತುತಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಯತ್ನಿಸುತ್ತಿದೆ. ಆದರೆ ಅಂತಿಮ ಖರ್ಚು-ವೆಚ್ಚ ನಿರ್ಧಾರ ಇನ್ನೂ ಆಗಿಲ್ಲ. ಪ್ರಾರಂಭದಲ್ಲಿ ಬಿಬಿಎಂಪಿ ಸಿದ್ದಪಡಿಸುವ ಬಜೆಟ್ ವಾಸ್ತವಿಕವಾಗಿರಲಿದೆ, ಆದರೆ ಹಣಹೂಡಿಕೆ ನಂತರ ತನ್ನ ಗಾತ್ರದಲ್ಲಿ ಹೆಚ್ಚಾಗುತ್ತದೆ ಅಲ್ಲದೆ ವಾಸ್ತವ ಯೋಜನೆಗಳು ಕಡಿಮೆಯಾಗುತ್ತದೆ ಎಂಡು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ಎರಡು ಅಥವಾ ಮೂರು ವರ್ಷಗಳಲ್ಲಿ ಹಣಹೂಡಿಕೆ ಹೆಚ್ಚಿನ ಪ್ರಮಾಣದಲ್ಲಿತ್ತು ಎಂದು ಅವರು ಹೇಳಿದ್ದಾರೆ.
2017 ರಲ್ಲಿ, ಬಜೆಟ್ ಗಾತ್ರವು 12,000 ಕೋಟಿ ರೂಪಾಯಿಗಳಷ್ಟು ತಲುಪಬಹುದೆಂದು ಬಜೆಟ್ ಪೂರ್ವ ವರದಿಯಲ್ಲಿ ಹೇಳಲಾಗಿತ್ತು. ಆದರೆ ಅಂತಿಮವಾಗಿ 9,241 ಕೋಟಿ ರೂ. ಗಾತ್ರದ ಬಜೆಟ್ ಮಂಡನೆಯಾಗಿತ್ತು. 
ರಾಜ್ಯ ಬಜೆಟ್ ಮಂಡನೆಯಾದ 10-15 ದಿನಗಳ ನಂತರ ಬಿಬಿಎಂಪಿ ಬಜೆಟ್ ಮಂಡಿಸಲಾಗುವುದು ಎಂದು ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. "ಬಜೆಟ್ ನಮ್ಮ ಆದಾಯ ಮತ್ತು ಸಂಪನ್ಮೂಲಗಳನ್ನು ಪ್ರತಿಬಿಂಬಿಸಬೇಕಾಗಿದೆ. ನಾವು ಬೃಹತ್ ಮೊತ್ತದ ಬಜೆಟ್ ತಯಾರಿಸುತ್ತಿರುವುದೇ ಈಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾರಣ. ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ಇನ್ನೂ ಹಣ ಪಾವತಿಯಾಗಿಲ್ಲ. ವಾರ್ಷಿಅಕ ಶೇ.5-10 ಹೆಚ್ಚುವರಿ ವೆಚ್ಚವು ಉತ್ತಮವಾಗಿರುತ್ತದೆ. ಆದರೆ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವೆಚ್ಚಗಳನ್ನು ಹೆಚ್ಚಳ ಮಾಡಬಾರದು." ಅವರು ಹೇಳಿದರು.
ಜನಪ್ರತಿನಿಧಿಗಳ ಸಮೂಹವು ಸ್ಥಳೀಯ ಕಲ್ಯಾಣ ಸಂಘಟನೆ (ಆರ್ ಡಬ್ಲ್ಯು ಎ) ನ ಸದಸ್ಯರು, 18-25 ವರ್ಷ ವಯೋಮಾನದ ಯುವಕರು,ಕಾರ್ಪೋರೇಟರ್ ಗಳಿಂದ ಉತ್ತ್ಮ ಬಜೆಟ್ ಗಾಗಿನ ಖೆಗಳನ್ನು ಪಡೆಯಲಾಗುತ್ತದೆ ಎಂದು ಬಿಬಿಎಂಪಿ ಮೇಯರ್ ಸಂಪತ್ ರಾಜ್ ಹೇಳಿದ್ದಾರೆ. "ನಾವು ನಾನಾ ವಿಧಾನಗಳಿಂದ ಬಿಬಿಎಂಪಿ ಆದಾಯವನ್ನು ಹೆಚ್ಚಿಸಲು ಯೋಜಿಸುತ್ತಿದ್ದೇವೆ. ನಾನು ಶಾಲೆಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ವಿದ್ಯಾರ್ಥಿಗಳಿಂದ ಸಲಹೆಗಳನ್ನು ಪಡೆದಿದ್ದೇನೆ, ಜತೆಗೆ ಅವರಿಗೆ ತಮ್ಮ ಸಲಹೆಗಳನ್ನು ಕಳಿಸಲು ನಾನು ಮನವಿ ಮಾಡಿದ್ದೇನೆ."
ಬಾಣಸವಾಡಿಯ ಆರ್.ಡಬ್ಲ್ಯು.ಎ ಸದಸ್ಯರು ಮೇಯರ್ ಅವರನ್ನು ಭೇಟಿ ಮಾಡಿದ್ದು ಹಲವಾರು ಮೂಲಸೌಕರ್ಯ-ಸಂಬಂಧಿತ ಅಭಿವೃದ್ಧಿಯ ಕಾರ್ಯಗಳನ್ನು ಬಜೆಟ್ ನಲ್ಲಿ ಸೇರ್ಪಡೆಗೊಳಿಸಬೇಕೆಂದು ಸಲಹೆ ನೀಡಿದ್ದಾರೆ.ಮುಂದಿನ ಮೆಟ್ರೋ ವಿಸ್ತರಣೆ ಮಾರ್ಗದ ಕಾಮಗಾರಿಯ ವೇಳೆ ತಮ್ಮ ಪ್ರದೇಶಗಳಲ್ಲಿ ಮೆಟ್ರೋ ರೈಲು ನಿಲ್ದಾಣ ಸ್ಥಾಪನೆಗೆ ಅವರು ಬೇಡಿಕೆ ಇಟ್ಟಿದ್ದಾರೆ ಎಂದು ಮೇಯರ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com