'ಸುಯೋಗ' ತಂಡದಿಂದ ಭಾರತ ಯಾತ್ರೆ ನಾಟಕ ಜ.20 ರಂದು ಪ್ರದರ್ಶನ

ಸುಯೋಗ ತಂಡದ ಮೊದಲನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಜ.20 ರಂದು ಬೆಂಗಳೂರಿನ ಹನುಮಂತನಗರದ ಕೆ.ಹೆಚ್. ಕಲಾಸೌಧದಲ್ಲಿ ಸಂಜೆ 7 ಕ್ಕೆ ಭಾರತ ಯಾತ್ರೆ" ಎಂಬ ನಾಟಕವನ್ನು
'ಸುಯೋಗ' ತಂಡದಿಂದ ಭಾರತ ಯಾತ್ರೆ ನಾಟಕ ಜ.20 ರಂದು ಪ್ರದರ್ಶನ
'ಸುಯೋಗ' ತಂಡದಿಂದ ಭಾರತ ಯಾತ್ರೆ ನಾಟಕ ಜ.20 ರಂದು ಪ್ರದರ್ಶನ
Updated on
ಬೆಂಗಳೂರು: ಸುಯೋಗ ತಂಡದ ಮೊದಲನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಜ.20 ರಂದು ಬೆಂಗಳೂರಿನ ಹನುಮಂತನಗರದ ಕೆ.ಹೆಚ್. ಕಲಾಸೌಧದಲ್ಲಿ ಸಂಜೆ 7 ಕ್ಕೆ ಭಾರತ ಯಾತ್ರೆ" ಎಂಬ ನಾಟಕವನ್ನು ಆಯೋಜಿಸಲಾಗಿದೆ. 
ಸುಯೋಗ ತಂಡವು ’ಅಳಿಯ ದೇವರು’ ಎಂಬ ಹಾಸ್ಯ ನಾಟಕವನ್ನು ಈಗಾಗಲೇ ಕರ್ನಾಟಕದ ವಿವಿಧ ಭಾಗಗಳಲ್ಲಿ ಪ್ರದರ್ಶಿಸಿದ್ದಾರೆ.  ಭಾರತಿವೃತ್ತೀಯ ದೃಶ್ಯಮಾಲಿಕೆ ಅಕ್ಷರ ಕೆ. ವಿ, ರವರ "ಭಾರತ ಯಾತ್ರೆ" ಜನಸಾಮಾನ್ಯರ ಬದುಕಿಗೆ ಹತ್ತಿರವಾಗಿದ್ದು, ನಾಟಕವು ಜೀವನದ ಸಾಕಷ್ಟು ಉತ್ತರವಿಲ್ಲದ ಪ್ರಶ್ನೆಗಳ ಸುತ್ತ ಕರೆದೊಯ್ಯುವುದರ ಮೂಲಕ, ಉತ್ತರವೇನು! ಎಂಬ ಕುತೂಹಲವನ್ನು ಹಿಡಿದಿಟ್ಟಿರುತ್ತದೆ. ಅಷ್ಟೇ ಅಲ್ಲದೇ ಜಗದ್ಗುರು ಶಂಕರಾಚಾರ್ಯರ ಬದುಕನ್ನು ಉದಾಹರಣೆಯಾಗಿಸಿದೆ. ನಾಟಕವು ಯಾತ್ರೆಯಿಂದಲೇ ಶುರುವಾಗುವುದರಿಂದ ಯಾತ್ರಿಕನ ಜೊತೆ ಒಡನಾಟ ಮಾಡುವವರ ಮೂಲ ಭಾಷೆಯನ್ನೂ ನಾಟಕದಲ್ಲಿ ಕಾಣಬಹುದಾಗಿದೆ. 
ವಿ.ವಾಸು ಕೇಶನ್ ಅವರು ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಅಕ್ಷಯ್ ಭೋಸ್ಲೆ ಸಂಗೀತ ನೀಡಿದ್ದರೆ, ಮಂಜು ನಾರಾಯಣ್ ಬೆಳಕು, ಪ್ರಸಾದನ, ರಾಮಕೃಷ್ಣ ಬೆಳತ್ತೂರು ನಿರ್ವಹಣೆ ಮತ್ತು ವಸ್ತ್ರಾಲಂಕಾರ ಶಾಂತಿ ಎಂ ವಿ ರಾವ್ ಮತ್ತು ತಂಡದವರು ಮಾಡಿದ್ದಾರೆ. ನಾಟಕದ ಕುರಿತು ಹೆಚ್ಚಿನ ಮಾಹಿತಿಗಾಗಿ ವಿ.ವಾಸು ಕೇಶನ್ :+91 99002 21232 ನ್ನು ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com