2021ರ ವೇಳೆಗೆ ಮೆಟ್ರೊ-2ನೇ ಹಂತದ ಕಾಮಗಾರಿ ಪೂರ್ಣ: ಕೇಂದ್ರ ಸಚಿವ ವಿಜಯ್ ಗೋಯಲ್

ನಮ್ಮ ಮೆಟ್ರೊ 2ನೇ ಹಂತದ ಕಾಮಗಾರಿ 2021ಕ್ಕೆ ಮುಕ್ತಾಯವಾಗಲಿದೆ ಎಂದು ....
ಬೆಂಗಳೂರಿನಲ್ಲಿ ನಿನ್ನೆ ನಡೆದ 25ನೇ ಕೇಂದ್ರ ಮತ್ತು ರಾಜ್ಯ ಅಂಕಿಅಂಶ ಸಂಘಟನೆ ಕಾರ್ಯಕ್ರಮದಲ್ಲಿ ಸಚಿವರಾದ ವಿಜಯ್ ಗೋಯಲ್, ಡಿ.ವಿ.ಸದಾನಂದ ಗೌಡ ಮತ್ತು ಎಂ.ಆರ್.ಸೀತಾರಾಮ್
ಬೆಂಗಳೂರಿನಲ್ಲಿ ನಿನ್ನೆ ನಡೆದ 25ನೇ ಕೇಂದ್ರ ಮತ್ತು ರಾಜ್ಯ ಅಂಕಿಅಂಶ ಸಂಘಟನೆ ಕಾರ್ಯಕ್ರಮದಲ್ಲಿ ಸಚಿವರಾದ ವಿಜಯ್ ಗೋಯಲ್, ಡಿ.ವಿ.ಸದಾನಂದ ಗೌಡ ಮತ್ತು ಎಂ.ಆರ್.ಸೀತಾರಾಮ್
ಬೆಂಗಳೂರು: ನಮ್ಮ ಮೆಟ್ರೊ 2ನೇ ಹಂತದ ಕಾಮಗಾರಿ 2021ಕ್ಕೆ ಮುಕ್ತಾಯವಾಗಲಿದೆ ಎಂದು ಕೇಂದ್ರ ಅಂಕಿಅಂಶ ಮತ್ತು ಯೋಜನೆ ಜಾರಿ ಖಾತೆ ರಾಜ್ಯ ಸಚಿವ ವಿಜಯ್ ಗೋಯಲ್ ತಿಳಿಸಿದ್ದಾರೆ. 
ಮಾರ್ಚ್ 2021ಕ್ಕೆ ನಮ್ಮ ಮೆಟ್ರೊ ಕಾಮಗಾರಿ ಮುಕ್ತಾಯಕ್ಕೆ ಕಾಲ ನಿಗದಿಪಡಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಪ್ರಸ್ತುತ ನಡೆಯುತ್ತಿರುವ ಮೆಟ್ರೊ ಯೋಜನೆ ಕಾಮಗಾರಿಯ ಸ್ಥಿತಿಬಗ್ಗೆ ಪರಾಮರ್ಶೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೋಯೆಲ್, ಮೆಟ್ರೊ ಎರಡನೇ ಹಂತದ ಕಾಮಗಾರಿ 2021ಕ್ಕೆ ಮುಕ್ತಾಯವಾಗಲಿದೆ. ಕಾಮಗಾರಿಗೆ ಜಮೀನು ಸ್ವಾಧೀನಪಡಿಸುವುದಾಗಿತ್ತು. ಆ ಸಮಸ್ಯೆ ಬಹುತೇಕ ಮುಕ್ತಾಯವಾಗಿದ್ದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಜಮೀನು ನೀಡಿದೆ ಎಂದು ಹೇಳಿದರು.
ಮೊದಲ ಹಂತದ ಮಾರ್ಗ ಮತ್ತು ಹೊಸ ಮಾರ್ಗಗಳ ವಿಸ್ತರಣೆ ಎರಡನೇ ಹಂತದ್ದಾಗಿದ್ದು, 72.095 ಕಿಲೋ ಮೀಟರ್ ಉದ್ದ ಹೊಂದಿದೆ. 26.405 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಇದಾಗಿದೆ. ಮೊದಲ ಹಂತದ ಕಾಮಗಾರಿ 8 ಕಿಲೋ ಮೀಟರ್ ನೆಲದಡಿ ಕಾಮಗಾರಿ, ಎರಡನೇ ಹಂತದ ಕಾಮಗಾರಿ 12 ಕಿಲೋ ಮೀಟರ್ ಹೊಂದಿದೆ.
ನೆಲದ್ವಾರದ ಸುರಂಗದ ಕಾಮಗಾರಿ ಪ್ರತಿ ಕಿಲೋ ಮೀಟರ್ ಗೆ 500 ಕೋಟಿ ರೂಪಾಯಿ ವೆಚ್ಚದಲ್ಲಿ ಮತ್ತು ನೆಲದ ಮೇಲಿನ ಕಾಮಗಾರಿ 190 ಕೋಟಿಯಿಂದ 240 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಲಿದೆ ಎಂದು ಸಚಿವ ಗೋಯಲ್ ತಿಳಿಸಿದರು.
ಎರಡನೇ ಹಂತದ ಕಾಮಗಾರಿ 2021ಕ್ಕೆ ಮುಕ್ತಾಯಗೊಳ್ಳಲಿದೆ. ಎರಡನೇ ಹಂತದ ಕಾಮಗಾರಿ 2016ರ ಫೆಬ್ರವರಿ 23ಕ್ಕೆ ಆರಂಭಗೊಂಡಿದ್ದು 5 ವರ್ಷಗಳ ಅವಧಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಮುಕ್ತಾಯ ಅವಧಿ 2021 ಆಗಿದ್ದು ಇದು ನಮ್ಮ ವಿಸ್ತೃತ ಯೋಜನಾ ವರದಿಯಲ್ಲಿ ಕೂಡ ನಮೂದಿಸಲಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com