ಮೈಸೂರು: 1950 ಕಿಮೀ ನಿಂತು ಪ್ರಯಾಣಿಸಿದ ಕುಟುಂಬ, ರೈಲ್ವೆಗೆ 37 ಸಾವಿರ ರೂ. ದಂಡ!

ರೈಲು ಪ್ರಯಾಣಕ್ಕಾಗಿ ಮುಂಗಡ ಟಿಕೆಟ್ ಕಾದಿರಿಸಿದ್ದರೂ ಕುಳಿತುಕೊಳ್ಳಲು ಆಸನ ಸಿಕ್ಕದೆ 1950 ಕಿಮೀ ದೂರವನ್ನು ನಿಂತೇ ಪ್ರಯಾಣ ಮಾಡಿದ್ದ ಮೈಸೂರು ಮೂಲದ ಕುಟುಂಬವೊಂದು ಗ್ರಾಹಕ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈಸೂರು: ರೈಲು ಪ್ರಯಾಣಕ್ಕಾಗಿ ಮುಂಗಡ ಟಿಕೆಟ್ ಕಾದಿರಿಸಿದ್ದರೂ ಕುಳಿತುಕೊಳ್ಳಲು ಆಸನ ಸಿಕ್ಕದೆ 1950 ಕಿಮೀ  ದೂರವನ್ನು ನಿಂತೇ ಪ್ರಯಾಣ ಮಾಡಿದ್ದ ಮೈಸೂರು ಮೂಲದ ಕುಟುಂಬವೊಂದು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿತ್ತು. ಈ ಸಂಬಂಧ ವಾದ ಆಲಿಸಿದ ನ್ಯಾಯಾಲಯ ರೈಲ್ವೆ ಇಲಾಖೆಗೆ 37 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡೀದೆ.
ಮೈಸೂರು ಮೂಲದ ವಿಜೇಶ್ ಎನ್ನುವವರ ಕುಟುಂಬ ಮಧ್ಯಪ್ರದೇಶ ಉಜ್ಜಯಿನಿಯಿಂದ ಮೈಸೂರಿಗೆ ಹೊರಟಿದ್ದು ಇದಕ್ಕಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿತ್ತು. ಆದರೆ ರೈಲಿನಲ್ಲಿ ಅವರಿಗೆ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ ರೈಲ್ವೆ ಇಲಾಖೆ ನಿರ್ಲಕ್ಷ ತಾಳಿತ್ತು. ಇದರಿಂದ ಕೋಪಗೊಂಡ ಕುಟುಂಬಸ್ಥರು ಈ ಬಗ್ಗೆ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು..
ಇದೀಗ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯ ರೈಲ್ವೆ ಇಲಾಖೆಗೆ 37 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಈ ದಂಡದ ಮೊತ್ತವನ್ನು ವಿಜೇಶ್ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ.
ವಿಜೇಶ್ ತಮ್ಮ ಕುಟುಂಬದೊಡನೆ ಜೈಪುರ್- ಮೈಸೂರು ಎಕ್ಸ್ ಪ್ರೆಸ್ ​ನಲ್ಲಿ ಮೇ 25, 2017ರಂದು ಉಜ್ಜಯಿನಿಯಿಂದ ಮೈಸೂರಿಗೆ ಪಯಣಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com