ಬಿಇ, ಎಂಎಸ್ ಸಿ, ಬಿಎಡ್ ಪಕೋಡಾಗಳು ಲಭ್ಯ! ಪ್ಲೇಟ್ ಒಂದಕ್ಕೆ 10 ರೂ.

ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ 'ಪಕೋಡ' ಹೇಳಿಕೆಯ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿರುವ ಬೆಂಗಳೂರಿನ ನಿರುದ್ಯೋಗಿ ಯುವಕರು ವಿಶಿಷ್ಟ ಮಾರ್ಗ ಕಂಡುಕೊಂಡಿದ್ದಾರೆ.
ಉದ್ಯೋಗಕ್ಕಾಗಿ ಯುವಜನರು ಸಂಘಟನೆಯ ಸದಸ್ಯರು ಶನಿವಾರ ಬೆಂಗಳೂರಿನ ಬಿಜೆಪಿ ಕಛೇರಿಯ ಮುಂದೆ ಪಕೋಡಗಳನ್ನು ಮಾರಾಟ ಮಾಡಿ ಪ್ರತಿಭಟನೆ ನಡೆಸಿದರು
ಉದ್ಯೋಗಕ್ಕಾಗಿ ಯುವಜನರು ಸಂಘಟನೆಯ ಸದಸ್ಯರು ಶನಿವಾರ ಬೆಂಗಳೂರಿನ ಬಿಜೆಪಿ ಕಛೇರಿಯ ಮುಂದೆ ಪಕೋಡಗಳನ್ನು ಮಾರಾಟ ಮಾಡಿ ಪ್ರತಿಭಟನೆ ನಡೆಸಿದರು
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ 'ಪಕೋಡ' ಹೇಳಿಕೆಯ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿರುವ ಬೆಂಗಳೂರಿನ ನಿರುದ್ಯೋಗಿ ಯುವಕರು ವಿಶಿಷ್ಟ ಮಾರ್ಗ ಕಂಡುಕೊಂಡಿದ್ದಾರೆ. 
ಶನಿವಾರದಂದು ಮಲ್ಲೇಶ್ವರಂನ ಬಿಜೆಪಿ ಕಛೇರಿಯ ಮುಂದೆ ಸೇರಿದ್ದ ಸುಮಾರು 25 ನಿರುದ್ಯೋಗಿ ಯುವಕರು ಪಕೋಡಾ ಮಾರಾಟ ಮಾಡಿ ಪ್ರತಿಭಟಿಸಿದ್ದರು. ಈ ಪಕೋಡಾ ಪ್ರತಿಭಟನೆ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು.
ದೂರದರ್ಶನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ನೀಡಿದ್ದ ಹೇಳಿಕೆಯೊಂದರಲ್ಲಿ ಯಾರಾದರೂ 'ಪಕೋಡಗಳನ್ನು' ಮಾರಾಟ ಮಾಡುತ್ತಿದ್ದರೆ ಅವರು ದಿನಕ್ಕೆ 200 ರೂ ಗಳಿಸಬಲ್ಲರು. ಇಂತಹಾ ವ್ಯಕ್ತಿಗಳನ್ನು ನಿರುದ್ಯೋಗಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದ್ದರು.
"ನಾವು ದಿನಕ್ಕೆ 200 ರೂಗಳನ್ನು ಸಂಪಾದಿಸಿದರೂ ತಿಂಗಳಿಗೆ 6,000 ರೂ. ಆಗುತ್ತದೆ. ಇದು ಕನಿಷ್ಠ ವೇತನಕ್ಕಿಂತ ಪ್ರಮಾಣಕ್ಕಿಂತಲೂ ಕಡಿಮೆ" ಎಂದು ಉದ್ಯೋಗಕ್ಕಾಗಿ ಕರ್ನಾಟಕದ ಸಂಘಟನೆಯ ಸಂಚಾಲಕ ಮುತ್ತುರಾಜ್ ಹೇಳಿದರು. ಕನಿಷ್ಟ ವೇತನ ಪ್ರಮಾಣಾವನ್ನು 7,000 ರೂ. ಗೆ ನಿಗದಿಪಡಿಸಿ ಏಳನೇ ವೇತನ ಆಯೋಗ 2016ರಲ್ಲಿ ಶಿಫಾರಸ್ ಮಾಡಿತ್ತು. "ನಾವು ಪಕೋಡಾ ಮಾರಾಟಗಾರರಿಗೆ ಅತ್ಯಂತ ಗೌರವವನ್ನು ನೀಡುತ್ತೇವೆ. ಆದರೆ ಇದು ಪ್ರಧಾನ ಮಂತ್ರಿಯವರ ಅನರ್ಥಕಾರಿ ಹೇಳಿಕೆಯಾಗಿದ್ದು ಪೋಷಕರು ಮಕ್ಕಳು ಉತ್ತಮ ಕೆಲಸಕ್ಕೆ ಸೇರಿಕೊಳ್ಳಬೇಕೆಂದು ಉನ್ನತ ಶಿಕ್ಷಣವನ್ನು ಕೊಡಿಸಿರುತ್ತಾರೆ." ಅವರು ಹೇಳಿದರು.
ಪ್ರತಿಭಟನೆಯಲ್ಲಿ ಬಿಇ, ಎಂಎಸ್ ಸಿ, ಬಿಎಡ್ ಹೀಗೆ ನಾನಾ ಪದವಿಗಳ ಹೆಸರಿನ ಪಕೋಡಾಗಳು ಮಾರಾಟವಾಗಿದ್ದು ಒಂದು ಪ್ಲೇಟ್ ಗೆ ಹತ್ತು ರೂ. ನಿಗದಿಪಡಿಸಲಾಗಿತ್ತು. ವ್ಯಾಪರಕ್ಕೆ ಅವಕಾಶವಿಲ್ಲದ ನಿಷೇಧಿತ ಪ್ರದೇಶದಲ್ಲಿ ಪಕೋಡಾ ಮಾರಾಟ ಮಾಡುತ್ತಿರುವುದನ್ನು ಪ್ರಶ್ನಿಸಿದ ಪೋಲೀಸರಿಗೆ "ನಾವು ಪ್ರತಿಭಟನೆ ನಡೆಸುತ್ತಿಲ್ಲ, ನಾವು ಪಕೋಡಾ ಮಾರುತ್ತಿದ್ದೇವೆ. ಪ್ರಧಾನಿಗಳು ಪಕೋಡಾ ಮಾರಾಟಕ್ಕೆ ಒಪ್ಪಿಗೆ ನೀಡಿದ್ದಾರೆಂದ ಮೇಲೆ ಇನ್ನಾರ ಒಪ್ಪಿಗೆ ಬೇಕು?" ಓರ್ವ ಪ್ರತಿಭಟನಾ ನಿರತ ಪಕೋಡಾ ಮಾರಾಟ ಮಾಡುತ್ತಿದ್ದ ಯುವಕ ಪ್ರಶ್ನಿಸಿದ್ದಾನೆ. ಪ್ರತಿಭಟನೆಗೆ ಮುನ್ನ ಅನುಮತಿ ಪಡೆಯದ ಕಾರಣ ಪೋಲೀಸರು ಅವರನ್ನು ಅಲ್ಲಿಂದ ಬಲವಂತವಾಗಿ ಕಳಿಸಿದ್ದರು. 
ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಈ ಪ್ರತಿಭಾಟನೆ ಸಂಬಂಧ ಟ್ವೀಟ್ ಮಾಡಿದ ನಂತರ ಸಾಮಾಜಿಕ ಮಾದ್ಯಮದಲ್ಲಿ ಇದರ ಕುರಿತಂತೆ ವ್ಯಾಪಕ ಚರ್ಚೆಗಳು ನಡೆದವು. ದೇಶದಾದ್ಯಂತ ಇಂತಹ ಪ್ರತಿಭಟನೆಗಳನ್ನು ಪ್ರೋತ್ಸಾಹಿಸಿ ಎಂದು ಮೇವಾನಿ ಟ್ವೀಟ್ ಮೂಲಕ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com