ಹೊಸ ವರ್ಷದ ಆಫರ್ ನಂತರ ವಾಯು ವಜ್ರ ಬಸ್ ದರ ಏರಿಸಿದ ಬಿಎಂಟಿಸಿ

:ಬಿಎಂಟಿಸಿ ವಾಯು ವಜ್ರ ಬಸ್​ಗಳ ಟಿಕೆಟ್​ ದರ ಇಂದಿನಿಂದ ಶೇ.16.89 ರಷ್ಟು ಏರಿಕೆಯಾಗಿದೆ. ಹೊಸ ವರ್ಷದ ನಿಮಿತ್ತ ಪ್ರಯಾಣಿಕರನ್ನು ವಜ್ರ ಬಸ್​ ಕಡೆ ಆಕರ್ಷಿಸಲು ಶೇ.37ರಷ್ಟು ಟಿಕೆಟ್‌ ದರ ಇಳಿಸಲಾಗಿತ್ತು.,
ವಾಯು ವಜ್ರ
ವಾಯು ವಜ್ರ
ಬೆಂಗಳೂರು: ಬಿಎಂಟಿಸಿ ವಾಯು ವಜ್ರ ಬಸ್​ಗಳ ಟಿಕೆಟ್​ ದರ ಇಂದಿನಿಂದ ಶೇ.16.89 ರಷ್ಟು ಏರಿಕೆಯಾಗಿದೆ. 
ಹೊಸ ವರ್ಷದ ನಿಮಿತ್ತ ಪ್ರಯಾಣಿಕರನ್ನು ವಜ್ರ ಬಸ್​ ಕಡೆ ಆಕರ್ಷಿಸಲು ಶೇ.37ರಷ್ಟು ಟಿಕೆಟ್‌ ದರ ಇಳಿಸಲಾಗಿತ್ತು. ಪ್ರಾಯೋಗಿಕವಾಗಿ ಒಂದು ತಿಂಗಳ ಅವಧಿಗೆ ಪರಿಷ್ಕರಿಸಲಾಗಿದ್ದ ದರಗಳನ್ನು ಜೂನ್​ 30ರ ವರೆಗೆ ವಿಸ್ತರಿಸಲಾಗಿತ್ತು. 
ಆದರೆ, ಟಿಕೆಟ್​ ದರವನ್ನು ಕಡಿಮೆ ಮಾಡಿದರೂ ಪ್ರಯಾಣಿಕರ ಸಂಖ್ಯೆಯಲ್ಲಿ ಮತ್ತು ಆದಾಯದಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿದ್ದು, ಕಿ.ಮೀ. ಆದಾಯದಲ್ಲಿ ಸುಧಾರಣೆಯಾಗದ ಕಾರಣ ಮತ್ತೆ ದರ ಹೆಚ್ಚಿಸುತ್ತಿರುವ ಬಗ್ಗೆ ಬಿಎಂಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಎಂಟಿಸಿಗೆ ಕೋಟ್ಯಂತರ ರೂ. ನಷ್ಟ ಹಿನ್ನೆಲೆಯಲ್ಲಿ ಜುಲೈ 1 ರಿಂದ ವಜ್ರ ಬಸ್ ದರ ಶೇ .16.89ರಷ್ಟು ಹೆಚ್ಚಳ ಮಾಡಲಾಗುತ್ತಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com