ಕೋಳಿಗಳಿಗೂ ಟಿಕೆಟ್ ಕೊಟ್ಟ ಕೆಎಸ್ಆರ್ಟಿಸಿ ಕಂಡಕ್ಟರ್, ಕೇಳಿದ್ರೆ ಕಾನೂನು ಇರೋದೇ ಹೀಗೆ ಅಂದ್ರು!

ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಒಬ್ಬರು ಬಾಡೂಟಕ್ಕಾಗಿ ಎರಡು ನಾಟಿ ಕೋಳಿಗಳನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದ ಪ್ರಯಾಣಿಕನಿಂದ ಹಣ ಪಡೆದು...
ಕೋಳಿ
ಕೋಳಿ
ಚಿಕ್ಕಬಳ್ಳಾಪುರ: ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಒಬ್ಬರು ಬಾಡೂಟಕ್ಕಾಗಿ ಎರಡು ನಾಟಿ ಕೋಳಿಗಳನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದ ಪ್ರಯಾಣಿಕನಿಂದ ಹಣ ಪಡೆದು ಕೋಳಿಗಳಿಗೂ ಟಿಕೆಟ್ ನೀಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. 
ಇಂದು ಭಾನುವಾರವಾದ್ದರಿಂದ ಬಾಡೂಟಕ್ಕಾಗಿ ಮೂದಲೂಡ ಗ್ರಾಮದ ಶ್ರೀನಿವಾಸ್ ಎಂಬುವರು ಎರಡು ನಾಟಿ ಕೋಳಿಗಳನ್ನು ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಲು ಬಸ್ ಹತ್ತಿದ್ದರು. 
ಟಿಕೆಟ್ ನೀಡಲು ಬಂದ ಕಂಡಕ್ಟರ್ ಕೋಳಿಗಳನ್ನು ಕಂಡ ಅವುಗಳಿಗೂ ಟಿಕೆಟ್ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಇದರಿಂದ ಶ್ರೀನಿವಾಸ್ ತಮ್ಮ ಟಿಕೆಟ್ ದರ 24 ರು. ಮತ್ತು ಒಂದು ಕೋಳಿಗೆ 12 ರು.ನಂತೆ ಎರಡು ಕೋಳಿಗೆ 24 ರುಪಾಯಿ ಒಟ್ಟಾರೆ 48 ರುಪಾಯಿ ನೀಡಿದ್ದು ಹಣ ಪಡೆದ ಕಂಡಕ್ಟರ್ ಟಿಕೆಟ್ ನೀಡಿದ್ದಾರೆ. 
ಇದನ್ನು ನೋಡಿ ದಂಗಾದ ಕೆಲ ಪ್ರಯಾಣಿಕರು ಕಂಡಕ್ಟರ್ ನನ್ನು ಪ್ರಶ್ನಿಸಿದರೆ ಕಾನೂನು ಇರೋದೇ ಹೀಗೆ ಎಂದು ಉತ್ತರ ನೀಡಿದ್ದಾನೆ ಎನ್ನಲಾಗಿದೆ.
ಹೌದು ಸಂಸ್ಥೆಯ ಬಸ್ ಗಳಲ್ಲಿ ಸಾಕು ಪ್ರಾಣಿಗಳನ್ನು ಸಾಗಿಸಿದರೆ ಅರ್ಧ ಟಿಕೆಟ್ ಪಡೆಯಬೇಕು ಎನ್ನುವ ನಿಯಮ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com