ಅಕ್ಯುಪೆನ್ಸಿ ಸರ್ಟಿಫಿಕೇಟ್ ಇಲ್ಲದ ಲೈವ್ ಬ್ಯಾಂಡ್ ಗಳಿಗೆ ಹೈಕೋರ್ಟ್ ತಡೆ

ಕರ್ನಾಟದಲ್ಲಿನ ಲೈ ವ್ ಬ್ಯಾಂಡ್ ಗಳು ಆಕ್ಯುಪೆನ್ಸಿ ಸರ್ಟಿಫಿಕೇಟ್ (ಅಧಿಭೋಗ ಪ್ರಮಾಣಪತ್ರ) ಹೊಂದಿರುವುದು ಕಡ್ಡಾಯ ಅದಿಲ್ಲದೆ ಇರುವ ಲೈವ್ ಬ್ಯಾಂಡ್ ಗಳ ಕಾರ್ಯಾಚರಣೆ.....
ಅಕ್ಯುಪೆನ್ಸಿ ಸರ್ಟಿಫಿಕೇಟ್ ಇಲ್ಲದ ಲೈವ್ ಬ್ಯಾಂಡ್ ಗಳಿಗೆ ಹೈಕೋರ್ಟ್ ತಡೆ
ಅಕ್ಯುಪೆನ್ಸಿ ಸರ್ಟಿಫಿಕೇಟ್ ಇಲ್ಲದ ಲೈವ್ ಬ್ಯಾಂಡ್ ಗಳಿಗೆ ಹೈಕೋರ್ಟ್ ತಡೆ
ಬೆಂಗಳೂರು: ಕರ್ನಾಟದಲ್ಲಿನ ಲೈ ವ್ ಬ್ಯಾಂಡ್ ಗಳು ಆಕ್ಯುಪೆನ್ಸಿ ಸರ್ಟಿಫಿಕೇಟ್ (ಅಧಿಭೋಗ ಪ್ರಮಾಣಪತ್ರ) ಹೊಂದಿರುವುದು ಕಡ್ಡಾಯ ಅದಿಲ್ಲದೆ ಇರುವ ಲೈವ್ ಬ್ಯಾಂಡ್ ಗಳ ಕಾರ್ಯಾಚರಣೆ ನಿಲ್ಲಿಸಬೇಕೆಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಲೈವ್ ಬ್ಯಾಂಡ್ ನಡೆಸಲು ಅಕ್ಯುಪೆನ್ಸಿ ಸರ್ಟಿಫಿಕೇಟ್ ಕಡ್ಡಾಯವೆಂದು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಬೆಂಗಳೂರು ನಗರ ಪೋಲೀಸ್ ಕಮಿಷನರ್ ನೀಡಿದ್ದ ನೀಓಟೀಸ್ ಪ್ರಶ್ನಿಸಿಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದ್ದು ಸರ್ಟಿಫಿಕೇಟ್ ಹೊಂದಿದ ಲೈವ್ ಬ್ಯಾಂಡ್ ಗಳ ಕಾರ್ಯಾಚರಣೆಗೆ ಸಮ್ಮತಿ ಸೂಚಿಸಿದೆ.
ಕಟ್ಟಡದ ಪ್ರತಿ ಅಂತಸ್ತಿಗೆ ಸಹ ಪ್ರತ್ಯೇಕ ಪ್ರಮಾಣಪತ್ರ ಅಗತ್ಯವಿದೆ ಎಂದಿರುವ ಕೋರ್ಟ್ ಸರ್ಟಿಪೀಕೇಟ್ ಪಡೆಯುವುದಕ್ಕಾಗಿ ಸಮಯಾವಕಾಶ ನಿಗದಿಪಡಿಸುವೆಂತೆ ಹೇಳಿದೆ.
ಇದೇ ವೇಳೆ 1977 ಹಾಗೂ ಅದಕ್ಕೆ ಮುಂಚಿನ ಕಟ್ಟಡಗಳಿಗೆ ಸರ್ಟಿಫಿಕೇಟ್ ನಿಡುವುದು ಆಯಾ ಇಲಾಖೆಗೆ ಬಿಟ್ಟ ವಿಷಯವೆಂದು ನ್ಯಾಯಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com