ಬಂಧಿತರನ್ನು ಬಸಾಪುರ ಕ್ಯಾಂಪಿನ ಟಿ. ಶ್ರೀನಿವಾಸ, ಹುಸೇನನಗರದ ರಾಮಕೃಷ್ಣ, ತಳವಾರದೊಡ್ಡಿಯ ಅಯ್ಯಾಳಪ್ಪ, ಗದ್ವಾಲ್ ತಾಲೂಕಿನ ಹನುಮಂತ, ಜಾಲಹಳ್ಳಿಯ ಪ್ರಕಾಶ, ಚಿಕ್ಕಬೂದೂರಿನ ಬಸವರಾಜ ಮತ್ತು ರಾಮಲಿಂಗೇಶ್ವರ ಕಾಲೋನಿಯ ಸೈಯದ್ ಉಸ್ಮಾನ ಎಂದು ಗುರುತಿಸಲಾಗಿದೆ. ಇವರಿಂದ 4.52 ಲಕ್ಷ ರೂ. ಮೌಲ್ಯದ 2,000 ರೂ. ಮತ್ತು 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.