ಕೈಲಾಸ ಮಾನಸ ಯಾತ್ರೆ, ಕರ್ನಾಟಕದ ಯಾತ್ರಾರ್ಥಿಗಳು ಸುರಕ್ಷಿತ- ಮಾಹಿತಿ

ನೇಪಾಳದಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಕೈಲಾಸ ಮಾನಸ ಸರೋವರಕ್ಕೆ ತೆರಳಿದ್ದ ರಾಜ್ಯದ ಯಾತ್ರಾರ್ಥಿಗಳು ಸುರಕ್ಷಿತವಾಗಿರುವುದಾಗಿ ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನೇಪಾಳದಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಕೈಲಾಸ ಮಾನಸ  ಸರೋವರಕ್ಕೆ ತೆರಳಿದ್ದ ರಾಜ್ಯದ ಯಾತ್ರಾರ್ಥಿಗಳು ಮಾರ್ಗಮಧ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದು ಆತಂಕಕ್ಕೆ ಕಾರಣವಾಗಿತ್ತು. ಆದರೆ, ಕರ್ನಾಟಕದ 13 ಯಾತ್ರಾರ್ಥಿಗಳ ಗುಂಪಿನ ಕೆಲವರು  ಕುಟುಂಬದವರೊಂದಿಗೆ ಸಂಪರ್ಕಕ್ಕೆ ಸಿಕ್ಕಿದ್ದು,ಅವರೆಲ್ಲರೂ ಸುರಕ್ಷಿತವಾಗಿರುವುದಾಗಿ ತಿಳಿದುಬಂದಿದೆ.

ಮಾನಸ ಸರೋವರ ಮಾರ್ಗದಲ್ಲಿನ ನೇಪಾಳ ಮತ್ತು ಟಿಬೆಟ್  ಮಧ್ಯದಲ್ಲಿಯೇ ಕೆಲ ಯಾತ್ರಾರ್ಥಿಗಳು   ಮಳೆಯಿಂದಾಗಿ  ಯಾವುದೇ ಸಂಪರ್ಕಕ್ಕೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಪೈಕಿ  ಗೋಕಾಕ್ ನಿಂದ ತೆರಳಿದ ಲೀಲಾ ಮತ್ತು ಆಕೆಯ ಸ್ನೇಹಿತೆ ಬೈಲಹೊಂಗಲದ ಗೀತಾ ಹೊಸಮಠ್, ಸೋಮವಾರ ಬೆಳಗ್ಗೆಯಿಂದ ಕುಟುಂಬದವರೊಂದಿಗೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರಿಂದಾಗಿ ಕುಟುಂಬ ಸದಸ್ಯರು ಆತಂಕಕ್ಕೊಳಗಾಗಿದ್ದರು.

 ಆದಾಗ್ಯೂ, ಗೀತಾ ಇಂದು ಕರೆ ಮಾಡಿದ್ದು, ಹಿಂದಿರುಗಿ ಬರುತ್ತಿರುವುದಾಗಿ ಹೇಳಿರುವುದರಿಂದ ಅವರ ಕುಟುಂಬ ಸದಸ್ಯರ ಆತಂಕ ಸ್ವಲ್ಪ ಮಟ್ಟಿಗೆ ತಗ್ಗಿದಂತಾಗಿದೆ.   ನಳಿನಿ ನೇತೃತ್ವದಲ್ಲಿನ 13 ಜನರ ಗುಂಪು  ಸುರಕ್ಷಿತವಾಗಿದ್ದು, ಶೀಘ್ರದಲ್ಲಿಯೇ ಕಠ್ಮುಂಡು ತಲುಪಲಿದ್ದೇವೆ. ಜುಲೈ 5 ರಂದು ಸ್ಪಗ್ರಾಮಕ್ಕೆ  ಬರುವುದಾಗಿ ಗೀತಾ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com