ಉಡುಪಿ: ಅಷ್ಟ ಮಠಗಳ ಯತಿಗಳ ವಿರುದ್ಧ ಶಿರೂರು ಶ್ರೀಗಳಿಂದ ಕೇವಿಯಟ್ ಅರ್ಜಿ

ಉಡುಪಿ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಲಕ್ಷ್ಮೀವರ ತೀರ್ಥರು ತಮ್ಮ ಪಟ್ಟದ ದೇವರ ಹಿಂಪಡೆಯುವ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಉಡುಪಿ: ಅಷ್ಟ ಮಠಗಳ ಯತಿಗಳ ವಿರುದ್ಧ ಶಿರೂರು ಶ್ರೀಗಳಿಂದ ಕೇವಿಯಟ್ ಅರ್ಜಿ
ಉಡುಪಿ: ಅಷ್ಟ ಮಠಗಳ ಯತಿಗಳ ವಿರುದ್ಧ ಶಿರೂರು ಶ್ರೀಗಳಿಂದ ಕೇವಿಯಟ್ ಅರ್ಜಿ
ಉಡುಪಿ: ಉಡುಪಿ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಲಕ್ಷ್ಮೀವರ ತೀರ್ಥರು ತಮ್ಮ ಪಟ್ಟದ ದೇವರ ಹಿಂಪಡೆಯುವ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಶಿರೂರು ಮಠದ ಸ್ವಾಮಿಗಳು ಶಿಷ್ಯ ಸ್ವೀಕಾರ ಮಾಡದೆ ಪಟ್ಟದ ದೇವರ ಹಸ್ತಾಂತರ ಸಾಧ್ಯವಿಲ್ಲ ಎಂದು ಅಷ್ಟ ಮಠಗಳ ಯತಿಗಳು ತೀರ್ಮಾನಿಸಿದ್ದ ಹಿನ್ನೆಲೆಯಲ್ಲಿ ಅವ್ರೇನಾದರೂ ನ್ಯಾಯಾಲಯಕ್ಕೆ ಹೋದಲ್ಲಿ ಏಕಪಕ್ಷೀಯ ತೀರ್ಪು ಕೊಡಬಾರದೆಂದು ಎನ್ನುವ ಉದ್ದೇಶದಿಂದ ಹೈಕೋರ್ಟ್ ನಿಂದ ಕೇವಿಯಟ್ ತಂದಿದ್ದಾರೆ.
ಶ್ರೀಊಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನ್ಯಾಯಾಲಯವು ಯಾವ ತೀರ್ಮಾನಕ್ಕೆ ಬರುವಂತಿಲ್ಲ ಎನ್ನುವ ಕಾರಣದಿಂದ ಈ ನ್ಯಾಯಾಂಗ ಪ್ರಕ್ರಿಯೆ ನಡೆದಿದೆ. 
ಅನಾರೋಗ್ಯದ ಕಾರಣ ಶೀರೂರು ಮಠದ ಪಟ್ಟದ ದೇವರನ್ನು ಅದಮಾರು ಶ್ರೀಗಳಿಗೆ ಹಸ್ತಾಂತರಿಸಿದ್ದ ಲಕ್ಷ್ಮೀವರ ತೀರ್ಥರು ಇದೀಗ ಪಟ್ಟದ ದೇವರನ್ನು ಮತ್ತೆ ತನಗೆ ಹಸ್ತಾಂತರಿಸಲು ಕೋರಿದ್ದಾರೆ. ಆದರೆ ಸಭೆ ಉಳಿದ ಯತಿಗಳು ಶಿರೂರು ಶ್ರೀಗಳು ಶಿಷ್ಯ ಸ್ವೀಕಾರ ಮಾಡಬೇಕು. ಅವರು ಅಷ್ಟ ಮಠಗಳ ನಿಯಮಗಳಿಗೆ ಅನುಸಾರ ನಡೆಯಬೇಕು. ಅಲ್ಲಿಯವರೆಗೆ ದೇವರ ಹಸ್ತಾಂತರ ಮಾಡಲಾಗದೆಂದು ತೀರ್ಮಾನಿಸಿದ್ದರು.
ಪ್ರಸ್ತುತ ಅಷ್ಟ ಮಠಾಧೀಶರು ತಾವು ಇನ್ನೊಮ್ಮೆ ಸಭೆ ಸೇರಿ ಪಟ್ಟದ ದೇವರ ಹಸ್ತಾಂತರ ವಿಚಾರದಲ್ಲಿ ತೀರ್ಮಾನಕೈಗೊಳ್ಳಬೇಕಿದೆ.
ಕೇವಿಯಟ್ ಎಂದರೇನು?
ನಮ್ಮ ವಾದವನ್ನಾಲಿಸದೆನ್ಯಾಯಾಲಯ ಯಾವ ಆದೇಶ ನಿಡಬಾರದು  ಎಂದು ಕೋರ್ಟ್ ಗೆ ಮನವಿ ಮಾಡುವುದುಅನ್ನು ಕೇವಿಯಟ್ ಎನ್ನಲಾಗುವುದು.ಯಾವುದೇ ವಿಚಾರದಲ್ಲಿ ಯಾರೇ ಅರ್ಜಿ ಸಲ್ಲಿಸಿದರೆ ಅವರೊಬ್ಬರ ವಾದವನ್ನೇ ಕೇಳಿ ನಿರ್ದೇಶನ ನಿಡಬಾರದು ತಮ್ಮ ವಾದಕ್ಕೂ ಮನ್ನಣೆ ಸಿಗುವಂತಾಗಬೇಕು ಎಂದು ಕೇಳುವುದು ಕೇವಿಯಟ್ ಅರ್ಜಿಯ ಉದ್ದೇಶವಾಗಿದೆ.
ಇದೀಗ ಶಿರೂರು ಶ್ರೀಗಳು ತಮ್ಮ ಪಟ್ಟದ ದೇವರ ಸಂಬಂಧ ಅಷ್ಟ ಮಠಗಳ ಯತಿಗಳು ಯಾವುದೇ ಕಾರಣಕ್ಕೆ ನ್ಯಾಯಾಲಯಕ್ಕೆ ತೆರಳಿದರೆ ಅವರ ವಾದವನ್ನಷ್ಟೇ ಆಲಿಸಿ ತೀರ್ಪು ನೀಡಬಾರದು ಎಂದು ಕೇಳಲಿಕ್ಕಾಗಿ ಸ್ವಾಮಿಗಳು ಈ ಕೇವಿಯಟ್ ಅರ್ಜಿ ತರಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com