ಕರ್ನಾಟಕ: ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗಾಗಿ 7.35 ಲಕ್ಷ ಮರಗಳ ನಾಶ?

ಮುಂದಿನ ದಿನಗಳಲ್ಲಿ ಜಾರಿಯಾಗಲಿರುವ ಹೆದ್ದಾರಿ ಯೋಜನೆಗಳಿಗಾಗಿ ರಾಜ್ಯದಾದ್ಯಂತ 7.35 ಲಕ್ಷ ಮರಗಳು ಬಲಿಯಾಗಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮುಂದಿನ ದಿನಗಳಲ್ಲಿ ಜಾರಿಯಾಗಲಿರುವ ಹೆದ್ದಾರಿ ಯೋಜನೆಗಳಿಗಾಗಿ ರಾಜ್ಯದಾದ್ಯಂತ 7.35 ಲಕ್ಷ ಮರಗಳು ಬಲಿಯಾಗಲಿದೆ. ಇದರಲ್ಲಿಯೂ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಅತಿ ಹೆಚ್ಚು ಮರಗಳ ನಾಶವಾಗಲಿದೆ ಎಂದು ಅಂದಾಜಿಸಲಾಗಿದ್ದು ಪರಿಸರಕ್ಕೆ ಬೃಹತ್ ಪ್ರಮಾಣದ ಹಾನಿಯಾಗಲಿದೆ.
ಕರ್ನಾಟಕದ ನಾನಾ ಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆ ಕಾಮಗಾರಿಗಳು ಚಾಲನೆಯಲ್ಲಿದ್ದು ಕೆಲವು ಕಡೆಗಳಲ್ಲಿ ಮರಗಳ ತೆರವು ಕಾರ್ಯಾಚರಣೆ ನಡೆಸಲಾಗುವುದು. ಇನ್ನು ಕೆಲ ಕಡೆಗಳಲ್ಲಿ ಅರಣ್ಯ ಇಲಾಖೆ, ಹಸಿರು ಪೀಠದ ಅನುಮತಿ ಪಡೆದು ಮರ ಕಡಿಯಲಾಗುವುದು.
ಏತನ್ಮಧ್ಯೆ ರಾಷ್ಟ್ರೀಯ ಹಸಿರು ಪೀಠವು ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಎಷ್ಟು ಮರಗಳ ಹನನ ಆಗಲಿದೆ ಎನ್ನುವ ಕುರಿತು ರಾಜ್ಯ ಸರ್ಕಾರದ ವಿವರಣೆ ಕೇಳಿದೆ. ಜುಲೈ  10ರೊಳಗೆ ರಾಜ್ಯ ಸರ್ಕಾರ ಈ ವಿವರಗಳನ್ನು ಒದಗಿಸುವಂತೆ ಪೀಠ ಆದೇಶಿಸಿದೆ. ಇನ್ನು ರಾಜ್ಯ ಸರ್ಕಾರ ಹೆದ್ದಾರಿ ಪ್ರಾಧಿಕಾರವು ನಿಡಿದ ವರದಿಯಲ್ಲಿ ಮರಗಳ ಕಡಿಯುವಿಕೆ ಬಗೆಗೆ ಸ್ಪಷ್ಟ ವಿವರ ನೀಡಿಲ್ಲ ಎನ್ನುವ ಕಾರಣಕ್ಕೆ 50 ಸಾವಿರ ದಂಡ ವಿಧಿಸಿದೆ.
ಆರ್ಟಿಐ ಮತ್ತು ಇತರ ಮೂಲಗಳ ಮಾಹಿತಿಯಂತೆ ಪಶ್ಚಿಮ ಘಟ್ಟಗಳಲ್ಲಿ ಅಮೂಲ್ಯವಾದ ಮತ್ತು ಹಳೆಯ ಬೃಅಹ್ತ್ ಗಾತ್ರದ ಮರಗಳ ಕಡಿಯುವಿಕೆ ರಾಜ್ಯದಲ್ಲಿ ಹವಾಮಾನ ವೈಪರೀತ್ಯಕ್ಕೆ ಕಾರಣವಾಗಲಿದೆ.ಈ ಯೋಜನೆಯು ರಾಜ್ಯದಲ್ಲಿ ಹವಾಮಾನ ಬದಲಾವಣೆಗೆ ಕಾರಣವಾಗಲಿದೆ ಎಂದು ಪರಿಸರವಾದಿಗಳು, ಹಸಿರು ಕಾರ್ಯಕರ್ತರು ವಾದಿಸಿದ್ದಾರೆ.
ಪಶ್ಚಿಮ ಘಟ್ಟಗಳು ಪ್ರಪಂಚದ 18 ಜೀವವೈವಿಧ್ಯದ ತಾಣಗಳಲ್ಲಿ  ಒಂದಾಗಿ ಪರಿಗಣಿಸಲಾಗಿದೆ. ಆದರೆ ಕಳೆದ ಈಗಾಗಲೇ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳಿಗೆ ಕಳೆದ 2-3 ವರ್ಷಗಳಿಂದ ಒಂದು ಲಕ್ಷಕ್ಕಿಂತ ಹೆಚ್ಚು ಮರಗಳನ್ನು ಕಡಿಯಲಾಗಿದೆ ಎಂದು ಪಶ್ಚಿಮ ಘಟ್ಟ ಜಾಗೃತ ವೇದಿಕೆಯ ಸಹದೇವ್ ಶಿವಪುರ ಹೇಳಿದ್ದಾರೆ.
ಕೊಡಗು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, , ಉತ್ತರ ಕನ್ನಡ ಮತ್ತು ಬೆಳಗಾವಿ - ಈ ಏಳು ಜಿಲ್ಲೆಗಳ ಮೇಲೆ ಇದರಿಂದ ಅತಿ ಕೆಟ್ಟ ಪರಿಣಾಮವಾಗಲಿದೆ. ಇನ್ನು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಸಹ ತಮ್ಮಲ್ಲಿರುವ ಜೀವವೈವಿದ್ಯಗಳನ್ನು ಕಳೆದುಕೊಳ್ಳಲಿವೆ.
ಸ್ಥೂಲವಾದ ಅಧಿಕೃತ ಅಂದಾಜಿನ ಪ್ರಕಾರ, ಚಾಲ್ತಿಯಲ್ಲಿರುವ ಹೆದ್ದಾರಿ ವಿಸ್ತರಣೆ ಯೋಜನೆಗಳಿಗಾಗಿ  52,000 ಮರಗಳನ್ನು ಕಡಿಯಲಾಗುವುದು. ಇದರಲ್ಲಿ ಎನ್ ಎಚ್ 75 (13,500 ಮರಗಳು), ಎನ್ ಎಚ್ 13 (500) ಮತ್ತು ಎನ್ ಎಚ್ -4A (38,000) ಸೇರಿದೆ. ಅದಾಗ್ಯೂ ಬೆಂಗಳೂರು-ಮಂಗಳೂರಿನ ಹೆದ್ದಾರಿ ಯೋಜನೆಯಡಿಯಲ್ಲಿ ಶಿರಾಡಿ ಘಾಟ್ ನಲ್ಲಿ ಯಾವುದೇ ಮರ ಕಡಿಯಲಾಗಿದೆಯೆ ಎನ್ನುವ ಕುರಿತು ಮಾಹಿತಿ ಇಲ್ಲ.
ಶಿವಮೊಗ್ಗ / ಚಿಕ್ಕಮಗಳೂರು ಮತ್ತು ಇತರ ಜಿಲ್ಲೆಗಳಲ್ಲಿ ಇದಾಗಲೇ ವ್ಯಾಪಕ ಪರಿಸರ ನಾಶ ಸಂಭವಿಸಿದೆ ಎಂದು ಮಲೆನಾಡು ಭಾಗದ ಪರಿಸರ ಕಾರ್ಯಕರ್ತ ಶ್ರೀ ಹರ್ಷ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ. "ಮರದ ಕಡಿಯುವಿಕೆ ಪಟ್ಟಿ ಬಹಳ ಉದ್ದವಿದೆ. ತೀರ್ಥಹಳ್ಳಿ-ಶಿವಮೊಗ್ಗ ರಸ್ತೆ ವಿಸ್ತರಣೆಗಾಗಿ 1000 ಮರಗಳ ನ್ನು ಕಡಿಯಲಾಗಿದೆ.ತೀರ್ಥಹಳ್ಳಿ-ಹೊಸಂಗಡಿ ರಸ್ತೆ ವಿಸ್ತರಣೆಗಾಗಿ 500 ಮರಗಳ ಬಲಿಯಾಗಿದೆ. ಸಾಗರ-ಹೊನ್ನಾವರ ರಸ್ತೆ ಅಗಲೀಕರಣ  4000 ಮರಗಳ ನಾಶಕ್ಕೆ ಕಾರಣವಾಗಿದೆ." ಅವರು ಕೆಲವು ಉದಾಹರಣೆ ನೀಡಿದ್ದಾರೆ.
ಹೈ ಟೆನ್ಷನ್ ಪವರ್ ಲೈನ್ಸ್, ನೀರಾವರಿ ಯೋಜನೆಗಳು , ತುಂಗಾ ನೀರಾವರಿ ಯೋಜನೆಗಳಂತಹ ಇತರ ಯೋಜನೆಗಳಿಂದ ಮರದ ಕಡಿಯುವಿಕೆ ಅವ್ಯಾಹತವಾಗಿ ನಡೆದಿದೆ. ವಾಸ್ತವವಾಗಿ, 400 ಕೆವಿ  ಹೈ ಟೆನ್ಷನ್ ಪವರ್ ಲೈನ್ ಮೈಸೂರುನಿಂದ  ಕೋಳಿಕ್ಕೋಡ್ ಗೆ ಸಾಗುವ ಮಾರ್ಗದಲ್ಲಿ ಕೊಡಗುದಲ್ಲಿ 54,000 ಮರಗಳನ್ನು ಕಡಿಯಲಾಗಿದೆ. ಆದರೆ ಸರ್ಕಾರಿ ದಾಖಲೆಗಳಲ್ಲಿ ಇದನ್ನು ಕೇವಲ 8000 ಮರಗಳು ಮಾತ್ರ ಎಂದು ತೋರಿಸಿದೆ ಎನ್ನುವುದಾಗಿ  ಕೊರ್ಗ್ ವೈಲ್ಡ್ಲೈಫ್ ಸೊಸೈಟಿಯ ಸುಂದರ್ ಮುಥಾನಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com