ಬೆಂಗಳೂರು: ಐಷಾರಾಮಿ ಬೈಕ್ ಕದಿಯುತ್ತಿದ್ದ ಕುಖ್ಯಾತ ಗ್ಯಾಂಗ್ ಸೆರೆ, 46 ಬೈಕ್ ಗಳ ವಶ

ಬೆಂಗಳೂರಿನ ಆಗ್ನೇಯ ಭಾಗದಲ್ಲಿ ಬೈಕ್ ಕಳ್ಳತನದಲ್ಲಿ ತೊಡಗಿದ್ದ ಕುಖ್ಯಾತ ಗ್ಯಾಂಗ್ ಒಂದನ್ನು ಎಚ್ಎಸ್ಆರ್ ಲೇಔಟ್ ಪೊಲೀಸರು ಬಂಂಧಿಸಿದ್ದಾರೆ.
ಬೆಂಗಳೂರು: ಐಷಾರಾಮಿ ಬೈಕ್ ಕದಿಯುತ್ತಿದ್ದ ಕುಖ್ಯಾತ ಗ್ಯಾಂಗ್ ಸೆರೆ, 46 ಬೈಕ್ ಗಳ ವಶ
ಬೆಂಗಳೂರು: ಐಷಾರಾಮಿ ಬೈಕ್ ಕದಿಯುತ್ತಿದ್ದ ಕುಖ್ಯಾತ ಗ್ಯಾಂಗ್ ಸೆರೆ, 46 ಬೈಕ್ ಗಳ ವಶ
Updated on
ಬೆಂಗಳೂರು: ಬೆಂಗಳೂರಿನ ಆಗ್ನೇಯ ಭಾಗದಲ್ಲಿ ಬೈಕ್ ಕಳ್ಳತನದಲ್ಲಿ ತೊಡಗಿದ್ದ ಕುಖ್ಯಾತ ಗ್ಯಾಂಗ್ ಒಂದನ್ನು ಎಚ್ಎಸ್ಆರ್ ಲೇಔಟ್ ಪೊಲೀಸರು ಬಂಂಧಿಸಿದ್ದಾರೆ.
ಐವರು ಸದಸ್ಯರ ಈ ಕಳ್ಳರ ಗ್ಯಾಂಗ್ ಕಳೆದ ಆರು ತಿಂಗಳಿನಲ್ಲಿ 75 ಲಕ್ಷ ರೂ.ಮೌಲ್ಯದ 46 ಬೈಕ್ ಗಳನ್ನು ಕಳವು ಮಾಡಿದ್ದರು. ಇದರಲ್ಲಿಯೂ ಸುಲಭವಾಗಿ ಹಣ ಗಳಿಸಲು ಅವರು ಹೆಚ್ಚು ಬೆಲೆಯ ಐಷಾರಾಮಿ ಬೈಕ್ ಗಳನ್ನೇ ಕದಿಯುತ್ತಿದ್ದರು ಎಂದು ಪೋಲೀಸರು ಹೇಳಿದ್ದಾರೆ.
ಬೆಳಗಿನ ಜಾವ ಈ ಕೃತ್ಯ ಎಸಗುತ್ತಿದ್ದ ಗ್ಯಾಂಗ್ ಕಳವು ಮಾಡಿದ ಬೈಕ್ ಗಳನ್ನು ತಮಿಳುನಾಡಿನ ವಿದ್ಯಾರ್ಥಿಗಳಿಗೆ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದರು.
ತಮಿಳುನಾಡಿನ ವೇಲೂರು ಜಿಲ್ಲೆಯ ಜಿಲ್ಬಿಕರ ಅಲಿ, ಮೊಹಮದ್ ಮುಜಾಹಿದ್, ಮುಸ್ತಾಕಿನ್, ಇಸ್ತಿಯಾಖ್ ಹಾಗೂ ನೂರು ಮಹಮದ್ ಎನ್ನುವವರು ಬಂಧಿತರಾಗಿದ್ದು  ಕಳೆದ ಹಲವು ತಿಂಗಳಿನಿಂದ ಆಗ್ನೇಯ ಭಾಗದಲ್ಲಿ ವಾಹನ ಕಳವು ಪ್ರಕರಣ ನಡೆಯುತ್ತಿದ್ದು ಆರೋಪಿಗಳ ಪತ್ತೆಗೆ ವ್ಯಾಪಕ ಹುಡುಕಾಟ ನಡೆದಿತ್ತು ಎಂದು ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೋಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಜೂನ್ 26ರ ರಾತ್ರಿ ಕಾರಿನಲ್ಲಿ ಬಂದಿದ್ದ ಆರೋಪಿಗಳು ಪೋಲೀಸರ ಬಲೆಗೆ ಬಿದ್ದಿದ್ದಾರೆ. ಇವರ ವಿಚಾರಣೆ ವೇಳೆ ಪರಪ್ಪನ ಅಗ್ರಹಾರ, ಬಂಡೆಪಾಳ್ಯ, ಎಲೆಕ್ಟ್ರಾನಿಕ್ ಸಿಟಿ ಮುಂತಾದೆಡೆಗಳಿಂದ ಅವರು ಹಲವು ಬೈಕ್, ವಾಹನ ಕಳವು ಮಾಡಿರುವುದು ಬಹಿರಂಗವಾಗಿದೆ.
15 ರಾಯಲ್ ಎನ್ಫೀಲ್ಡ್, 13 ಕೆಟಿಎಂ, 10 ಪಲ್ಸರ್ ಮತ್ತು 7 ಯಮಹಾ ಬೈಕು ಹಾಗೂ ಸ್ಕೂಟರ್ ಗಳನ್ನು ಇವರಿಂದ ವಶಪಡಿಸಿಕೊಳ್ಳಲಾಗಿದೆ. ಆಗ್ನೇಯ ಭಾಗದಲ್ಲಿ  21 ಬೈಕು ಕಳ್ಳತನದ ಪ್ರಕರಣಗಳು ವರದಿಯಾದ ನಂತರ ಶಂಕಿತರ ಚಲನೆಯನ್ನು ಪತ್ತೆಹಚ್ಚಲು ವಿಶೇಷ ತಂಡ ರಚನೆಯಾಯಿತು ತಡರಾತ್ರಿಯ ವೇಳೆ ಕಾರ್ಯಾಚರಿಸುವ ಈ ತಂಡ ಬೈಕ್ ಗಳ ಹ್ಯಾಂಡಲ್ ಲಾಕ್ ಗಳನ್ನು ಮುರಿದು ಕಳವು ನಡೆಸುತ್ತಾರೆ. ಹೀಗೆ ಕಳವು ಮಾಡಿದ ವಾಹನಗಳನ್ನು ತಮಿಳುನಾಡಿನ ವಿದ್ಯಾರ್ಥಿಗಳಿಗೆ ಅಗ್ಗದ ದರದಲ್ಲಿ ಮಾರಲಾಗುತ್ತಿತ್ತು..ಕೆಟಿಎಂ ದ್ವಿಚಕ್ರ ವಾಹನವನ್ನು  ಕೇವಲ 25,000 ರೂಗಳಿಗೆ ಮಾರಾಟ ಮಾಡಲಾಗಿತ್ತು." ಪೋಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com