ಸಾಲಮನ್ನಾ ಮಾಡಿದರೆ ರೈತರ ಆತ್ಮಹತ್ಯೆ ನಿಲ್ಲುವುದಿಲ್ಲ: ಕಿಸಾನ್ ಅಧ್ಯಕ್ಷ ಸಚಿನ್ ಮೀಗ್

ತಾನು ತೆಗೆದುಕೊಂಡ ಸಾಲದ ತಿಂಗಳ ಮರುಪಾವತಿ ಮಾಡಲಾಗದೆ ಗದಗ ಜಿಲ್ಲೆಯ ಹಿಂದುಳಿದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು; ತಾನು ತೆಗೆದುಕೊಂಡ ಸಾಲದ ತಿಂಗಳ ಮರುಪಾವತಿ ಮಾಡಲಾಗದೆ ಗದಗ ಜಿಲ್ಲೆಯ ಹಿಂದುಳಿದ ಜಾತಿಯ ಮರಿಯವ್ವ ಎಂಬ 50 ವರ್ಷದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಹೀಗೆ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ಒಬ್ಬರು, ಇಬ್ಬರಲ್ಲ ಪ್ರತಿವರ್ಷ ನೂರಾರು ಜನ.

ಕೆಪಿಸಿಸಿ ಕಿಸಾನ್ ಮತ್ತು ಕೇತು ಮಜ್ದೂರ್ ಸೆಲ್ ಅಧ್ಯಕ್ಷ ಸಚಿನ್ ಮೀಗ್ 2016ರಲ್ಲಿ ರೈತರ ಆತ್ಮಹತ್ಯೆಗೆ ಮೂಲ ಕಾರಣಗಳನ್ನು ಹುಡುಕ ಹೊರಟರು. ಆಗ ಅವರಿಗೆ ತಿಳಿದುಬಂದ ಸತ್ಯಾಂಶ ಸರ್ಕಾರ ಕೇವಲ ರೈತರ ಸಾಲಮನ್ನಾ ಮಾಡಿದರೆ ಅವರ ಸಮಸ್ಯೆ ತಡೆಯಲಾಗುವುದಿಲ್ಲ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯಾಗುವುದಿಲ್ಲ. ಮೊನ್ನೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೈತರ ಬೆಳೆಸಾಲ ಮನ್ನಾ ಮಾಡುವುದಾಗಿ ಹೇಳಿದ ನಂತರವೂ ಒಂದಿಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಲಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ 876 ರೈತರ ಮನೆಗಳಿಗೆ 2015ರಿಂದ ಸಚಿನ್ ಭೇಟಿ ನೀಡಿದ್ದಾರೆ. ಅವರ ಕಚೇರಿಯಲ್ಲಿ ಒಂದು ದಿನ ರೈತರ ಆತ್ಮಹತ್ಯೆ ಕುರಿತು ಸಭೆ ನಡೆಸಿದ ನಂತರ ಅವರಿಗೆ ಇದಕ್ಕೆ ಮೂಲಕಾರಣ ಹುಡುಕುವ ತುಡಿತ ಉಂಟಾಯಿತಂತೆ. ಇದಕ್ಕಾಗಿ ಅವರು 28 ಜಿಲ್ಲೆಗಳಲ್ಲಿ ಸುಮಾರು 25 ಸಾವಿರ ಕಿಲೋ ಮೀಟರ್ ಸಂಚರಿಸಿದ್ದಾರೆ.
ಆತ್ಮಹತ್ಯೆ ತಡೆಯಲು ನನ್ನ ವರದಿಯಲ್ಲಿ 15 ಶಿಫಾರಸುಗಳನ್ನು ಮಾಡಿದ್ದೇನೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಸಲ್ಲಿಸಿದ್ದೇನೆ ಎನ್ನುತ್ತಾರೆ ಸಚಿನ್. ಇಂದು ಸರ್ಕಾರ ತರುವ ವಿಮಾ ಯೋಜನೆಗಳಿಂದ ಯಾವುದೇ ರೈತರಿಗೆ ಪ್ರಯೋಜನವಾಗುವುದಿಲ್ಲ ಎನ್ನುತ್ತಾರೆ.

ಬೋರ್ ವೆಲ್ ಕೊರೆದು ಅದರಲ್ಲಿ ನೀರು ಸಿಗದಿದ್ದರೆ ರೈತರು ಅಪಾರ ನಷ್ಟಕ್ಕೊಳಗಾಗುತ್ತಾರೆ. ಅದಕ್ಕೆ ಸರ್ಕಾರದ ಸಂಸ್ಥೆಗಳು ಬೋರ್ ವೆಲ್ ಗಳನ್ನು ಕೊರೆದು ನೀರು ಸಿಗದಿದ್ದರೆ ರೈತರ ಬದಲಿಗೆ ಸರ್ಕಾರವೇ ಹಣ ನೀಡಬೇಕು ಎನ್ನುತ್ತಾರೆ ಸಚಿನ್.
ತಾವು ಪ್ರಧಾನಮಂತ್ರಿ ವಿರುದ್ಧ ನೀಡಿರುವ ದೂರನ್ನು ಆಧರಿಸಿ ಸಿಬಿಐ ದೂರು ದಾಖಲಿಸಿದೆ. ಬೆಳೆವಿಮಾ ಯೋಜನೆ, ಪ್ರಧಾನಮಮಂತ್ರಿ ಫಸಲ್ ಭೀಮಾ ಯೋಜನೆಗಳಲ್ಲಿ ಆಗಿರುವ ಅಕ್ರಮಗಳ ಕುರಿತು ಸಿಬಿಐ ತನಿಖೆ ಆರಂಭಿಸಿದೆ. ಆರಂಭದಲ್ಲಿ ಪ್ರಧಾನಮಂತ್ರಿಗಳ ವಿರುದ್ಧ ನೀಡಿದ್ದ ದೂರನ್ನು ಸ್ವೀಕರಿಸಲಿಲ್ಲ. ಕೊನೆಗೆ ದೆಹಲಿ ಮೂಲದ ವಿಜ್ಞಾನ ಮತ್ತು ಪರಿಸರ ಹಾಗೂ ಸಿಎಜಿ ವರದಿಗಳನ್ನು ಆಧರಿಸಿ ಕಳೆದ ವರ್ಷ ನವೆಂಬರ್ ನಲ್ಲಿ ಸಿಬಿಐ ಕೇಸು ದಾಖಲಿಸಿದೆ ಎನ್ನುತ್ತಾರೆ ಸಚಿನ್ ಮೀಗ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com