ದೊಡ್ಡ ಸರ್ಕಾರಕ್ಕೆ ಇಷ್ಟು ಸಣ್ಣ ಕೆಲಸ ಮಾಡಲು ಏಕೆ ಸಾಧ್ಯವಿಲ್ಲ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ!

ಮಲಿನಗೊಂಡಿರುವ ಬೆಳ್ಳಂದೂರು ಕೆರೆ ಸ್ವಚ್ಛತೆ ವಿಳಂಬವಾಗುತ್ತಿರುವುದಕ್ಕೆ ಸರ್ಕಾರದ ವಿರುದ್ಧ ಹರಿಹಾಯ್ದಿರುವ ರಾಜ್ಯ ಹೈಕೋರ್ಟ್, ಇಷ್ಟು ದೊಡ್ಡ ಸರ್ಕಾರಕ್ಕೆ ಕಳೆದ ...
ಹೈಕೋರ್ಟ್
ಹೈಕೋರ್ಟ್
ಬೆಂಗಳೂರು: ಮಲಿನಗೊಂಡಿರುವ ಬೆಳ್ಳಂದೂರು ಕೆರೆ ಸ್ವಚ್ಛತೆ ವಿಳಂಬವಾಗುತ್ತಿರುವುದಕ್ಕೆ ಸರ್ಕಾರದ ವಿರುದ್ಧ ಹರಿಹಾಯ್ದಿರುವ ರಾಜ್ಯ ಹೈಕೋರ್ಟ್, ಇಷ್ಟು ದೊಡ್ಡ ಸರ್ಕಾರಕ್ಕೆ ಕಳೆದ ಮೂರು ವರ್ಷಗಳಿಂದ ಅಷ್ಟು ಸಣ್ಣ ಕೆಲಸ ಮಾಡಲು ಸಾಧ್ಯವಾಗದಿರುವುದಕ್ಕೆ ಆಶ್ಚರ್ಯ ವ್ಯಕ್ತ ಪಡಿಸಿದೆ.
ಸರ್ಕಾರದ ಜವಾಬ್ದಾರಿ ಅಧಿಕಾರಿ ಶುಕ್ರವಾರ ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಸೂಚಿಸಿದೆ. ನ್ಯಾಯಮೂರ್ತಿ ಎಚ್,ಜಿ ರಮೇಶ್, ಮತ್ತು ಮೊಹಮದ್ ನವಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠ ಸರ್ಕಾರದ ಈ ನಡೆದೆ ಅಚ್ಚರಿ ಸೂಚಿಸಿದೆ.
2015ರಲ್ಲಿ ರಾಜ್ಯ ಸಭೆ ಸದಸ್ಯ ಡಿ,ಕುಪೇಂದ್ರ ರೆಡ್ಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೆರೆ ಸ್ವಚ್ಚಗೊಳಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದರು. ಅರ್ಜಿ ಸಲ್ಲಿಸಿ ಮೂರು ವರ್ಷವಾದರೂ ಇದುವರೆಗೂ ಸರ್ಕಾರ ಕೆರೆ ಸ್ವಚ್ಛಗೊಳಿಸದಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿರುವ ಹೈಕೋರ್ಟ್ ಪೀಠ ಅವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದೆ,
ಜವಾಬ್ದಾರಿಯುತ ಅಧಿಕಾರಿ ಎಲ್ಲಾ ಇಲಾಖೆಗಳೊಂದಿಗೂ ಸಮನ್ವಯತೆಯಿಂದ ಇರಬೇಕು. ಶುಕ್ರವಾರ  ಎಲ್ಲಾ ಇಲಾಖೆಗಳಿಗೆ ಸಂಬಂಧಪಟ್ಟವರು ಇರಬೇಕು ಎಂದು ಆದೇಶಿಸಿದೆ, ಕಳೆದ ಬಾರಿ ವಿಚಾರಣೆ ವೇಳೆ ಬೆಳ್ಳಂದೂರು ಕೆರೆ ಸಮೀಪವಿರುವ ಎಲ್ಲಾ  74 ಕೈಗಾರಿಕೆಗಳನ್ನು ಸ್ಥಳಂತಾರಗೊಳಿಸುವುದಾಗಿ ಸರ್ಕಾರ ಹೈಕೋರ್ಟ್ ಗೆ ತಿಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com