ರಾಜೀವ್ ಗಾಂಧಿ ಆರೋಗ್ಯ ವಿವಿ ಹೊಸ ಇತಿಹಾಸ: ಪರೀಕ್ಷೆ ಬರೆದ 15ನಿಮಿಷದಲ್ಲೇ ಫಲಿತಾಂಶ

ರಾಜೀವ್ ಗಾಂಧಿ ಆರೋಗ್ಯ. ವಿಶ್ವ ವಿದ್ಯಾನಿಲಯ ಎಂಡಿಎಸ್‌ ಮತ್ತು ದಂತ ವೈದ್ಯಕೀಯ ಡಿಪ್ಲೊಮಾ ಪರೀಕ್ಷೆ ನಡೆಸಿದ್ದು, ಪರಿಕ್ಷೆ ಮುಗಿದ 15 ನಿಮಿಷಗಳಲ್ಲೆ ಫಲಿತಾಂಶ ...
ಸಾಂದರ್ಬಿಕ ಚಿತ್ರ
ಸಾಂದರ್ಬಿಕ ಚಿತ್ರ
ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ. ವಿಶ್ವ ವಿದ್ಯಾನಿಲಯ  ಎಂಡಿಎಸ್‌ ಮತ್ತು ದಂತ ವೈದ್ಯಕೀಯ ಡಿಪ್ಲೊಮಾ ಪರೀಕ್ಷೆ ನಡೆಸಿದ್ದು, ಪರಿಕ್ಷೆ ಮುಗಿದ 15 ನಿಮಿಷಗಳಲ್ಲೆ ಫಲಿತಾಂಶ ಪ್ರಕಟಿಸಿದೆ.
ಎಂಡಿಎಸ್‌ ಮತ್ತು ದಂತವೈದ್ಯಕೀಯ ಡಿಪ್ಲೊಮಾ ಕೋರ್ಸ್‌ಗಳ ಥಿಯರಿ ಪರೀಕ್ಷೆ ಜೂನ್‌ನಲ್ಲಿ ಏರ್ಪಡಿಸಲಾಗಿತ್ತು. ಎಂಡಿಎಸ್‌ನಲ್ಲಿ 9 ವಿಭಾಗ ಹಾಗೂ ದಂತವೈದ್ಯಕೀಯ ಡಿಪ್ಲೊಮಾದ 5 ವಿಭಾಗ ಸೇರಿ ಒಟ್ಟು 850 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಥಿಯರಿ ಪರೀಕ್ಷೆಗಳ ಮೌಲ್ಯಮಾಪನ ವನ್ನು ಪರೀಕ್ಷೆ ನಡೆದ ಕೆಲವೇ ದಿನದಲ್ಲಿ ಪೂರೈಸಿದ್ದರು. 
ಪರೀಕ್ಷೆ ಮುಗಿದ ಕೆಲವೇ ನಿಮಿಷದಲ್ಲಿ ಫ‌ಲಿತಾಂಶ ನೀಡಲು ಸಾಧ್ಯವಾಗಿದೆ. ಡಿಜಿಟಲ್‌ ಮೌಲ್ಯಮಾಪನವೂ ಹೆಚ್ಚಿನ ಸಹಕಾರಿಯಾಗಿದೆ ಎಂದು  ವಿವಿ ಉಪ ಕುಲಪತಿ ಡಾ. ಸಚ್ಚಿದಾನಂದ ಹೇಳಿದ್ದಾರೆ.ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಳ್ಳುತ್ತಿದ್ದಂತೆ ಎಲ್ಲ ಕಾಲೇಜಿನಿಂದ ವೆಬ್‌ಸೈಟ್‌ನಲ್ಲಿ ಅದನ್ನು ಅಪ್‌ಲೋಡ್‌ ಮಾಡಿದ್ದಾರೆ. 
ರಾಜೀವ್‌ ಗಾಂಧಿ ವಿವಿ ಕೇಂದ್ರ ಕಚೇರಿಯಲ್ಲಿ ಥಿಯರಿ ಮತ್ತು ಪ್ರಾಯೋಗಿಕ ಪರೀಕ್ಷೆಯ ಅಂಕಗಳನ್ನು ಕ್ರೋಢೀಕರಿಸಿ 15 ನಿಮಿಷದಲ್ಲಿ ಫ‌ಲಿತಾಂಶ ನೀಡಿದ್ದಾರೆ. ಇದು ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರ ಮೆಚ್ಚುಗೆಗೆ ಪಾತ್ರವಾಗಿದೆ.
ಜುಲೈ 12ರ ಸಂಜೆ 5 ಗಂಟೆಗೆ ಕಾಲೇಜುಗಳಿಂದ ಪ್ರಾಯೋಗಿಕ ಪರೀಕ್ಷೆಯ ಫ‌ಲಿತಾಂಶ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗಿತ್ತು. ಅದಕ್ಕೆ ಥಿಯರಿ ಪರೀಕ್ಷೆಯ ಅಂಕಗಳನ್ನು ಸೇರಿಸಿ 5.15ಕ್ಕೆ ವಿದ್ಯಾರ್ಥಿಗಳಿಗೆ ಫ‌ಲಿತಾಂಶ  ನೀಡಲಾಗಿದೆ ಎಂದು ವಿವಿಯ ಪರೀಕ್ಷಾಂಗ ವಿಭಾಗ ತಿಳಿಸಿದೆ. ಮೌಲ್ಯಮಾಪಕರು ಮತ್ತು ಕಾಲೇಜುಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರೆಂದು ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ.ಎಂ.ರಮೇಶ್‌ ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com