8 ವರ್ಷದ ನಂತರ ಮೈದುಂಬಿ ಹರಿಯುತ್ತಿದೆ ಪ್ರವಾಸಿಗರ ಹಾಟ್ ಫೇವರಿಟ್ 'ಶಿವನಸಮುದ್ರ'

ದಕ್ಷಿಣದ ನಯಾಗರ ಎಂದೇ ಪ್ರಸಿದ್ಧವಾಗಿರುವ ಗಗನ ಚುಕ್ಕಿ-ಭರಚುಕ್ಕಿ ಜಲಪಾತಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ, ...
ಗಗನಚುಕ್ಕಿ ಮತ್ತು ಭರಚುಕ್ಕಿ
ಗಗನಚುಕ್ಕಿ ಮತ್ತು ಭರಚುಕ್ಕಿ
ಮೈಸೂರು: ದಕ್ಷಿಣದ ನಯಾಗರ ಎಂದೇ ಪ್ರಸಿದ್ಧವಾಗಿರುವ ಗಗನ ಚುಕ್ಕಿ-ಭರಚುಕ್ಕಿ ಜಲಪಾತಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ, 
ಶಿವನಸಮುದ್ರ ಗ್ರಾಮದಲ್ಲಿರುವ ಈ ಜಲಪಾತಗಳು ಬೆಂಗಳೂರಿನಿಂದ ಸುಮಾರು 100 ಕಿಮೀ ದೂರದಲ್ಲಿದೆ. ವಾರಾಂತ್ಯದಲ್ಲಿ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿದೆ, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ 8 ವರ್ಷಗಳ ನಂತರ ಸಂಪೂರ್ಣವಾಗಿ ತುಂಬಿದೆ. ನೀರಾವರಿ ಇಲಾಖೆ ಕಬಿನಿ ಜಲಾಶಯದಿಂದ 50 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಟ್ಟಿರುವುದರಿಂದ ಕೃಷ್ಣರಾಜ ಸಾಗರ ಜಲಾಶಯದ ಕ್ರೆಸ್ಟ್ ಗೇಟ್ ಗಳು ಯಾವ ಸಂದರ್ಭದಲ್ಲಾದರೂ ತೆರೆಯಬಹುದಾಗಿದೆ.
ಪ್ರಪಂಚದ 100 ಜಲಪಾತಗಳಲ್ಲಿ ಮಂಡ್ಯ ಚಾಮರಾಜನಗರ  ಜಿಲ್ಲೆಯ ಗಡಿ ಭಾಗದಲ್ಲಿರುವ ಈ ಅವಳಿ ಜಲಾಶಯಗಳು ಕೂಡ ಒಂದಾಗಿದೆ. 1 ಸಾವಿರ ಅಡಿ ಅಗಲವಿರುವ ಈ ಜಲಪಾತದಿಂದ  100 ಅಡಿ ಎತ್ತರದಿಂದ ನೀರು ಧುಮುಕುತ್ತದೆ. ಸೆಲ್ಫೀ ತೆಗೆದುಕೊಳ್ಳುವವರ ಫೇವರಿಟ್ ಸ್ಪಾಟ್ ಕೂಡ ಇದಾಗಿದೆ. 
ಕಾವೇರಿ ನದಿ ಇಬ್ಬಾಗವಾಗಿ ಹರಿಯುವುದನ್ನೆ ಗಗನ ಚುಕ್ಕಿ ಭರಚುಕ್ಕಿ ಜಲಪಾತ ಎಂದು ಕರೆಯುತ್ತಾರೆ, ಗಗನ ಚುಕ್ಕಿ ಮಂಡ್ಯ ಜಿಲ್ಲೆಯಲ್ಲಿದ್ದರೇ ಭರಚುಕ್ಕಿ ಕೊಳ್ಳೇಗಾಲ ತಾಲೂಕಿನಲ್ಲಿದೆ, ಸದ್ಯ ಕಾವೇರಿ ನದಿ ತುಂಬಿರುವುದರಿಂದ ಪ್ರವಾಸಿಗರಿಗೆ ನಿಷೇಧ ಹೇರಲಾಗಿದ್ದು, ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದಾರೆ,
ಪ್ರವಾಸಿಗರು ಶಿವನ ಸಮುದ್ರ ಗ್ರಾಮದ ಮೂಲಕ ಗಗನ ಚುಕ್ಕಿ ತಲುಪಬಹುದು. ಕೊಳ್ಳೆಗಾಲ ಮತ್ತು ಮಳವಲ್ಲಿ ರಾಷ್ಟ್ರೀಯ ಹೆದ್ದಾರಿಯ ಸತ್ಯಗಾಲದ ಮೂಲಕ ಭರ ಚುಕ್ಕಿ ಜಲಪಾತ ತಲುಪಬಹುದಾಗಿದೆ. ಶತಮಾನದಷ್ಟು ಹಳೇಯದಾದ ಶಿವನಸಮುದ್ರ ಜಲ ವಿದ್ಯುತ್ ಕೇಂದ್ರ ಹಾಗೂ ಶ್ರೀ ಶಿವನ ಸಮುದ್ರ ಶ್ರೀ ಚಕ್ರ ಲಕ್ಷ್ಮಿ ದೇವಾಲಯ ಹಾಗೂ ದರ್ಗಾ ಹಜರತ್  ಮರಾಡೇನ್ ಗೈಬ್ ನೋಡಬಹುದಾಗಿದೆ.
ಕಳೆದ ಕೆಲವು ದಿನಗಳಿಂದ ಇಲ್ಲಿಗೆ ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ, ಜಲಪಾತ ಸಮೀಪದಲ್ಲಿರುವ ಬಿಳಿಗಿರಿ ರಂಗನ ಬೆಟ್ಟ, ಕಾವೇರಿ ವನ್ಯಧಾಮಸ, ಮಲೈ ಮಹದೇಶ್ವರ  ದೇವಾಲಯಗಳಿಗೂ ಭೇಟಿ ನೀಡಬಹುದಾಗಿದೆ, 
ಪ್ರವಾಸಿಗರು ಜಲಪಾತದ ಕೆಳಗೆ ಇಳಿಯುವುದನ್ನು ತಡೆಗಟ್ಟಲು ಪ್ರವಾಸೋದ್ಯಮ ಇಲಾಖೆ ತಂತಿಬೇಲಿ ನಿರ್ಮಿಸಿದೆ .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com