ಕೆಪಿಎಸ್‌ಸಿ ಅಕ್ರಮ: 362 ಗೆಝೆಟೆಡ್ ಪ್ರೊಬೆಷನರಿ ಆಕಾಂಕ್ಷಿಗಳ ನಿರೀಕ್ಷೆಗೆ ತಣ್ಣೀರೆರಚಿದ ಹೈಕೋರ್ಟ್

2011 ಬ್ಯಾಚ್ ನ 362 ಗಝೆಟೆಡ್ ಪ್ರೊಬೆಷನರಿ (ಕೆಎಎಸ್ ಮತ್ತು ಇತರ ಹುದ್ದೆಗಳು) ಹುದ್ದೆ ಆಕಾಂಕ್ಷಿಗಳಿಗೆ ಮತ್ತೆ ಹಿನ್ನಡೆಯಾಗಿದೆ.
ಕರ್ನಾಟಕ  ಹೈಕೋರ್ಟ್
ಕರ್ನಾಟಕ ಹೈಕೋರ್ಟ್
ಬೆಂಗಳೂರು: 2011 ಬ್ಯಾಚ್ ನ  362 ಗಝೆಟೆಡ್ ಪ್ರೊಬೆಷನರಿ (ಕೆಎಎಸ್ ಮತ್ತು ಇತರ ಹುದ್ದೆಗಳು) ಹುದ್ದೆ ಆಕಾಂಕ್ಷಿಗಳಿಗೆ ಮತ್ತೆ ಹಿನ್ನಡೆಯಾಗಿದೆ. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2011ನೇ ಸಾಲಿನಲ್ಲಿ ನಡೆಸಿದ್ದ "ಎ' ಮತ್ತು "ಬಿ' ದರ್ಜೆಯ ಎಲ್ಲಾ ನೇಮಕಾತಿಗಳನ್ನು ರದ್ದುಗೊಳಿಸಿದ ಹೈಕೋರ್ಟ್ ಇದೀಗ ಆ ಸಾಲಿನ ಲಿಖಿತ ಪರೀಕ್ಷೆಯನ್ನು ಊರ್ಜಿತಗೊಳಿಸಿ ಹೊಸದಾಗಿ ಸಂದರ್ಶನ  ನಡೆಆಲು ಅವಕಾಶ ಕೋರಿ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ.
ನ್ಯಾಯಮೂರ್ತಿ ಎಚ್. ಜಿ. ರಮೇಶ್ ಮತ್ತು ನ್ಯಾಯಮೂರ್ತಿ ಪಿ. ದಿನೇಶ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಲಿಖಿತ ಪರೀಕ್ಷೆಯಲ್ಲಿ ಸಹ ಕೆಲವು ಹಿತಾಸಕ್ತಿಗಳ ಮದ್ಯಪ್ರವೇಶದಿಂಡಗಿ ಅಕ್ರಮಗಳು ಸಂಭವಿಸಿದೆ.ಇದರಿಂದಾಗಿ ಆ ಲಿಖಿತ ಪರೀಷೆಯನ್ನು ಊರ್ಜಿತಗೊಳಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.
ನೇಮಕಾತಿ ಪ್ರಕ್ರಿಯೆ ನಡೆದು 8 ವರ್ಷ, ಲಿಖಿತ ಪರೀಕ್ಷೆ ಮುಗಿದು 5.5 ವರ್ಷ ಆಗಿದ್ದು ಇಷ್ಟು ಕಾಲಾವಧಿಯ ಬಳಿಕ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಸಾಧ್ಯವಿಲ್ಲ ಎಂದು ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ. ಇದರೊಂದಿಗೆ 2011ನೇ ಸಾಲಿನಲ್ಲಿ 362 "ಎ' ಮತ್ತು "ಬಿ' ದರ್ಜೆ ಹುದ್ದೆಗೆ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ಸಿಕ್ಕಬಹುದಾಗಿದ್ದ ಕಡೆಯ ಅವಕಾಶ ಸಹ ಕೈತಪ್ಪಿದೆ.
ರಾಜ್ಯ ಸರ್ಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಶಿಫಾರಸು ಮಾಡುವ ಸಾಂವಿಧಾನಿಕ  ಸಂಸ್ಥೆ ಕೆಪಿಎಸ್‌ಸಿ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಮ್ನಡೆದಿರುವುದು ಸಂಸ್ಥೆಯ ಮೇಲಿಟ್ಟಿದ್ದ ವಿಶ್ವಾಸಕ್ಕೆ ಭಂಗ ತಂದಿದೆ. ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com