ಬೆಳಗಾವಿ: ಸೊಸೈಟಿಯಲ್ಲಿ ಕಳುವಾಗಿದ್ದ 1.1 ಕೋಟಿ ರೂ. ಮೌಲ್ಯದ ಆಭರಣ ವಶ, ಮೂವರ ಬಂಧನ

ಸ್ಥಳೀಯ ಸಹಕಾರ ಸಂಘದ ಖಜಾನೆಯಿಂದ 4 ಕೆಜಿ ಚಿನ್ನದ ಆಭರಣಗಳ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿರುವ ಪೋಲೀಸರು 1.1 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ: ಸೊಸೈಟಿಯಲ್ಲಿ ಕಳುವಾಗಿದ್ದ 1.1 ಕೋಟಿ ರೂ. ಮೌಲ್ಯದ ಆಭರಣ ವಶ, ಮೂವರ ಬಂಧನ
ಬೆಳಗಾವಿ: ಸೊಸೈಟಿಯಲ್ಲಿ ಕಳುವಾಗಿದ್ದ 1.1 ಕೋಟಿ ರೂ. ಮೌಲ್ಯದ ಆಭರಣ ವಶ, ಮೂವರ ಬಂಧನ
ಬೆಳಗಾವಿ: ಸ್ಥಳೀಯ ಸಹಕಾರ ಸಂಘದ ಖಜಾನೆಯಿಂದ 4 ಕೆಜಿ ಚಿನ್ನದ ಆಭರಣಗಳ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿರುವ ಬೆಳಗಾವಿ ಪೋಲೀಸರು 1.1 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಪೋಲೀಸರು ಕಳ್ಳರು ದೋಚಿದ್ದ ಎಲ್ಲಾ ಆಭರಣಗಳನ್ನು ಮರುವಶಪಡಿಸಿಕೊಂಡಿದ್ದಾರೆ
ಮಂಗೇಶ್ ಶಶಿಕಾಂತ್ ಶಿರೋದ್ಕರ್ (45), ಶ್ರೀ ಶೈಲ್ ಯಮನಪ್ಪ ತರಿಹಾಳ್ ( (35)  ಮತ್ತು ಮಾರುತಿ ಮಹಾಬಲೇಶ್ವರ ರಾಯ್ಕರ್ (45) ಬಂಧಿತ ಆರೋಪಿಗಳು.
ಈ ಮೂವರು ಕಲಿಕಾ ದೈವದ್ಯ ಸೌಹಾರ್ದ ಕೋಆಪರೇಟಿವ್  ಸೊಸೈಟಿಯ (ಕೆಡಿಎಸ್ಸಿಎಸ್) ಯಲ್ಲಿ ಕೆಲಸ ಮಾಡುತ್ತಿದ್ದರು.ಹಾಗೆಯೇ ತಾವು ಕೆಲಸ ಮಾಡುತ್ತಿದ್ದ ಸೊಸೈಟಿಯ ಚಿನ್ನಾಭರಣವನ್ನೇ ದೋಚುವ ಕೃತ್ಯ ನಡೆಸಿದ್ದರು.ಸೊಸೈಟಿಯು ಜನರಿಗೆ ಸಾಲವನ್ನು ನೀಡಿದ್ದು ಸಾಲದ ಭದ್ರತೆಗಾಗಿ ಚಿನ್ನವನ್ನು ಇರಿಸಿಕೊಂಡಿತ್ತು ಎನ್ನಲಾಗಿದೆ. ಸೊಸೈಟಿಯ ಮ್ಯಾನೇಜರ್ ಆಗಿದ್ದ ಶಿರೋದ್ಕರ್ ಈ ಕೃತ್ಯದ ಪ್ರಮುಖ ರೂವಾರಿಯಾಗಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com