ಗದಗ್ ನ ಮಹಿಳಾ ಜೆಟ್ ಸ್ಕಿ ತರಬೇತುದಾರರಿಂದ ಹೊಸ ಅಲೆ ಸೃಷ್ಟಿ

ಸೌಮ್ಯ ಎಚ್. ಎಸ್. ಗದಗ್ ನಲ್ಲಿರುವ ಏಕೈಕ ಮಹಿಳಾ ಜೆಟ್ ಸ್ಕಿ ಗೈಡ್ ಆಗಿದ್ದು, ಜಲಕ್ರೀಡೆಯಲ್ಲಿ ಅಲೆ ಸೃಷ್ಟಿಸಿದ್ದಾರೆ.ಇಲ್ಲಿನ ಭೀಷ್ಮ ಕೆರೆಯಲ್ಲಿ ಹಲವು ಮಹಿಳೆಯರಿಗೆ ಇವರು ಜಲಕ್ರೀಡೆಯಲ್ಲಿ ತರಬೇತಿ ನೀಡುತ್ತಿದ್ದಾರೆ
ಸೌಮ್ಯ ತರಬೇತಿ ನೀಡುತ್ತಿರುವ ಚಿತ್ರ
ಸೌಮ್ಯ ತರಬೇತಿ ನೀಡುತ್ತಿರುವ ಚಿತ್ರ
ಗದಗ್: ಸೌಮ್ಯ ಎಚ್. ಎಸ್.   ಗದಗ್ ನಲ್ಲಿರುವ ಏಕೈಕ ಮಹಿಳಾ ಜೆಟ್ ಸ್ಕಿ ಗೈಡ್ ಆಗಿದ್ದು, ಜಲಕ್ರೀಡೆಯಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ.
  ಮೂಲತ: ಹಾಸನದವರಾದ ಇವರು ಗದಗ್ ನಾದ್ಯಂತ ಮನೆಮಾತಾಗಿದ್ದಾರೆ. ಇಲ್ಲಿನ ಭೀಷ್ಮ ಕೆರೆಯಲ್ಲಿ ಹಲವು ಮಹಿಳೆಯರಿಗೆ ಇವರು ಜಲಕ್ರೀಡೆಯಲ್ಲಿ  ತರಬೇತಿ ನೀಡುತ್ತಿದ್ದಾರೆ. ವಿವಿಧ ಪ್ರಕಾರದ ರೈಡಿಂಗ್ ಹಾಗೂ ರಕ್ಷಣೆಯ ಬಗ್ಗೆ ತರಬೇತಿ ನೀಡುತ್ತಾರೆ.
ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡಿರುವ ಸೌಮ್ಯ, ಸಾಹಸ ಕ್ರೀಡೆಯಲ್ಲಿ  ವೃತ್ತಿ ಆರಂಭಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಅವರು ಜೆಟ್ ಸ್ಕಿ ತರಬೇತಿ ಪೂರ್ಣಗೊಳಿಸಿದ್ದಾರೆ. ಕಳೆದ ತಿಂಗಳು ಗದಗ್ ಗೆ ಬರುವ ಮುನ್ನ  ಅವರ  ಮಂಗಳೂರಿನಲ್ಲಿ ಜೆಟ್ ಸ್ಕೈ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಬಿಳಿ ನೀರು ರಕ್ಷಣೆಯಲ್ಲಿ ಪರಿಣತಿ ತರಬೇತಿ ಹಾಗೂ ಜೆಟ್ ಸ್ಕೈ ಸೂಚನಕಾರರು ಕೋರ್ಸ್ ಪೂರ್ಣಗೊಳಿಸಿದ ಭಾರತೀಯ ಮೊದಲ ಮಹಿಳೆ ಯರಲ್ಲಿ ನಾನು ಒಬ್ಬಳು ಎನ್ನುತ್ತಾರೆ.
ಆಗಂಬೆಯಲ್ಲಿ ಜಲಕ್ರೀಡೆ ವೃತ್ತಿ ಆರಂಭಿಸಿದ್ದಾಗಿ ಹೇಳುವ ಸೌಮ್ಯ, ಇಂದು ಗದಗ್ ನಲ್ಲಿ ತಮ್ಮಿಂದ ತರಬೇತಿ ಪಡೆಯಲು ಮಹಿಳಾ ಸಾಲುಗಟ್ಟಿ ನಿಂತಿರುತ್ತಾರೆ.  ಕೆಲ ಯುವತಿಯರು ಜಲ ಕ್ರೀಡೆಗೆ ಪ್ರಯತ್ನಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎನ್ನುತ್ತಾರೆ.
 ಸೌಮ್ಯ  ಮಂಜುನಾಥ್ ಎಂಬುವರನ್ನು ವಿವಾಹವಾಗಿದ್ದಾರೆ.  ಅವರು ಸಾಹಸ ಕ್ರೀಡೆಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆ ನಂತರ ಆಕೆ ಅವರ ಪತಿಯೊಂದಿಗೆ ಕಾಯಕಿಂಗ್ ಪ್ರವಾಸಕ್ಕೆ ತೆರಳಿದದ್ದು ತಮ್ಮ ಜೀವನದಲ್ಲಿ ಮಹತ್ತರ ಬದಲಾವಣೆ ತಂದಿತ್ತು. ಮಾರನೆದಿನ ಕಾಳಿ ಹಿನ್ನೀರು  ಪ್ರವಾಸ ಕೈಗೊಂಡಿತ್ತು, ಅಲ್ಲಿಂದ ತಮ್ಮ ಭವಿಷ್ಯ ಆರಂಭವಾಯಿತೆಂದು ಅವರು ತಿಳಿಸಿದ್ದಾರೆ.
 ಗದಗ್ ನಲ್ಲಿ ಅನೇಕ ಯುವತಿಯರಿಗೆ ಜಲಕ್ರೀಡೆ ಬಗ್ಗೆ ಸೌಮ್ಯ ಅವರು ತರಬೇತಿ ನೀಡುತ್ತಿರುವುದಾಗಿ ಲಕ್ಷ್ಮಣ್ ಚಲವಾದಿ ತಿಳಿಸಿದ್ದಾರೆ. ಭೀಷ್ಮಾ ಕೆರೆ 103 ಎಕರೆ ವಿಸ್ತೀರ್ಣ ಹೊಂದಿದ್ದು, ಮಳೆಗಾಲದಲ್ಲಿ ನೀರು ತುಂಬಿ ಹರಿಯುತ್ತಿದ್ದು, ಜಲ ಕ್ರೀಡಾಸಕ್ತರ ಆಕರ್ಷಣೀಯ ಕೇಂದ್ರವಾಗಿ ರೂಪುಗೊಂಡಿದೆ.
ಮಂಗಳೂರು, ಉಡುಪಿ ಮತಿತ್ತರ ಕಡೆಗಳಲ್ಲಿ ಹೋಗುತ್ತಿದ್ದ ಪ್ರವಾಸಿಗರು ಗದಗ್ ಗೆ ಬಂದು ಸೌಮ್ಯ ಅವರಿಂದ ತರಬೇತಿ ಪಡೆದು ಜಲಕ್ರೀಡೆಯಲ್ಲಿ ಸಂತಸ ಪಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com