ಸಲಿಂಗಕಾಮ ಒಂದು ಮನೋರೋಗವಲ್ಲ; ಭಾರತೀಯ ಸೈಕಿಯಾಟ್ರಿಕ್ ಸೊಸೈಟಿ

ಸಲಿಂಗಕಾಮ ಮಾನಸಿಕ ಅಸ್ವಸ್ಥತೆಯಲ್ಲ ಎಂದು ಭಾರತೀಯ ಮನೋವೈದ್ಯರು, ಮನೋವಿಜ್ಞಾನಿಗಳು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಲಿಂಗಕಾಮ ಮಾನಸಿಕ ಅಸ್ವಸ್ಥತೆಯಲ್ಲ ಎಂದು ಭಾರತೀಯ ಮನೋವೈದ್ಯರು, ಮನೋವಿಜ್ಞಾನಿಗಳು ಮತ್ತು ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತರ ಸಂಸ್ಥೆಯಾಗಿರುವ ಭಾರತೀಯ ಸೈಕಿಯಾಟ್ರಿಕ್ ಸೊಸೈಟಿ(ಐಪಿಎಸ್) ಹೇಳಿದೆ.

ಸಲಿಂಗಕಾಮದ ಬಗ್ಗೆ ಸುಪ್ರೀಂ ಕೋರ್ಟ್ ನಿರ್ಣಯಿಸುವುದರ ಬಗ್ಗೆ ಚರ್ಚೆ ನಡೆಸುತ್ತಿರುವ ಸಂದರ್ಭದಲ್ಲಿ ಭಾರತೀಯ ಸೈಕಿಯಾಟ್ರಿಕ್ ಸೊಸೈಟಿ ಜುಲೈ 6ರಂದು ಈ ಹೇಳಿಕೆ ಬಿಡುಗಡೆ ಮಾಡಿದೆ. 1973ರಲ್ಲಿ ಅಮೆರಿಕಾದ ಸೈಕಿಯಾಟ್ರಿಕ್ ಅಸೋಸಿಯೇಷನ್, ಸಲಿಂಗಕಾಮವನ್ನು ಮಾನಸಿಕ ಕಾಯಿಲೆ ಪಟ್ಟಿಯಿಂದ ತೆಗೆದುಹಾಕಿದ ನಂತರ ಇದೀಗ ಭಾರತೀಯ ಸೈಕಿಯಾಟ್ರಿಕ್ ಸೊಸೈಟಿ ಕೂಡ ಅದೇ ಹೆಜ್ಜೆಯನ್ನಿರಿಸಿದೆ. 1992ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸಲಿಂಗಕಾಮವನ್ನು ಅಂತಾರಾಷ್ಟ್ರೀಯ ರೋಗಗಳ ವರ್ಗೀಕರಣ ಪಟ್ಟಿಯಿಂದ ತೆಗೆದುಹಾಕಿತ್ತು.

ಮಾನವನ ಲೈಂಗಿಕ ಕ್ರಿಯೆಗಳಲ್ಲಿ ಭಿನ್ನಲಿಂಗೀಯತೆ ಮತ್ತು ಉಭಯಲಿಂಗಿತ್ವದಂತೆ ಸಲಿಂಗಕಾಮ ಕೂಡ ಒಂದು ಸಹಜ ಲೈಂಗಿಕತೆಯ ಸಾಮಾನ್ಯ ಕ್ರಿಯೆ.ಲೈಂಗಿಕ ದೃಷ್ಟಿಕೋನವನ್ನು ಚಿಕಿತ್ಸೆಯಿಂದ ಬದಲಾಯಿಸಬಹುದು ಮತ್ತು ಅಂತಹ ಪ್ರಯತ್ನವು ವ್ಯಕ್ತಿಯ ಸ್ವಾಭಿಮಾನ ಮತ್ತು ಕಳಂಕಕ್ಕೆ ಕಾರಣವಾಗಬಹುದು ಎಂಬ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಭಾರತೀಯ ಸೈಕಿಯಾಟ್ರಿಕ್ ಸೊಸೈಟಿ ಹೇಳಿದೆ.

ಐಪಿಎಸ್ ನ ದಕ್ಷಿಣ ವಲಯದ ಸಹಾಯಕ ಕಾರ್ಯದರ್ಶಿ ಡಾ ಮಹೇಶ್ ಗೌಡ, ಕಳೆದ 15 ವರ್ಷಗಳಿಂದ ಮಾನಸಿಕ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದು ಸಲಿಂಗಕಾಮ ಲೈಂಗಿಕತೆ ಸಮಸ್ಯೆಯಿಂದ ಶೇಕಡಾ 10ರಷ್ಟು ಮಂದಿ ನನ್ನ ಬಳಿಗೆ ಬರುತ್ತಾರೆ. ವ್ಯಕ್ತಿಯಲ್ಲಿ ಸಮಸ್ಯೆಯಿಲ್ಲ ಎಂದು ಕಂಡಾಗ ಕುಟುಂಬ ಸದಸ್ಯರನ್ನು ನಾವು ಸಮಾಲೋಚನೆ ಮಾಡುತ್ತೇವೆ. ಸಲಿಂಗಕಾಮ ಸಮಸ್ಯೆಯಿಂದ ಬಳಲುತ್ತ ನನ್ನ ಬಳಿಗೆ ಬರುವ ಜನರಲ್ಲಿ ಅಧಿಕ ಮಂದಿ 16ರಿಂದ 25 ವರ್ಷದೊಳಗಿನವರು. ಜೀವನದ ಆರಂಭದ ಹಂತದಲ್ಲಿ ಕೆಲವು ಸಂಘರ್ಷಗಳಿಂದ ಬಳಲುತ್ತಿದ್ದವರು ಶಾಲೆಯಲ್ಲಿ ಸಮಸ್ಯೆ ಅನುಭವಿಸಿದವರಾಗಿರುತ್ತಾರೆ.ಇಂತವರ ಮನಸ್ಥಿತಿಯನ್ನು ಬದಲಿಸಿ, ಅವರನ್ನು ಮೊದಲಿನಂತವರನ್ನಾಗಿ ಮಾಡಿ ಎಂದು ಕುಟುಂಬ ಸದಸ್ಯರು ಕೇಳಿಕೊಳ್ಳುತ್ತಾರೆ ಎನ್ನುತ್ತಾರೆ.

ಕಳೆದ ವರ್ಷ ಭಾರತೀಯ ಸೈಕಿಯಾಟ್ರಿಕ್ ಸೊಸೈಟಿ ಸಲಿಂಗಕಾಮಿ, ದ್ವಿಲಿಂಗಿ ಇತ್ಯಾದಿಗಳ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯಪಡೆಯನ್ನು ರಚಿಸಿತ್ತು.ಈ ಕಾರ್ಯಪಡೆ ಸಲಿಂಗಕಾಮಿಗಳು ತಮ್ಮ ಸಮಸ್ಯೆಗಳಿಂದ ಹೊರಬರಲು ತರಬೇತಿ ನೀಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com