ಮಕ್ಕಳ ಕಳ್ಳರೆಂದು ಶಂಕಿಸಿ ಹತ್ಯೆ: ಹೈದರಾಬಾದ್ ವ್ಯಕ್ತಿ ಸತ್ತಿದ್ದು ಅಪಘಾತದಿಂದ : ಶಾಸಕ ಪ್ರಭು ಚವಾಣ್

ಹೈದರಾಬಾದ್ ಮೂಲದ ವ್ಯಕ್ತಿ ಮೃತ ಪಟ್ಟಿದ್ದು ಅಪಘಾತದಿಂದ ಎಂದು ಶಾಸಕ ಎಪ್ರಭು ಚವಾಣ್ ಹೇಳಿದ್ದಾರೆ, ಹೈದರಾಬಾದ್ ಮೂಲದ ಮೊಹಮ್ಮದ್ ಅಜಾಮ್ ಎಂಬ ವ್ಯಕ್ತಿಯನ್ನು...
ಶಾಸಕ ಪ್ರಭು ಚವಾಣ್
ಶಾಸಕ ಪ್ರಭು ಚವಾಣ್
ಬೀದರ್/ಬೆಳಗಾವಿ:  ಹೈದರಾಬಾದ್ ಮೂಲದ ವ್ಯಕ್ತಿ ಮೃತ ಪಟ್ಟಿದ್ದು ಅಪಘಾತದಿಂದ ಎಂದು ಶಾಸಕ ಎಪ್ರಭು ಚವಾಣ್ ಹೇಳಿದ್ದಾರೆ, ಹೈದರಾಬಾದ್ ಮೂಲದ ಮೊಹಮ್ಮದ್ ಅಜಾಮ್ ಎಂಬ ವ್ಯಕ್ತಿಯನ್ನು ಮಕ್ಕಳ ಕಳ್ಳೆನೆಂದು ಶಂಕಿಸಿ ಸ್ಥಳೀಯರು ಆತನನ್ನು ಥಳಿಸಿ ಆತನನ್ನು ಕೊಂದಿದ್ದಾರೆ ಎಂಬುದು ಸುಳ್ಳು ಆರೋಪ ಎಂದು ಹೇಳಿದ್ದಾರೆ.
ಔರಾದ್ ನ ಬಿಜೆಪಿ ಶಾಸಕ ಪ್ರಭು ಚವಾಣ್ ಹೈದರಾಬಾದ್ ವ್ಯಕ್ತಿ ಸತ್ತಿದ್ದು ಅಪಘಾತದಲ್ಲಿ ಎಂದು ಹೇಳಿದ್ದಾರೆ.,
ನಿನ್ನೆ ಹಂದಿಕೆರೆ ಗ್ರಾಮಕ್ಕೆ ಭೇಟಿ ನೀಡಿದ್ದ ಪ್ರಭು ಚವಾಣ್ ಸಂತ್ರಸ್ತ ಯುವಕ ಹಂದಿಕೆರೆ ಗ್ರಾಮಕ್ಕೆ ತೆರಳಿ ಅಲ್ಲಿನ ಶಾಲಾ ಮಕ್ಕಳಿಗೆ ಚಾಕಲೇಟ್ ನೀಡುತ್ತಿದ್ದ. ಯುವಕನಿಗೆ ಗ್ರಾಮಸ್ಥರು ಹೊಡೆದಿರಲಿಲ್ಲ, ಕಾರು ಉರುಳಿ ಆತ ಗಾಯಗೊಂಡಿದ್ದ. ಹೈದರಾಬಾದ್ ನಿಂದ ಬಂದಿದ್ದ ಅವರು ನಾಲ್ವರು ಮಕ್ಕಳ ಕಳ್ಳರು ಎಂಬುದರಲ್ಲಿ ಸಂಶಯವೇ ಇರಲಿಲ್ಲ ಎಂದು ಹೇಳಿದ್ದಾರೆ.
ಕಾರನ್ನು ನಿಲ್ಲಿಸಿ ಅವರು ಮಕ್ಕಳಿಗೆ ಏಕೆ ಚಾಕೋಲೇಟ್ ನೀಡಬೇಕಿತ್ತು. ನಾನು ತಾಂಡಾದ ಹಲವು ಜನರೊಂದಿಗೆ ಮಾತನಾಡಿದ್ದೇನೆ. ಕಾರಿನಲ್ಲಿ ಬಂದಿದ್ದ ನಾಲ್ವರು ಚಾಕೋಲೇಟ್ ನೀಡಿ ಮಕ್ಕಳನ್ನು ಕದಿಯಲು ಬಂದಿದ್ದರು. ಈ ಪ್ರಕರಣ ಸಂಬಂಧ ತನಿಖೆ ನಡೆಸಲು ನಾನು ಪೊಲೀಸರಿಗೆ ಸೂಚಿಸಿದೆ. ತನಿಖೆ ನಡೆಸಿ ಅವರು ಮುಗ್ಧರು ಎಂದು ತಿಳಿದರೇ ಕೂಡಲೇ ಬಿಡುಗಡೆ ಮಾಡುವಂತೆ ಸೂಚಿಸಿದ್ದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮುರ್ಕಿ ಗ್ರಾಮದಲ್ಲಿ ಉದ್ವಿಗ್ವ  ಪರಿಸ್ಥಿತಿ ನಿರ್ಮಾಣ ವಾಗಿದೆ, ಈ ಸಂಬಂಧ 34 ಮಂದಿಯನ್ನು ಬಂಧಿಸಲಾಗಿದೆ. ವಾಟ್ಯಾಪ್ ಗ್ರೂಪ್ ಆಡ್ಮಿನ್ ಮನೋಜ್ ಬಿರಾದಾರ್ ಮತ್ತು ಅಮರ್ ಪಾಟೀಲ್ ನನ್ನು ಬಂಧಿಸಲಾಗಿದೆ.  ಇನ್ನು ಹೆದರಿ ಗ್ರಾಮದಿಂದ ಓಡಿಹೋಗಿರುವ ಹಲವು ಯುವಕರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ, ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com