'ನಮ್ಮ ಮಕ್ಕಳನ್ನು ಕಿಡ್ನಾಪ್ ಮಾಡಲು ಅವರು ಇಲ್ಲಿಗೆ ಬಂದಿದ್ದರು'

ಅವರು ಭಯೋತ್ಪಾದಕರು ನಮ್ಮ ಮಕ್ಕಳನ್ನು ಕಿಡ್ನಾಪ್ ಮಾಡಲು ಬಂದಿದ್ದಾರೆ, ಅವರನ್ನು ಹೊಡೆಯಿರಿ ಎಂದು ಜನರ ಗುಂಪು ಕೂಗುತ್ತಿತ್ತು...
ಮೃತ ಮೊಹಮದ್ ತಂದೆ ಮತ್ತು ಆತನ ಪುತ್ರ
ಮೃತ ಮೊಹಮದ್ ತಂದೆ ಮತ್ತು ಆತನ ಪುತ್ರ
ಬೀದರ್:  ಅವರು ಭಯೋತ್ಪಾದಕರು ನಮ್ಮ ಮಕ್ಕಳನ್ನು ಕಿಡ್ನಾಪ್ ಮಾಡಲು ಬಂದಿದ್ದಾರೆ, ಅವರನ್ನು ಹೊಡೆಯಿರಿ ಎಂದು ಜನರ ಗುಂಪು ಕೂಗುತ್ತಿತ್ತು, ಈ ವೇಳೆ ಅಲ್ಲಿ ಸೇರಿದ್ದ ಜನ ಸಮೂಹ ಹಿಂದು ಮುಂದು ನೋಡದೇ ಥಳಿಸಿದ ಪರಿಣಾಮವಾಗಿ  ಹೈದರಾಬಾದ್ ಮೂಲದ ಮೊಹಮದ್ ಅಜಮ್ ಉಮನ್ ಸಾಬ್ ಮೃತ ಪಟ್ಟರು.  
ಮಕ್ಕಳ ಕಳ್ಳರೆಂದು ಶಂಕಿಸಿ ಬೀದರ್ ನ ಕಮಲ ನಗರ ತಾಲೂಕಿನ ಭಟ್ಕೂಲ್ ತಾಂಡಾದಲ್ಲಿ ನಡೆದ ಹೈದರಾಬಾದ್ ಮೂಲದ ವ್ಯಕ್ತಿಯ ಕಥೆಯಾಗಿದೆ, ಮಕ್ಕಳ ಕಳ್ಳರೆಂದು ಶಂಕಿಸಿ ಥಳಿಸಿದ ಪರಿಣಾಮ ಒರ್ವ ಮೃತ ಪಟ್ಟು ಇನ್ನುಳಿದವರು,  ಗಂಭೀರ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೊಹಮ್ಮದ್ ಆಫ್ರೋಜ್, ನೂರ್ ಮೊಹಮ್ಮದ್, ಮೊಹಮ್ಮದ್ ಸಲ್ಮಾನ್, ಸಲಾಮ್ ಈದ್ ಖುರೇಶಿ ಮತ್ತು ಮೊಹಮ್ಮದ್ ಅಜಮ್ ಉಸ್ಮಾನ್ಸಾಬ್ ಅವರು ಚೆಕ್-ಡ್ಯಾಮ್ ಬಳಿ ನಿಂತು ಮಾತನಾಡುತ್ತಿದ್ದರು ಮುರ್ಕಿ ಸರ್ಕಾರಿ ಶಾಲೆಯಿಂದ ಶಾಲೆ ಮುಗಿಸಿ ಮಕ್ಕಳು ಮನೆಗೆ ವಾಪಸ್ ಬರುತ್ತಿದ್ದರು,  ನಾವು ಕೆಲವು ಚಾಕೋಲೇಟ್ ಗಳನ್ನು ಮಕ್ಕಳಿಗೆ ಕ್ಯಾಚ್ ಹಾಕಿದೆವು, ಒಂದು ಮಗು ಕ್ಯಾಚ್ ಹಿಡಿದು ಚಾಕಲೇಟ್ ತಿಂದಿತು, ಅಲ್ಲಿ ಸುಮಾರು 10-15 ಮಕ್ಕಳು ಮತ್ತು ಒಬ್ಬ ಮಹಿಳೆ ಇದ್ದರು. 
ಮಕ್ಕಳು ಚಾಕೋಲೇಟ್ ತೆಗೆದುಕೊಳ್ಳಲು ನಿರಾಕರಿಸಿದ್ದರಿಂದ ಅವರು ರಸ್ತೆಯ ಮೇಲೆಯೆ ಬಿದ್ದವು, ಸುಮಾರು 15 ನಿಮಿಷದ ನಂತರ ದೊಡ್ಡ ಶಬ್ದದೊಂದಿಗೆ ಗುಂಪೊಂದು ನಮ್ಮ ಬಳಿ ಬಂತು ಎಂದು ಅಪ್ರೋಜ್ ತಿಳಿಸಿದ್ದಾರೆ, ಅವರು ನಮ್ಮತ್ತ  ಬರುವ ವೇಳೆಗೆ ಗುಂಪಿನಲ್ಲಿದ್ದ ಒಬ್ಬ, ಅವರು ನಮ್ಮ ಮಕ್ಕಳನ್ನು ಕದಿಯಲು ಬಂದಿದ್ದಾರೆ ಎಂದು ಕೂಗಿಕೊಂಡ, ಬಂದು ಗುಂಪು ಅವರ ಮೇಲೆ ಏಕಾಏಕಿ ಹಲ್ಲೆ ಮಾಡಿದರು.
ಕೂಡಲೇ ಭಟ್ಕೂಲಾ ತಂಡ ವಾಟ್ಸಾಪ್ ನಲ್ಲಿ ಮೆಸೇಜ್  ಹರಿದಾಡಿತ್ತು. 8 ಗ್ರಾಮದ ಸುಮಾರು ನೂರಾರು ಮಂದಿ ನಮ್ಮನ್ನು ಓಡಿಸಿಕೊಂಡು ಬಂದು ರಸ್ತೆ ಅಡ್ಡಗಟ್ಟಿದರು. ಆ ಗಲಭೆಕೋರರು ಕಲ್ಲು ಎಸೆದದ್ದರಿಂದ ಅಜಮ್ ಸಾವಿಗೀಡಾದರು.
ನಂತರ ಪೊಲೀಸರು ಆಗಮಿಸಿ ತನಿಖೆ ನಡೆಸಿದ ನಂತರ ಸತ್ಯದ ಅರವಾಯಿತು, ಅವರೆಲ್ಲೆ ಮುಗ್ದರು ಎಂದು ತಿಳಿಯಿತು ಎಂದು ಭಟ್ಕೂಲ್ ತಾಂಡನಿವಾಸಿ  ಲಕ್ಷ್ಣಣ್ ತಿಳಿಸಿದ್ದಾರೆ.ಗಡ್ಡ ಬಿಟ್ಟುಕೊಂಡು ಬಂದ ವ್ಯಕ್ತಿಗಳು ಮಕ್ಕಳಿಗೆ ಚಾಕಲೇಟ್ ನೀಡುತ್ತಿರುವುದನ್ನು ನೋಡಿ ಅವರು ಮಕ್ಕಳ ಕಳ್ಳರಿರಬೇಕು ಎಂದು ಶಂಕೆ ವ್ಯಕ್ತ ಪಡಿಸಿದರು ಎಂದು ತಿಳಿಸಿದ್ದಾರೆ.
ಭಟ್ಕೂಲ್ ನಲ್ಲಿ ಇವೆರಲ್ಲಾ ಸಾರಾಯಿ ಸೇವಿಸಿ ಮಕ್ಕಳನ್ನು ಕಿಡ್ನಾಪ್ ಮಾಡಲು ಬಂದಿದ್ದರು. ಚಾಕಲೇಟ್ ನೀಡಿ ಮಕ್ಕಳನ್ನು ಬಂಧಿಸಲು ಯತ್ನಿಸಿದ್ದರು ಎಂದು ಶಾಸಕ ಪ್ರಭು ಚವಾಣ್ ಆರೋಪಿಸಿದ್ದಾರೆ. ಆದರೆ ಸ್ಥಳೀಯರೊಬ್ಬರು ಹೇಳಪವ ಪ್ರಕಾರ, ಅವರು ಆಲ್ಕೋಹಾಲ್ ಸೇವಿಸಿರಲಿಲ್ಲ, ಶಾಲೆಯಿಂದ ಬರುವ ಮಕ್ಕಳಿಗೆ ಚಾಕಲೇಟ್ ನೀಡಿದರು ಅಷ್ಟೇ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com