ರೇರಾ ಉಲ್ಲಂಘಿಸಿದ 924 ಕಟ್ಟಡಗಳು ಕಪ್ಪು ಪಟ್ಟಿಗೆ

ರಾಜ್ಯಾದ್ಯಂತ ನಿರ್ಮಾಣ ಹಂತದಲ್ಲಿರುವ ಸುಮಾರು 924 ಕಟ್ಟಡಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯಾದ್ಯಂತ ನಿರ್ಮಾಣ ಹಂತದಲ್ಲಿರುವ ಸುಮಾರು 924 ಕಟ್ಟಡಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.

ರೇರಾ ಕಾಯ್ದೆ(ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಟಿ)ಯಡಿ ಸರ್ಕಾರ ಈ ಕಟ್ಟಡಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವ ಯು ಟಿ ಖಾದರ್ ತಿಳಿಸಿದ್ದಾರೆ. ರೇರಾದಡಿ ದಾಖಲು ಮಾಡಿಕೊಳ್ಳದ ಈ ಕಟ್ಟಡಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದ್ದು ಅವುಗಳಿಗೆ ನೊಟೀಸ್ ನೀಡಲಾಗಿದೆ ಎಂದರು.

ಆರಂಭದಲ್ಲಿ ನೀಡಿದ್ದ ನೊಟೀಸ್ ಗಳಿಗೆ ಪ್ರತಿಕ್ರಿಯೆ ನೀಡದಿದ್ದರಿಂದ ಇವುಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ರೇರಾ ನಿಯಮವನ್ನು ಉಲ್ಲಂಘಿಸಿದ್ದ ಡೆವೆಲಪರ್ ಗಳಿಗೆ 1,626 ನೊಟೀಸ್ ಗಳನ್ನು ನೀಡಲಾಗಿತ್ತು. 604 ಕೇಸುಗಳಲ್ಲಿ ಡೆವೆಲಪರ್ ಗಳು ತೃಪ್ತಿಕರ ಪ್ರತಿಕ್ರಿಯೆಗಳನ್ನು ನೀಡಿದ್ದು ಕೆಲವು ಯೋಜನೆಗಳು ಪೂರ್ಣಗೊಂಡಿವೆ. ರೇರಾ ನಿಯಮವನ್ನು ಪಾಲಿಸದ ಇನ್ನೂ ಹೆಚ್ಚಿನ ಯೋಜನೆಗಳನ್ನು ಗುರುತಿಸಲಾಗುತ್ತಿದ್ದು ಅಧಿಕಾರಿಗಳು ಕೈಪಿಡಿಗಳು ಮತ್ತು ಕಾಗದ ಜಾಹೀರಾತುಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ.

ರೇರಾ ಉಲ್ಲಂಘಿಸಿದ 572 ದೂರುಗಳು ದಾಖಲಾಗಿದ್ದು ಅವುಗಳಲ್ಲಿ 221 ಕೇಸುಗಳ ವಿಲೇವಾರಿಯಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com