ಕೆಆರ್​ಎಸ್, ಕಬಿನಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿಗಳಿಂದ ಬಾಗಿನ

ಉತ್ತಮ ಮಳೆಯಿಂದಾಗಿ ಸಂಪೂರ್ಣ ಭರ್ತಿಯಾದ ಮಂಡ್ಯ ಜಿಲ್ಲೆ ಕೃಷ್ಣ ರಾಜಸಾಗರ ಜಲಾಶಯ, ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿಗಳು ಬಾಗಿನ ಸಮರ್ಪಿಸಿದರು.
ಕೆಆರ್​ಎಸ್, ಕಬಿನಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿಗಳಿಂದ ಬಾಗಿನ
ಕೆಆರ್​ಎಸ್, ಕಬಿನಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿಗಳಿಂದ ಬಾಗಿನ
ಮೈಸೂರು: ಉತ್ತಮ ಮಳೆಯಿಂದಾಗಿ ಸಂಪೂರ್ಣ ಭರ್ತಿಯಾದ ಮಂಡ್ಯ ಜಿಲ್ಲೆ ಕೃಷ್ಣ ರಾಜಸಾಗರ ಜಲಾಶಯ, ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿಗಳು ಬಾಗಿನ ಸಮರ್ಪಿಸಿದರು.
ಶುಕ್ರವಾರ ಸಂಜೆ 4.20ಕ್ಕೆ  ಕೆಆರ್​ಎಸ್ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ ಸಿಎಂ ಕಾನಡಿಗೆಯಲ್ಲಿಯೇ ಸಂಚರಿಸಿ ಡ್ಯಾಂ ವೀಕ್ಷಿಸಿದ್ದಾರೆ. ಬಾಗಿನ ಸಮರ್ಪಣೆ ವೇಳೆ ಪತ್ನಿ ಅನಿತಾ ಕುಮಾರಸ್ವಾಮಿ, ಸಚಿವರಾದ  ಡಿಕೆ ಶಿವಕುಮಾರ್, ಸಿಎನ್ ಪುತ್ಟರಾಜುಜಿ ಟಿ ದೇವೇಗೌಡ, ಸಾ ರಾ ಮಹೇಶ್, ಡಿ ಸಿ ತಮ್ಮಣ್ಣ ಹಾಜರಿದ್ದರು.
ಇದಕ್ಕೂ ಮುನ್ನ ಮೈಸೂರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು  ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆ ಬಳಿಕ ಮಾತನಾಡಿದ ಕುಮಾರಸ್ವಾಮಿ "ನಾಡಿನ ಜಲಾಶಯಗಳು ತುಂಬಿದೆ.ನಾಡು ಸಮೃದ್ದಿಯಾಗಿದೆ. ವಿದ್ಯುತ್, ನೀರಿನ ಸಮಸ್ಯೆ ಇಲ್ಲ. 12 ವರ್ಷಗಳ ನಂತರ ಜಲಾಶಯಕ್ಕೆ ಬಾಗಿನ ಸಮರ್ಪಣೆಯಾಗಿದೆ. ಇದು ತಾಯಿ ಚಾಮುಂಡೇಶ್ವರಿಯ ಆಶೀರ್ವಾದ.
"ನಾಡು ಸುಖ ಸಮೃದ್ದಿಯಾಗಿರುವ ಕಾರಣ ಈ ಬಾರಿ ದಸರಾ ಆಚರಣೆಯನ್ನು ಅದ್ದೂರಿಯಾಗಿ ನಡೆಸಲಿದ್ದೇವೆ. ನಮ್ಮ ಈ ದಸರಾ ಆಚರಣೆ ನಾಡಿಗೆ ಮಾದರಿಯಾಗಲಿದೆ" ಎಂದಿದ್ದಾರೆ.
ಚಾಂಮುಂಡೇಶ್ವರಿಗೆ ಪೂಜೆ ಸಲ್ಲಿಸಿ ನಾಡಿನ ಅಭಿವೃದ್ಧಿಗೆ ಹಾಗೂ ರೈತರ ನೆಮ್ಮದಿಯ ಜೀವನಕ್ಕೆ ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಅವರು ಹೇ:ಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com