ಸಂಗ್ರಹ ಚಿತ್ರ
ರಾಜ್ಯ
ತುಮಕೂರು: ಡಿವೈಡರ್ ಗೆ ಕಾರ್ ಡಿಕ್ಕಿ, ಆರ್‌ಟಿಓ ಅಧಿಕಾರಿ ಸಾವು
ಕಾರ್ ಒಂದು ರಸ್ತೆ ವಿಭಜಕ (ಡಿವೈಡರ್)ಗೆ ಡಿಕ್ಕಿಯಾಗಿ ಆರ್‌ಟಿಓ ಅಧಿಕಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರಿನ ಶಿರಾದಲ್ಲಿ ನಡೆದಿದೆ.
ತುಮಕೂರು: ಕಾರ್ ಒಂದು ರಸ್ತೆ ವಿಭಜಕ (ಡಿವೈಡರ್)ಗೆ ಡಿಕ್ಕಿಯಾಗಿ ಆರ್‌ಟಿಓ ಅಧಿಕಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರಿನ ಶಿರಾದಲ್ಲಿ ನಡೆದಿದೆ.
ಚಿತ್ರದುರ್ಗದ ಆರ್‌ಟಿಓ ಅಧಿಕಾರಿ ದೇವ್‌ರಾಜ್ (50) ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದು ಕಾರಿನ ಚಾಲಕ ಅಶೋಕ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಿಗ್ಗೆ ಈ ಅವಘಡ ಸಂಭವಿಸಿದೆ. ಶಿರಾಗೆ ಆಗಮಿಸಿದ್ದ ಆರ್‌ಟಿಓ ಅಧಿಕಾರಿ ಹಿಂದಿರುಗುವ ಮಾರ್ಗದಲ್ಲಿ ಅಪಘಾತವಾಗಿದೆ. ಗಾಯಾಳು ಚಾಲಕ ಅಶೋಕ ವರನ್ನು ಶಿರಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ