ರೇಷ್ಮೆ ಸಿಟಿ ಕೋಲಾರ ಮತ್ತೊಂದು ಬೆಳ್ಳಂದೂರು ಆಗಲು ಬಿಡುವುದಿಲ್ಲ: ಲಕ್ಷ್ಮಿಸಾಗರ ಗ್ರಾಮಸ್ಥರು

ಮಿಲ್ಕ್ ಅಂಡ್ ಸಿಲ್ಕ್ ಸಿಟಿ ಕೋಲಾರ ಮತ್ತೊಂದು ಬೆಳ್ಳಂದೂರು ಆಗಲು ಬಿಡುವುದಿಲ್ಲ ಎಂದು ಲಕ್ಷ್ಮಿ ಸಾಗರ ಮತ್ತು ನರಸಾಪುರ ಗ್ರಾಮಸ್ಥರು ಹೇಳಿದ್ದಾರೆ. ...
ಲಕ್ಷ್ಮಿ ಸಾಗರ ಕೆರೆ ಪಕ್ಕವಿರುವ ಪೂರೈಕೆ
ಲಕ್ಷ್ಮಿ ಸಾಗರ ಕೆರೆ ಪಕ್ಕವಿರುವ ಪೂರೈಕೆ
ಕೋಲಾರ: ಮಿಲ್ಕ್ ಅಂಡ್ ಸಿಲ್ಕ್ ಸಿಟಿ ಕೋಲಾರ ಮತ್ತೊಂದು ಬೆಳ್ಳಂದೂರು ಆಗಲು ಬಿಡುವುದಿಲ್ಲ ಎಂದು ಲಕ್ಷ್ಮಿ ಸಾಗರ ಮತ್ತು ನರಸಾಪುರ ಗ್ರಾಮಸ್ಥರು ಹೇಳಿದ್ದಾರೆ.  ಕೆ.ಸಿ.ವ್ಯಾಲಿ ಯೋಜನೆಯಡಿ ಸಂಸ್ಕರಿಸಿ ಕೋಲಾರದತ್ತ ಹರಿಸಿದ ನೀರಿನಲ್ಲಿ ವಿಷಕಾರಿ ನೊರೆಯುಕ್ಕಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಮಳೆ ನೀರಿನಲ್ಲಿ ತಾವು ಕೃಷಿ ಮಾಡಲು ಸಮರ್ಥವಾಗಿದ್ದು, ಒಂದು ವೇಳೆ ಸರ್ಕಾರ ನೀರು ಹರಿಸಲು ನಿರ್ಧರಿಸಿದರೇ ವೈಜ್ಞಾನಿಕವಾಗಿ ಕೆರೆ ಮತ್ತು ಸರೋವರಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿದ್ದಾರೆ. ಆಗಷ್ಟೇ ಖಾಲಿಯಾಗಿರುವ ಕೆರೆಗಳಿಗೆ  ನೀರು ಹರಿಸಿ ಮಾದರಿಯಾಗಬಹುದು,.
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಜಿ,ಪರಮೇಶ್ವರ್ ಗುರುವಾರ ವಿಧಾನ ಸೌಧದಲ್ಲಿ ಮಾತನಾಡುವಾಗ, ಬೆಂಗಳೂರು ಜಲ ಮಂಡಳಿಯು,  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳ ಆಧಾರದ ಮೇಲೆ, ಸಂಸ್ಕರಿಸಿದ ನೀರನ್ನು ಬಿಡುತ್ತಿದೆ , ಮೊದಲು ಜೂನ್ 2ರಂದು ಕೋಲಾರದ ಲಕ್ಷ್ಮಿ ಸಾಗರದ ಕೆರೆಗೆ ನೀರು ಬಿಡಲಾಗಿತ್ತು, ಜಿಲ್ಲೆಯ ಜನರಿಗೆ ಅಂದು ಯಾವ ಭಯವೂ ಇರಲಿಲ್ಲ,  ಆದರೆ ಬುಧವಾರ ಲಕ್ಷ್ಮಿ ಸಾಗರ ಕೆರೆಯನ್ನು ಜನರು ಆತಂಕದಿಂದ ನೋಡುವಂತಾಗಿದೆ.
ಕೂಡಲೇ ಕೋಲಾರ ಜಿಲ್ಲಾಧಿಕಾರಿ  ಶುಭಾ ಕಲ್ಯಾಣ್  ಬೆಂಗಳೂರು ಜಲ ಮಂಡಳಿಗೆ ವಿಷಯ ತಿಳಿಸಿ ನೀರು ಪಂಪ್ ಮಾಡುವುದನ್ನು ನಿಲ್ಲಿಸುವಂತೆ ಹೇಳಿದ್ದಾರೆ, 
ಕೆ.ಸಿ ವ್ಯಾಲಿ ಯೋಜನೆ ರೈತರ ಜೀವನ ಹಸನುಗೊಳಿಸುತ್ತದೆ ಎಂದು ಸರ್ಕಾರ ಭರವಸೆ ನೀಡಿತ್ತು, ಆರಂಭದಲ್ಲಿ ರೈತರು ಖುಷಿಯಾಗಿದ್ದರು, ಕಲುಷಿತ ನೀರು ಬಿಡುಗಡೆಗೊಂಡ ನಂತರ ಜನರಲ್ಲಿ ಆತಂಕ ಮೂಡಿದೆ ಎಂದು ಶಂಕರಪ್ಪ ಎಂಬ ರೈತ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಜಲ ಮಂಡಳಿ   ಸಣ್ಣ ನೀರಾವರಿ ಇಲಾಖೆಯಾ ಕಾರ್ಯಕಾರಿ ಎಂಜಿನೀಯರ್ ಗಳ ಜೊತೆ ಸಭೆ ನಡೆಸಲಿದ್ದಾರೆ. ಕೆಸಿ ವ್ಯಾಲಿ ಗುತ್ತಿಗೆದಾರರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ,
ಮೊದಲನೆಯದಾಗಿ ನೀರು ಪೂರೈಕೆಯಲ್ಲಿ ಯಾವುದೇ ಬದಲಾವಣೆಯಿಲ್ಲ, ಪೂರೈಕೆ ಸ್ಥಳದಿಂದ ನಿಗಧಿತ ಪ್ರಮಾಣದಲ್ಲಿ ನೀರು ಹರಿಸಬೇಕು, ನೀರು ಹರಿಸುವಾಗ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು, ಪ್ರತಿದಿನ ಸಣ್ಣ ನೀರಾವರಿ ಇಲಾಖೆ ಎಂಜಿನೀಯರ್ ಗಳು ಮತ್ತು ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಢಳಿ ಅಧಿಕಾರಿಗಳು ಲಕ್ಷ್ಮಿ ಸಾಗರ ಕೆರೆಗೆ ಭೇಟಿ ನೀಡಬೇಕು , ಹಾಗೂ ಕೆರೆಗೆ ಯಾವುದಾದರೂ ಮಲಿನಕಾರಿ ಅಂಶ ಸೇರುತ್ತಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸಭೆಯಲ್ಲಿ ತಿಳಿಸಲಾಗುವುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com