ಒಸಾಮಾನನ್ನು ಪತ್ತೆ ಹಚ್ಚಿದ ನಾಯಿ ತಳಿ ರಾಜ್ಯ ಪೋಲೀಸ್ ಇಲಾಖೆಗೆ ಸೇರ್ಪಡೆ

ತಮ್ಮ ತನಿಖಾ ಕರ್ತವ್ಯದಲ್ಲಿ ವಿಶ್ವದಲ್ಲೇ ಅತ್ಯುತ್ತಮವೆಂದು ಸಾಬೀತಾದ ಇಬ್ಬರು ಅಧಿಕಾರಿಗಳು ಈ ವಾರ ಕರ್ನಾಟಕ ಪೊಲೀಸ್ ಸೇವೆಗೆ ಸೇರ್ಪಡೆಯಾಗಲಿದ್ದಾರೆ. ಅದುವೆ ಬೆಲ್ಜಿಯಂ ಮಾಲಿನೋಸ್ ನಾಯಿಮರಿಗಳು!
ಒಸಾಮಾನನ್ನು ಪತ್ತೆ ಹಚ್ಚಿದ ನಾಯಿ ತಳಿ ರಾಜ್ಯ ಪೋಲೀಸ್ ಇಲಾಖೆಗೆ ಸೇರ್ಪಡೆ
ಒಸಾಮಾನನ್ನು ಪತ್ತೆ ಹಚ್ಚಿದ ನಾಯಿ ತಳಿ ರಾಜ್ಯ ಪೋಲೀಸ್ ಇಲಾಖೆಗೆ ಸೇರ್ಪಡೆ
ಬೆಂಗಳೂರು: ತಮ್ಮ ತನಿಖಾ ಕರ್ತವ್ಯದಲ್ಲಿ ವಿಶ್ವದಲ್ಲೇ ಅತ್ಯುತ್ತಮವೆಂದು ಸಾಬೀತಾದ ಇಬ್ಬರು ಅಧಿಕಾರಿಗಳು ಈ ವಾರ ಕರ್ನಾಟಕ ಪೊಲೀಸ್ ಸೇವೆಗೆ ಸೇರ್ಪಡೆಯಾಗಲಿದ್ದಾರೆ. ಅದುವೆ  ಬೆಲ್ಜಿಯಂ ಮಾಲಿನೋಸ್ ನಾಯಿಮರಿಗಳು!
ಪಾಕಿಸ್ತಾನದಲ್ಲಿ ಅಡಗಿದ್ದ ಒಸಾಮಾ ಬಿನ್ ಲಾಡೆನ್ ನನ್ನು ಹುಡುಕಿಕೊಟ್ಟ ಅದೇ ತಳಿಯ ನಾಯಿಗಳು ಇದಾಗಿದ್ದು ಎಸ್. ಸಿದ್ದರಾಜು, ಡಿಸಿಪಿ ಸಿಎಆರ್ (ದಕ್ಷಿಣ),ಹೇಳಿದಂತೆ ಸರ್ಕಾರವು ಜುಲೈ 18 ರಂದು ಈ ಯೋಜನೆಗೆ ಚಾಲನೆ ನಿಡಲಿದೆ.ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾದ ತಳಿಯಾಗಿದ್ದು, ಇಸ್ರೇಲ್ ನಲ್ಲಿ ಭದ್ರತಾ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿವೆ.ಎಚ್ಚರ ಹಾಗೂ ವೇಗದಲ್ಲಿ ಅವು ಉತ್ತಮವಾಗಿದ್ದು ನಾವು ಅವುಗಳನ್ನು ನಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ತರಬೇತಿ ಕಾರ್ಯಕ್ರಮವನ್ನು ಉನ್ನತೀಕರಣಗೊಳಿಸಿಕೊಳ್ಳಬಹುದು.
ಪೋಲೀಸ್ ಇಲಾಖೆಯಲ್ಲಿ ಡಾಗ್ ಸ್ಕ್ವ್ಯಾಡ್ ಒಂದು ಪ್ರಮುಖ ಅಂಶವಾಗಿದೆ."ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ನಾವು ನಮ್ಮ ಭದ್ರತಾ ಸೇವೆಗಳನ್ನು ಸುಧಾರಿಸಬೇಕಾಗಿದೆ ಆದ್ದರಿಂದ, ಶ್ವಾನ ಪಡ ಸಹ  ತನಿಖೆಗಳಲ್ಲಿ ನಮಗೆ ಸಹಾಯ ಮಾಡುತ್ತವೆ, ಬೆಲ್ಜಿಯನ್ ಮಾಲಿನೋಸ್ ಗಳು  ಲ್ಯಾಬ್ರಡಾರ್ಸ್, ಜರ್ಮನ್ ಶೆಪರ್ಡ್ ಗಳಿಗೆ ಹೊಲಿಸಿದರೆ ಉತ್ತಮ ತಳಿಯಾಗಿದೆ. ಈ ತಳಿಯ ನಾಯಿಗಳನ್ನು ಅಮೆರಿಕಾದಲ್ಲಿ ಸಹ ಬಳಸಿದ್ದು ಹೆಚ್ಚು ಸಕ್ರಿಯ ಮತ್ತು ಎಚ್ಚರಿಕೆಯನ್ನು ಹೊಂದಿದ ತಳಿ ಇದಾಗಿದೆ. ನೂತನ ನಾಯಿಗಳಿಗೆ ಆರರಿಂದ  ಒಂಬತ್ತು ತಿಂಗಳುಗಳ ತರಬೇತಿ ನಿಡಲಾಗುತ್ತದೆ.ಬಳಿಕ ಅವುಗಳನ್ನು ಅಪರಾಧ ಪತ್ತೆ ಕಾರ್ಯ, ಬಾಂಬ್ ಪತ್ತೆ ತಂಡಗಳಲ್ಲಿ ಬಳಸಿಕೊಳ್ಳುತ್ತೇವೆ" ಸಿದ್ದರಾಜು ಹೇಳಿದರು.
ಬೆಲ್ಜಿಯನ್ ಮಾಲಿನೋಯ್ಸ್ ಒಂದು ಸೊಗಸಾದ ಪೋಲಿಸ್ ನಾಯಿ ಏಕೆಂದರೆ ಇದು ವಾಸನೆ ಗ್ರಹಿಕೆಯಲಿ ಎತ್ತಿದ ಕೈ.  ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ, ಅವುಗಳನ್ನು ವಿಮಾನ ನಿಲ್ದಾಣಗಳು, ರೈಲ್ವೆ ಮತ್ತು ಸುರಂಗಮಾರ್ಗ ಭದ್ರತಾ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಚೆನ್ನಾಗಿ ತರಬೇತಿ ಪಡೆದಿದ್ದರೆ,ಈ ನಾಯಿಗಳು ಕಷ್ಟಪಟ್ಟು ಕೆಲಸ ನಿರ್ವಹಿಸುತ್ತವೆ. ಅಮೃತ್ ಡಾಗ್ ಗುರು ಸೇವಾ ಸಂಸ್ಥೆ ಒಂದೂವರೆ ತಿಂಗಳ ವಯಸ್ಸಿನ ನಾಯಿಮರಿಗಳನ್ನು ಪೂರೈಸುತ್ತದೆ.  ಇವುಗಳನ್ನು ಪೋರು ಹಾಗೂ ಗೌತಮ್ ಎಂದು ಕರೆಯಲಾಗುತ್ತದೆ.
"ನಾವು ಈ ತಳಿಯ ನಾಯಿಗಳನ್ನು ಸೇವೆಗೆ ಸೇರಿಸಿಕೊಳ್ಳಲಿದ್ದು ಇವುಗಳಿಗೆ ಸರಿಯಾದ ನಿಯಂತ್ರಕರ ಆಯ್ಕೆಯಲ್ಲಿ ತೊಡಗಿದ್ದೇವೆ. ನಾಯಿಗಳ ನಡವಳಿಕೆ ಹಾಗೂ ಅವುಗಳ ಮನೋ ವಿಜ್ಞಾನವನ್ನು ಅಭ್ಯಸಿಸಿ ಅವುಗಳಿಗೆ ಪರಿಣಾಮಕಾರಿ ತರಬೇತಿ ನೀಡಬೇಕಿದೆ" ಇನ್ಸ್ ಪೆಕ್ಟರ್ ನಿಂಗಾರೆಡ್ಡಿ ಪಾಟೀಲ್ ಹೇಳಿದ್ದಾರೆ.
ಯಾವುದೇ ಹವಾಮಾನದ ಪರಿಸ್ಥಿತಿಯಲ್ಲಿ ಈ ನಾಯಿ ಬೆಳೆಯುತ್ತದೆ. "ಭಾರತದಲ್ಲಿ ಇದಾಗಲೇ ಐಟಿಬಿಪಿಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್), ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ ಗಳಲ್ಲಿ ಈ ತಳಿಯ ನಾಯಿಗಳು ಸೇವೆ ಸಲ್ಲಿಸುತ್ತಿದೆ.ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ  ಸಹ ಇವುಗಳು ಕಾರ್ಯನಿರ್ವಹಿಸುತ್ತಿದ್ದು .ಇವುಗಳು ಆರೋಗ್ಯಕರವಾಗಿರುತ್ತವೆ ಮತ್ತು ಉತ್ತಮ ರೋಗನಿರೋಧಕ  ಶಕ್ತಿಯನ್ನು ಹೊಂದಿದೆ
 ಇತ್ತೀಚೆಗೆ ಪೋಲಿಸ್ ಡಾಗ್ ಸ್ಕ್ವಾಡ್ ಗೆ ಕಾರರಾಗಿ ನೇಮಕಗೊಂಡ ಪ್ರಮಾಣೀಕೃತಮನಶ್ಶಾಸ್ತ್ರಜ್ಞ ಅಮೃತ ಎಸ್. ಹಿರಣ್ಯಈ ನಾಯಿಮರಿಗಳಿಗೆ ಸ್ಪೂರ್ತಿ, ಪ್ರೇರಣೆಯ ಮೂಲಕ ತರಬೇತಿ ನೀಡಬೇಕೆಂದು ಶಿಫಾರಸು ಮಾಡುತ್ತಾರೆ.
ಮಾಲಿನೋಯಿಸ್ ಸಾಮಾನ್ಯವಾಗಿ ಆರೋಗ್ಯಕರ ತಳಿಯಾಗಿದೆ, ಆದರೆ ನಿಯತವಾಗಿ ಪರೀಕ್ಷಿಸುವುದು ಉತ್ತಮ. 
ಬೆಲ್ಜಿಯಂ ಮಾಲಿನೋಸ್ ಜತೆಗೆ  80-ಸದಸ್ಯ ಅಮೆರಿಕನ್ ಕಮಾಂಡೋ ತಂಡಪಾಕಿಸ್ತಾನದಲ್ಲಿ ಒಸಾಮಾ ಬಿನ್ ಲಾಡೆನ್ ಅಡಗುತಾಣವನ್ನು ಪತ್ತೆಹಚ್ಚಿದ ಮೊದಲ ತಂಡವಾಗಿತ್ತು.ಯುಎಸ್ ನೌಕಾಪಡೆಸಹ ಬೆಲ್ಜಿಯನ್ ಮಾಲಿನೋಸ್ ಅಥವಾ ಜರ್ಮನ್ ಶೆಪರ್ಡ್ಸ್ಅನ್ನು ಬಳಸುತ್ತಿದೆ.ಜರ್ಮನ್ ಶೆಪರ್ಡ್ ನಂತೆಯೇ , ಈ ತಳಿಯ ನಾಯಿಗಳು ಚಿಕ್ಕದಾಗಿದ್ದು ಹಗುರವಾಗಿದೆ.ಅವುಗಳು ಪ್ಯಾರಾಚೂಟ್ ಜಂಪಿಂಗ್ ಮತ್ತು ರಾಪೆಲ್ಲಿಂಗ್ ಕಾರ್ಯಾಚರಣೆಗಳಿಗೆ ಉತ್ತಮವಾಗಿದೆ, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com