ಕುಮಾರಸ್ವಾಮಿ ಬಜೆಟ್ ನಂತರ ಹೈದರಾಬಾದ್-ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಹೆಚ್ಚಿದ ಒತ್ತಾಯ!

ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳನ್ನು ಬಜೆಟ್ ನಲ್ಲಿ ನಿರ್ಲಕ್ಷ್ಯಿಸಿರುವ ಹಿನ್ನೆಲೆಯಲ್ಲಿ ಈ ಭಾಗದ ಕಾರ್ಯಕರ್ತರು ಆಕ್ರೋಶಗೊಂಡಿದ್ದು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ..
ಕುಮಾರಸ್ವಾಮಿ
ಕುಮಾರಸ್ವಾಮಿ

ರಾಯಚೂರು: ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳನ್ನು ಬಜೆಟ್ ನಲ್ಲಿ ನಿರ್ಲಕ್ಷ್ಯಿಸಿರುವ ಹಿನ್ನೆಲೆಯಲ್ಲಿ  ಈ ಭಾಗದ ಕಾರ್ಯಕರ್ತರು ಆಕ್ರೋಶಗೊಂಡಿದ್ದು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡಿಸಿರುವ ಸಿಎಂ  ಕುಮಾರ ಸ್ವಾಮಿ ನಿಜಾಮರು ಆಳಿದ ಹೈದಾರಾಬಾದ್ ಕರ್ನಾಟಕದ ಆರು ಜಿಲ್ಲೆಗಳನ್ನು ನಿರ್ಲಕ್ಷ್ಯಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಸಂವಿಧಾನದ 371(ಜೆ) ನೇ ನಿಯಮದಂತೆ  ಹೈದಾರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನಕ್ಕಾಗಿ ಹೋರಾಡಿದ್ದ ಕಾರ್ಯಕರ್ತ ರಜಾಕ್ ಉಸ್ತಾದ್ ಬರೆದ ಲೇಖನ ಪ್ರತ್ಯೇಕ ರಾಜ್ಯದ ಚರ್ಚೆಗೆ ಕಾರಣವಾಗಿದೆ,
ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ 40 ವಿಧಾನ ಸಬೆ ಕ್ಷೇತ್ರಗಳಿಗಳಿವೆ, ಕಾಂಗ್ರೆಸ್ 21 ರಲ್ಲಿ ಬಿಜೆಪಿ 15 ಮತ್ತು ಜೆಡಿಎಸ್ 4 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ, ದಕ್ಷಿಣ ಕರ್ನಾಟಕದಿಂದ 16 ಸಚಿವರಾಗಿದ್ದಾರೆ, ಆದರೆ ಹೈದರಾಬಾದ್ ಕರ್ನಾಟಕದಿಂದ  ಕೇವಲ ಇಬ್ಬರು ಮಾತ್ರ ಸಚಿವರಾಗಿದ್ದಾರೆ ಎಂದು ರಜಾಕ್ ಹೇಳಿದ್ದಾರೆ.
ಹಾಗೆಯೇ ಮುಂಬಯಿ ಕರ್ನಾಟಕದಿಂದ ಕೂಡ ಇಬ್ಬರೇ ಇಬ್ಬರು ಪ್ರತಿನಿಧಿಸಿದ್ದಾರೆ, ರಾಜ್ಯ ಸರ್ಕಾರದ ಈ ಸಣ್ಣ ಮಟ್ಟದ ನಿರ್ಲಕ್ಷ್ಯತನದಿಂದಾಗಿ ಭೌಗೋಳಿಕವಾಗಿಯೂ ಈ ಭಾಗದ ಅವಸ್ಥೆ ಹಾಗೆಯೇ ಇದೆ. ಜೊತೆದೆ ದಕ್ಷಿಣ ಕರ್ನಾಟಕ ಯಾವಾಗಲೂ ಒಂದು ಕೈ ಮೇಲೇ ಇರುತ್ತದೆ. ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬೀದರ್ ಮತ್ತು ಬಳ್ಳಾರಿ ಜಿಲ್ಲೆಗಳು  ಹಲವು ಕ್ಷೇತ್ರಗಳಲ್ಲಿ ಮುಂದಿವೆ, ಆರೋಗ್ಯ, ಶಿಕ್ಷಣ,  ಕೃಷಿ ಮತ್ತು ಕೈಗಾರಿಕೆ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಮುಂದಿವೆ.
ಹೈದರಾಬಾದ್ ಕರ್ನಾಟಕ ಭಾಗದಿಂದ ಉದ್ಯೋವಕಾಗಶಗಳಿಗಾಗಿ ಮೆಟ್ರೋ ಸಿಟಿಗಳಿಗೆ ತೆರಳುವವರ ಸಂಖ್ಯೆ ಕಡಿಮೆಯಾಗಿದೆ, ಕೇವಲ ಶೇ. ರಷ್ಟ ಅಧಿಕಾರಿಗಳು ಮಾತ್ರ ಈ ಆರು ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಹಾಗೇಯೆ ಹೈದರಾಬಾದ್ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತಿತತರ ಕಾರ್ಯಕ್ರಮಗಳಡಿ ಈ ಆರು ಜಿಲ್ಲೆಗಳಿಗೆ ಅನುದಾನ ನೀಡುವಲ್ಲಿಯೂ ಕಡಿಮೆಯಿದೆ. ಹಾಗೂ ಸಮಾಜ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ಸಿಬ್ಬಂದಿಗಳಿಲ್ಲ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ  ಅನಿಲ್ ಕುಮಾರ್ ತಿಳಿಸಿದ್ದಾರೆ. 
ವಿವಿಧ ಚಟುವಟಿಕೆಗಳಿಗಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ, ಆದರೆ ಈ ಹಣವನ್ನು ಸರಿಯಾದ ರೀತಿಯಲ್ಲಿ ವೆಚ್ಚ ಮಾಡುತ್ತಿಲ್ಲ, ಪ್ರತ್ಯೇಕ ರಾಜ್ಯದ ಬೇಡಿಕೆ  1ಗಂಟೆಯದ್ದು ಮಾತ್ರ, ಆದರೆ ಈ ಕಲ್ಪನೆ ಅಷ್ಟು ಸುಲಭವಾಗಿಲ್ಲ, 2012ರ ನವೆಂಬರ್ 1 ರವರೆಗೂ ಈ ಆರು ಜಿಲ್ಲೆಗಳು ಪ್ರತ್ಯೇಕ ಹೈದರಾಬಾದ್ ಕರ್ವನಾಟಕ ಧ್ಲಜ ಹಾರಿಸುತ್ತಿದ್ದವು.. ಆದರೆ ಈ ಭಾಗದ ಅಭಿವೃದ್ಧಿಗಾಗಿ ಹೆಚ್ಚಿನ ಗಮನ ಹರಿಸುವುದಾಗಿ ಸರ್ಕಾರ ಭರವಸೆ ನೀಡಿ ಕನ್ನಡ ರಾಜ್ಯೋತ್ಸವ ಬಾವುಟ ಹಾರಿಸುವಂತೆ ಮನವೊಲಿಸಿತು. ಎಚ್,ಕೆ ಪಾಟೀಲ್ ಹೈ-ಕ ದವರಲ್ಲ, ಹೀಗಾಗಿ ಸಮ್ಮಿಶ್ರ ಸರ್ಕಾರ  ಹೊಸ ವ್ಯಕ್ತಿಯನ್ನು ಹೈ-ಕ ಭಾಗಕ್ಕೆ ನೇಮಕ ಮಾಡಬೇಕು. ಈ ಭಾಗದ ವಿವಿಧ ಸರ್ಕಾರಿ ಇಲಾಖೆಗಳಿಗೆ ಸಿಬ್ಬಂದಿಯನ್ನು ಸರ್ಕಾರ ನೇಮಿಸಿಲ್ಲ, ಅಧಿಕಾರಿಗೆ ಬಡ್ತಿ ನೀಡುತ್ತಿಲ್ಲ, ತಮಗಾಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ರಾಜ್ಯಪಾಲರಿಗೆ ದೂರು ನೀಡಲು ಹೋದಾಗ ನಮ್ಮನ್ನು ಬಂಧಿಸಲಾಯಿತು ಎಂದು ದೂರಿದ್ದಾರೆ.
1953 ರಲ್ಲಿ ಅಂದಿನ ಪ್ರಧಾನಿ ಜವಹರ್ ಲಾಲ್ ನೆಹರು  ಫಜಲಿ ಅಲಿ ಆಯೋಗ ನೇಮಸಿತು, ಈ ಆಯೋಗ ಹೈ-ಕ ಭಾಗಕ್ಕೆ ಭೇಟಿ ನೀಡಿತ್ತು.  ನೀವು ಏಕೆ ಮೈಸೂರು ಭಾಗಕ್ಕೆ ಸೇರಿಕೊಳ್ಳಬೇಕು,  ಯಾಕೆ ನೀವು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಡಬಾರದು ಎಂದು ಆಯೋಗ ಪ್ರಶ್ನಿಸಿತ್ತು. ಮೈಸೂರು ಭಾಗದಲ್ಲಿ ಜನ ಕನ್ನಡ ಮಾತನಾಡುತ್ತಾರೆ. ಹಾಗಾಗಿ ಅಲ್ಲಿನ ಜನರಿಗೆ ನಮ್ಮ ನೋವು ಅರ್ಥವಾಗುತ್ತದೆ ಎಂದು ನಾವು ಹೇಳಿದ್ದೆವು, ಆದರೆ ಈಗ ಆ ಕಲ್ಪನೆ ತಪ್ಪು ಎನಿಸುತ್ತಿದೆ, ಮೈಸೂರು ಭಾಗ ಅಭಿವೃದ್ದಿ ಮತ್ತು ರಾಜಕೀಯವಾಗಿ ಪ್ರಾಬಲ್ಯ ಬೀರುತ್ತಾ ಬಂದಿದೆ, ನಂಜುಂಡಪ್ಪ ವರದಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಫವಲವಾಗಿದೆ ಎಂದು ಕಲಬುರಗಿಯ ಲಕ್ಷ್ಮಣ್ ದಸ್ತಿ ಹೇಳಿದ್ದಾರೆ.
ಹೈ-ಕ ಭಾಗದ ದಶಕಗಳ ಬೇಡಿಕೆಯಾದ ಪ್ರತ್ಯೇಕ ರೇಲ್ವೈ ವಿಭಾಗ ಹಾಗೂ ನೀರಾವರಿ ಯೋಜನೆಗಳು ಇನ್ನೂ ಅನಿಸ್ಚಿತವಾಗಿಯೇ ಉಳಿದಿವೆ. ಹೀಗಾಗಿ ಕಾರ್ಯಕರ್ತರು ಮತ್ತು ಸಾರ್ವಜನಿಕರ ಮನಸಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮೊಳಕೆಯೊಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com