ಬೆಂಗಳೂರು: ವಿಮಾನ ನಿಲ್ದಾಣಕ್ಕೆ ವಾಯುವಜ್ರದಲ್ಲಿ ಹೋಗಲು ಟಿಕೆಟ್ ಕಾಯ್ದಿರಿಸುವ ಆಪ್ ಸೌಲಭ್ಯ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಇರುವ ವಾಯುವಜ್ರ ಸೇವೆ...
ವಾಯುವಜ್ರ ಬಸ್
ವಾಯುವಜ್ರ ಬಸ್

ಬೆಂಗಳೂರು:  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಇರುವ ವಾಯುವಜ್ರ ಸೇವೆಯಲ್ಲಿ ಟಿಕೆಟ್ ಕಾಯ್ದಿರಿಸಲು ಬೆಂಗಳೂರು ಮೆಟ್ರೊಪಾಲಿಟನ್ ಸಂಚಾರ ನಿಗಮ ಹೊಸ ಆಪ್ ನ್ನು ಅಭಿವೃದ್ಧಿಪಡಿಸಿದೆ.

ಪ್ರಸ್ತುತ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ 88 ಹವಾನಿಯಂತ್ರಿತ ಬಸ್ಸುಗಳು 304 ಟ್ರಿಪ್ ಗಳನ್ನು ಮತ್ತು ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ 308 ಟ್ರಿಪ್ ಗಳನ್ನು ನಡೆಸುತ್ತವೆ.

ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಬಿಎಂಟಿಸಿ ಅಧಿಕಾರಿಯೊಬ್ಬರು, ಸೀಟು ಕಾಯ್ದಿರಿಸುವಿಕೆ ವ್ಯವಸ್ಥೆಯನ್ನು ಎಲ್ಲಾ ಐಟಿ ಪಾರ್ಕ್ ಗಳ ಮತ್ತು ಎಲ್ಲಾ ವಿಮಾನ ನಿಲ್ದಾಣದ ಮಾರ್ಗದಲ್ಲಿರುವ ಕಂಪೆನಿಯ ಉದ್ಯೋಗಿಗಳಿಗೆ ನೀಡಲಾಗುವುದು. ಒಂದರಿಂದ ಒಂದೂವರೆ ಗಂಟೆ ಕಾಲ ಪ್ರಯಾಣ ಮಾಡುವ ಉದ್ಯೋಗಿಗಳು ಆರಾಮದಾಯಕವಾಗಿ ಪ್ರಯಾಣಿಸುವ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಈಗಿರುವ ಆಪ್ ನ್ನು ಪರಿಷ್ಕರಿಸಿ ಹೊಸ ಆಪ್ ನ್ನು ತರಲಾಗುತ್ತಿದ್ದು ಅದರಲ್ಲಿ ಅನೇಕ ಪ್ರಯಾಣಿಕ ಸ್ನೇಹಿ ಲಕ್ಷಣಗಳಿರುತ್ತವೆ. ಮಾನ್ಯತಾ ಟೆಕ್ ಪಾರ್ಕ್ ಉದ್ಯೋಗಿಗಳಿಗೆ ಮೊದಲು ಈ ಆಪ್ ಸೌಲಭ್ಯ ನೀಡಲಾಗುವುದು. ಇಲ್ಲಿ ಕೆಲಸ ಮಾಡುವವರಲ್ಲಿ ಅನೇಕರಲ್ಲಿ ತಿಂಗಳ ಪಾಸ್ ಇರುತ್ತದೆ. ಪಾಸ್ ವಿವರಗಳನ್ನು ಈ ಆಪ್ ನಲ್ಲಿ ಅಪ್ ಲೋಡ್ ಮಾಡಿ ಸೀಟು ಕಾಯ್ದಿರಿಸಬಹುದು. ಬಿಎಂಟಿಸಿ, ಬೇರೆ ಐಟಿ ಪಾರ್ಕ್ ಗಳಿಗೆ ಇದನ್ನು ವಿಸ್ತರಿಸುವ ಯೋಜನೆ ಹೊಂದಿದೆ ಎಂದು ಅಧಿಕಾರಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com