ವೈದ್ಯಕೀಯ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೊದಲ ಆಯ್ಕೆಯೇ ಅಂತಿಮ: ಕೆಇಎ

ವೃತ್ತಿಪರ ಪದವಿ ಶಿಕ್ಷಣ ಬಯಸುವ ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಆಯ್ಕೆಗಳನ್ನು ನೀಡುವಾಗ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವೃತ್ತಿಪರ ಪದವಿ ಶಿಕ್ಷಣ ಬಯಸುವ ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ  ಸೀಟುಗಳ ಆಯ್ಕೆ ಮಾಡುವಾಗ ಎಚ್ಚರವಾಗಿರಬೇಕು. ಅಭ್ಯರ್ಥಿ ಎಂಜಿನಿಯರಿಂಗ್ ಸೀಟು ಬಯಸಿ ಆಯ್ಕೆ ಎರಡನ್ನು ಮತ್ತು ವೈದ್ಯಕೀಯ ಸೀಟು ಆಗಿ ಆಯ್ಕೆ ಒಂದನ್ನು ಒತ್ತಿದರೆ ಅಭ್ಯರ್ಥಿಗೆ ವೈದ್ಯಕೀಯ ಸೀಟು ಸಿಗುತ್ತದೆ. ಅಭ್ಯರ್ಥಿಗಳ ಆಯ್ಕೆ 1ನ್ನು ಮೊದಲ ಆಯ್ಕೆ ಎಂದು ಪರಿಗಣಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಹೀಗಾಗಿ ಅಭ್ಯರ್ಥಿ ಸೀಟನ್ನು ಕಾಯ್ದಿರಿಸಿಕೊಂಡು ಎರಡನೇ ಸುತ್ತಿನ ಕೌನ್ಸೆಲಿಂಗ್ ಗೆ ಇನ್ನು ಮುಂದೆ ಕಾಯಲು ಸಾಧ್ಯವಿಲ್ಲ.

ಒಬ್ಬ ವಿದ್ಯಾರ್ಥಿ ಮೊದಲನೇ ಸುತ್ತಿನ ಆಯ್ಕೆಯಲ್ಲಿ ಆಯ್ಕೆ ಒಂದರಲ್ಲಿ ಪಡೆದ ಸೀಟು ಮತ್ತು ಕಾಲೇಜುಗಳಲ್ಲಿಯೇ ಪ್ರವೇಶ ಪಡೆಯಬೇಕಾಗುತ್ತದೆ. ಇಲ್ಲವೇ ಸೀಟು ಬಿಟ್ಟುಕೊಟ್ಟು ಎರಡನೇ ಸುತ್ತಿನ ಕೌನ್ಸೆಲಿಂಗ್ ಗೆ ಕಾಯಬೇಕು, ಸೀಟನ್ನು ಕಾಯ್ದಿರಿಸಿಕೊಳ್ಳುವಂತಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.

 ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಹೆಚ್ ಯು ತಲ್ವರ್, ವಿದ್ಯಾರ್ಥಿಗಳು ಈಗಾಗಲೇ ತಮ್ಮ ಆಯ್ಕೆಯ ಸೀಟುಗಳನ್ನು ಪಡೆದುಕೊಂಡು ಕಾಲೇಜಿನಲ್ಲಿ ಪ್ರವೇಶ ಪಡೆಯುವುದಿಲ್ಲ ಬದಲಾಗಿ ಎರಡನೇ ಸುತ್ತಿನ ಕೌನ್ಸೆಲಿಂಗ್ ವರೆಗೆ ತಮ್ಮ ಸೀಟನ್ನು ಕಾಯ್ದಿರಿಸುತ್ತಾರೆ. ಆದರೆ ಇನ್ನು ಮುಂದೆ ಹಾಗೆ ಮಾಡಲು ಸಾಧ್ಯವಿಲ್ಲ. ಮೊದಲನೇ ಸುತ್ತಿನಲ್ಲಿ ಸೀಟು ಆಯ್ಕೆ ಮಾಡಿಕೊಳ್ಳಬೇಕು ಇಲ್ಲವೇ ಆ ಸೀಟು ಇಷ್ಟವಿಲ್ಲದಿದ್ದರೆ ಹಿಂತಿರುಗಿಸಿ ಎರಡನೇ ಸುತ್ತಿಗೆ ಕಾಯಬೇಕು ಎಂದು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ ಎಸ್ ಸಚ್ಚಿದಾನಂದ, ಮೊದಲನೇ ಆಯ್ಕೆಯೆಂದರೆ ಸೀಟು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಇಷ್ಟವಾಗಿರುತ್ತದೆ ಎಂದರ್ಥ. ಹೀಗಾಗಿ ಮೊದಲ ಸುತ್ತಿನಲ್ಲಿಯೇ ಸರಿಯಾದ ಕಾಲೇಜು ಮತ್ತು ಕೋರ್ಸ್ ನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮತ್ತು ಕಾಲೇಜುಗಳ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತದೆ ಎನ್ನುತ್ತಾರೆ ಅವರು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com