ಬೆಂಗಳೂರು ಟ್ರ್ಯಾಫಿಕ್ ಪೊಲೀಸ್ ಫೇಸ್‏ಬುಕ್ ಪೇಜ್ ಗೆ ದೇಶದಲ್ಲೇ ಟಾಪ್ 3ರಲ್ಲಿ ಸ್ಥಾನ

ಸಾಮಾಜಿಕ ಜಾಲತಾಣವನ್ನು ಸದ್ಬಳಕೆ ಮಾಡಿಕೊಳ್ಳುತ್ತಿರುವ ಸರ್ಕಾರಿ ಸಂಸ್ಥೆಗಳ ಸಂಖ್ಯೆ ದಿನೇ ದಿನೇ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಾಮಾಜಿಕ ಜಾಲತಾಣವನ್ನು ಸದ್ಬಳಕೆ ಮಾಡಿಕೊಳ್ಳುತ್ತಿರುವ ಸರ್ಕಾರಿ ಸಂಸ್ಥೆಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರು ನಿರ್ವಹಿಸುತ್ತಿರುವ ಫೇಸ್ ಬುಕ್ ಪೇಜ್ ಈಗ ದೇಶದ ಟಾಪ್ ಮೂರರಲ್ಲಿ ಸ್ಥಾನ ಪಡೆದಿದೆ.
ಈ ಸಂಬಂಧ ಫೇಸ್ ಬುಕ್‌ ತಂಡ ಬೆಂಗಳೂರು ಟ್ರಾಫಿಕ್‌ ಪೊಲೀಸರಿಗೆ ಶುಭಾಶಯಗಳನ್ನು ಕಳುಹಿಸಿದೆ.
ದೇಶದ ವಿವಿಧ ರಾಜ್ಯಗಳ ಸರ್ಕಾರಿ ಇಲಾಖೆಗಳು, ವಿಭಾಗಗಳು, ರಾಜಕೀಯ ಪಕ್ಷಗಳ ಫೇಸ್ ಬುಕ್‌ ಪೇಜ್ ಕುರಿತು ಇತ್ತೀಚೆಗೆ ಡೇಟಾ ಬಿಡುಗಡೆ ಮಾಡಿದೆ. 
2017ರ ಜನವರಿ 1ರಿಂದ ಡಿಸೆಂಬರ್ 31ರ ಅವಧಿಯಲ್ಲಿ ಫೇಸ್ ಬುಕ್‌ ಪೇಜ್‌ಗಳ ಜನಪ್ರಿಯತೆ, ಪೇಜ್ ನಲ್ಲಿ ಸಾರ್ವಜನಿಕರ ಜತೆ ಸಂವಹನ, ಅದಕ್ಕೆ ಬರುವ ಪ್ರತಿಕ್ರಿಯೆಗಳು, ಶೇರ್‌ ಮತ್ತು ರೀಚ್‌ ಅನ್ನು ಮೌಲ್ಯಮಾಪನ ಮಾಡಲಾಗಿದೆ. 
ದೇಶದ ವಿವಿಧ ನಗರಗಳ ಟ್ರಾಫಿಕ್‌ ಪೊಲೀಸ್‌ ಪೇಜ್ ಗಳಲ್ಲಿ ಬೆಂಗಳೂರು ಟ್ರಾಫಿಕ್‌ ಪೊಲೀಸ್‌ ಪೇಜ್‌ ಟಾಪ್ ಮೂರರಲ್ಲಿ ಸ್ಥಾನ ಪಡೆದಿದೆ. 
ಇನ್ನು ಫೇಸ್ ಬುಕ್ ತಂಡದಿಂದ ಪ್ರಶಂಸೆ ಪಡೆದ ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ಉಪ ಮುಖ್ಯಮಂತ್ರಿ, ಗೃಹ ಸಚಿವ ಜಿ. ಪರಮೇಶ್ವರ ಅವರು ಶ್ಲಾಘಿಸಿದ್ದು, ಬೆಂಗಳೂರು ಸಿಟಿ ಪೊಲೀಸ್ ಮತ್ತು ಟ್ರಾಫಿಕ್ ಪೊಲೀಸ್ ಎರಡೂ ವಿಭಾಗಗಳು ಸಾಮಾಜಿಕ ತಾಣದಲ್ಲಿ ಸಕ್ರಿಯವಾಗಿವೆ. ಈ ಮೂಲಕ ಜನತೆಯೊಂದಿಗೆ ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com