ಉತ್ತರ ಕರ್ನಾಟಕದ ಸ್ವಾಮೀಜಿಗಳು ಸಮುದಾಯ ಒಡೆಯಲು ನೋಡುತ್ತಿದ್ದಾರೆ: ವೀರಶೈವರ ಆರೋಪ

ಚಾಮರಾಜನಗರ ಜಿಲ್ಲೆ ವೀರಶೈವ ಮಹಾಸಭಾ ಅಧ್ಯಕ್ಷ ಕೊಡಸೊಗೆ ಶಿವಬಸಪ್ಪ ಮತ್ತು ಇತರ ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಚಾಮರಾಜನಗರ ಜಿಲ್ಲೆ ವೀರಶೈವ ಮಹಾಸಭಾ ಅಧ್ಯಕ್ಷ ಕೊಡಸೊಗೆ ಶಿವಬಸಪ್ಪ ಮತ್ತು ಇತರ ವೀರಶೈವ ಕಾರ್ಯಕರ್ತರು ಲಿಂಗಾಯತ ಮಹಾಸಭಾ ಉದ್ಘಾಟನೆ ವಿರೋಧಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.

ಉತ್ತರ ಕರ್ನಾಟಕ ಭಾಗದ ಸ್ವಾಮೀಜಿಗಳು ವೀರಶೈವ-ಲಿಂಗಾಯತ ಸಮುದಾಯವನ್ನು ಇಬ್ಘಾಗ ಮಾಡಿ ರಾಜಕೀಯ ಪಕ್ಷಗಳ ಕೈಗೊಂಬೆಗಳಂತೆ ವರ್ತಿಸುತ್ತಾರೆ ಎಂದು ಆರೋಪಿಸಿದ ಕಾರ್ಯಕರ್ತರು ಶ್ರೀಗಳು ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜೆಎಸ್ಎಸ್ ಶ್ರೀಗಳಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಶಿವಕುಮಾರ ಸ್ವಾಮಿಗಳು ಈ ವಿಚಾರದ ಕುರಿತು ಮಾತನಾಡಬೇಕೆಂದು ಒತ್ತಾಯಿಸಿದರು. ತಲೆತಲಾಂತರಗಳಿಂದ ವೀರಶೈವ ಮತ್ತು ಲಿಂಗಾಯತ ಸಮುದಾಯಗಳು ಒಟ್ಟಿಗೆ ಇರುವಾಗ ನೀವು ಏಕೆ ಇಬ್ಘಾಗ ಮಾಡಿ ಸಮಾಜವನ್ನು ಒಡೆಯಲು ನೋಡುತ್ತೀರಿ ಎಂದು ಸಾಣೆಹಳ್ಳಿಯ ಶಿವಾಚಾರ್ಯ ಸ್ವಾಮಿಗಳನ್ನು ಕೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com